Janataa24 NEWS DESK

ಪಾವಗಡ: ತಾಲೂಕಿನ ನಾಗಲಮಡಿಕೆ ಯಿಂದ ಫ್ರೆಂಡ್ಲಿ ಜೀವಿ ರಸ್ತೆ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಿರುವ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿ ಕಳೆದ ಹಲವು ಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಆ ಭಾಗದ ಓಡಾಡುವ ವಾಹನ ಸವಾರುದಾರರಿಗೆ ಕಂಠಕವಾಗಿ ಮಾರ್ಪಟ್ಟಿದೆ.

ಕೆಲವೇ ದಿನಗಳ ಹಿಂದೆ ನಡೆದಂತಹ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳು ಓಡಾಡುವ ಅನುಕೂಲವಾಗಬೇಕೆಂಬುದಾಗಿ ತರಾತುರಿಯಲ್ಲಿ ಸೇತುವೆ ನಿರ್ಮಾಣ ಮಾಡಿ ಅದರ ಮೇಲೆ ಮಣ್ಣು ಹಾಕಿ ಬಿಟ್ಟಿದ್ದಾರೆ ಆದರೆ ವಾಹನಗಳು ಓಡಾಡಲು ಸರಾಗವಾಗಿ ಇಲ್ಲದ ಕಾರಣ ಪ್ರತಿದಿನ ವಾಹನಗಳು ಕೆಟ್ಟ ನಿಲ್ಲುತ್ತಿರುವುದು ಸ್ಥಳೀಯರಿಗೆ ಕಂಠಕವಾಗಿ ಮಾರ್ಪಟ್ಟಿದೆ.

ಇದರಿಂದ ಪ್ರತಿದಿನ ಆ ಭಾಗದಲ್ಲಿ ಓಡಾಡುವಂತ ವಾಹನ ಸವಾರರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಆ ಸೇತುವೆ ಕಾಮಗಾರಿ ಪೂರ್ಣಗೊಳಿಸಿ, ಆ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕಾಗಿ ಸ್ಥಳೀಯರು ಆರೋಪಿಸಿದ್ದಾರೆ.
ವರದಿ: ಇಮ್ರಾನ್ ಉಲ್ಲಾ.ಪಾವಗಡ