Document

Massage Swamij: ಮಸಾಜ್ ಪ್ರಿಯ ಸ್ವಾಮೀಜಿಗೆ ಕಾನೂನಿನ ಕಂಟಕ– ಮಕ್ಕಳ ಕಲ್ಯಾಣ ಸಮಿತಿಗೆ ದೂರು ಕೊಟ್ಟ ವಿದ್ಯಾರ್ಥಿಗಳು.

JANATAA24 NEWS DESK 

Massage Swamij: ಮಸಾಜ್ ಪ್ರಿಯ ಸ್ವಾಮೀಜಿಗೆ ಕಾನೂನಿನ ಕಂಟಕ– ಮಕ್ಕಳ ಕಲ್ಯಾಣ ಸಮಿತಿಗೆ ದೂರು ಕೊಟ್ಟ ವಿದ್ಯಾರ್ಥಿಗಳು.

Massage Swamij-Massage Priya Swamiji faces legal trouble – students file complaint with Child Welfare Committee.

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಚಾಟನೆಗೊಂಡಿರುವ ವಚನಾನಂದ ಶ್ರೀಗಳಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಹಾಸ್ಟೇಲ್ ವಿದ್ಯಾರ್ಥಿಗಳೇ ಅವರ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ.

 

ಇತ್ತೀಚಿಗೆ ವಚನಾನಂದ ಶ್ರೀಗಳನ್ನು ‘ಮಸಾಜ್ ಪ್ರಿಯ ಸ್ವಾಮೀಜಿ’ ಎಂದ ಟ್ರಸ್ಟಿ ಚಂದ್ರಶೇಖರ ಪೂಜಾರ್ ಅವರು ಗಂಭೀರ ಆರೋಪ ಮಾಡಿದ್ದು, ಇದರ ಬೆನ್ನಲ್ಲೇ ಹಾಸ್ಟೇಲ್‌ನ ಮೂವರು ಮಕ್ಕಳು ಶ್ರೀಗಳ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ.

 

ವಚನಾನಂದ ಸ್ವಾಮೀಜಿ ತಮಗೆ ಹಿಂಸೆ ನೀಡಿದ್ದಾರೆ ಎಂದು ಮಕ್ಕಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸಿಬ್ಬಂದಿ ಹಾಗೂ ಪೊಲೀಸರು ಮಠಕ್ಕೆ ಭೇಟಿ ನೀಡಿದ್ದಾರೆ. ಮಠದ ಆಪ್ತರು ಸೇರಿದಂತೆ ಇತರರನ್ನು ವಿಚಾರಣೆ ಮಾಡುತ್ತಿದ್ದಾರೆ.

 

ನಾವು 8 ವರ್ಷದ ಹಿಂದೆ ವಚನಾನಂದ ಶ್ರೀ ಪೀಠಾಧಿಪತಿಯನ್ನಾಗಿ ಮಾಡಿದ್ದೆವು. ಆದರೆ ಇತ್ತೀಚೆಗೆ ಅವರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು, ಅವುಗಳನ್ನ ಹಿರಿಯರ ಸಮ್ಮುಖದಲ್ಲಿ ತಿದ್ದೋಕೆ ನೋಡಿದ್ವಿ, ಆದರೆ ಅದು ಆಗದೆ ಇದ್ದಾಗ ಅವರನ್ನು ಪೀಠದಿಂದ ಉಚ್ಚಾಟನೆ ಮಾಡಿದ್ವಿ ಎಂದು ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಹೇಳಿದ್ದರು.

 

ಸ್ವಾಮೀಜಿ ಪುಟ್ಟ ಪುಟ್ಟ ಹಾಸ್ಟೇಲ್ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಆ ಮಕ್ಕಳ ತಂದೆ ತಾಯಿ ಪೋಕ್ಸೋ ಕೇಸ್ ಹಾಕ್ತೀವಿ ಅಂತ ಹೇಳುತ್ತಿದ್ದಾರೆ. ಪ್ರತಿನಿತ್ಯ ನಾಲ್ಕು ಮಕ್ಕಳನ್ನು ಸರದಿ ಸಾಲಿನಲ್ಲಿ ನಿಂತು ಮಸಾಜ್ ಮಾಡಲು ಕರೀತಾರೆ ಎಂದು ಚಂದ್ರಶೇಖರ್ ಪೂಜಾರ್ ಆರೋಪಿಸಿದ್ದರು.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *