Document

ಕಳಪೆ ರಸ್ತೆ ಕಾಮಗಾರಿ ಆರೋಪ: ರೈತರ ಹೊಲದ ಮಣ್ಣು ಕದ್ದ ಗುತ್ತಿಗೆದಾರ

Janataa24 NEWS DESK

IMG 20240127 WA0001



ಪಾವಗಡ: ತಾಲೂಕಿನ ಗುಂಡಾರ್ನಳ್ಳಿ ಇಂದ ವೀರಗೊಂದಿ ಮಾರ್ಗವಾಗಿ ನೂತನವಾಗಿ ಹಾಕುತ್ತಿರುವ ಡಾಂಬರೀಕರಣ ರಸ್ತೆ ಅವೈಜ್ಞಾನಿಕ ರೀತಿಯಲ್ಲಿ ಹಾಕಲಾಗುತ್ತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಹೆಚ್ಚು ದಿನ ಬಾಳಿಕೆ ಮಾಡುವ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

IMG 20240127 WA0002



ರಸ್ತೆ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿಸಿದರೆ ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದೀರಾ ಎಂಬುದಾಗಿ ಸ್ಥಳೀಯ ವ್ಯೆಕ್ತಿ ಮೇಲೆ ಅವಾಜ್ ಹಾಕಿದ್ದ ಇಂಜಿನಿಯರ್..!

IMG 20240127 WA0003



ಹೊಸದಾಗಿ ಹಾಕುತ್ತಿರುವ ಡಾಂಬರೀಕರಣ ರಸ್ತೆಗೆ ರಸ್ತೆಯ ಅಕ್ಕಪಕ್ಕದಲ್ಲಿ ಪಕ್ಕದ ರೈತರ ಜಮೀನಿನಲ್ಲಿ ಮಣ್ಣು ತೆಗೆದು ಹಾಕಿ ಆ ಜಮೀನಲ್ಲಿರುವಂತಹ ಮರಗಳ ಬೇರುಗಳನ್ನು ಸಹ ಜೆಸಿಪಿ ಮೂಲಕ ಕಿತ್ತು ಹಾಕಿದ್ದಾರೆ ಎಂಬುದಾಗಿ ಸ್ಥಳೀಯ ರೈತರು ಆರಂಭಿಸಿದ್ದಾರೆ. ಇದರಿಂದ ರೈತರ ಕೆಂಗಣ್ಣಿಗೆ ಬಿದ್ದ ಗುತ್ತಿಗೆದಾರ.

IMG 20240127 WA0004



ಈಗಾಗಲೇ ಸ್ವಲ್ಪಮಟ್ಟಿಗೆ ಹೊಸದಾಗಿ ಆಗಿದ್ದು ರಸ್ತೆ ಎರಡು ಕಡೆ ಬದಿಗಳಲ್ಲಿ ಜಲ್ಲಿಗಳ ಹಾಕಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಓಡಾಡುವಂತಹ ದ್ವಿಚಕ್ರ ವಾಹನ ಸವಾರದಾರರು ಜೀವ ಕೈಲಿ ಹಿಡಿದು ಓಡಾಡುವ ಪರಿಸ್ಥಿತಿಯಾಗಿದೆ.

IMG 20240127 WA0000



ಈಗಾಗಲೇ ಹಲವು ಬಾರಿ ಈ ಭಾಗದ ಗ್ರಾಮಸ್ಥರು ರಸ್ತೆ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಸ್ಥಳೀಯ ಆರೋಪಿಸಿದ್ದಾರೆ.



ವರದಿ: ಇಮ್ರಾನ್ ಉಲ್ಲಾ ಪಾವಗಡ

Document

Leave a Reply

Your email address will not be published. Required fields are marked *