Document

Pavagada: ಬಡತನ ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಿದ ಚಾಲಕನ ಮಗಳು– ಕಾವ್ಯಗೆ 600ಕ್ಕೆ 579 ಅಂಕ

JANATAA24 NEWS DESK 

 

Pavagada: ಬಡತನ ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಿದ ಚಾಲಕನ ಮಗಳು– ಕಾವ್ಯಗೆ 600ಕ್ಕೆ 579 ಅಂಕ.

 
Pavagada
 

ಪಾವಗಡ : ಬಡತನ, ತಂದೆಯ ಕಷ್ಟದ ದುಡಿಮೆ ಯಾವುದೂ ಆಕೆಯ ಪ್ರತಿಭೆಗೆ ಅಡ್ಡಿಯಾಗಲಿಲ್ಲ. ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಬೊಮ್ಮತನಹಳ್ಳಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕಾವ್ಯ ಸಾಬೀತುಪಡಿಸಿದ್ದಾರೆ.

 

ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾವ್ಯ 600 ಅಂಕಗಳಿಗೆ 579 ಅಂಕಗಳನ್ನು ಪಡೆಯುವ ಮೂಲಕ ಗ್ರಾಮಕ್ಕೆ ಮತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

 

ಕಾವ್ಯ ಅವರ ತಂದೆ ರವಿಕುಮಾರ್ ಅವರು ವೃತ್ತಿಯಲ್ಲಿ ಕಾರು ಚಾಲಕರು. ಸ್ವಂತ ಕಾರು ಮತ್ತು ಬೇರೆಯವರ ಕಾರನ್ನು ಬಾಡಿಗೆಗೆ ಓಡಿಸುತ್ತಾ ಕುಟುಂಬದ ಹೊರೆ ಹೊತ್ತಿದ್ದಾರೆ. ಹಗಲಿರುಳು ರಸ್ತೆಯಲ್ಲಿ ಗಾಡಿ ಓಡಿಸಿ ಬಂದ ಹಣದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದರು. ತಂದೆಯ ಶ್ರಮವನ್ನು ಕಣ್ಣಾರೆ ಕಂಡಿದ್ದ ಕಾವ್ಯ, ಆ ಶ್ರಮಕ್ಕೆ ಸಾರ್ಥಕತೆ ತರಲೇಬೇಕೆಂದು ನಿರ್ಧರಿಸಿ ಓದಿನಲ್ಲಿ ಮಗ್ನರಾಗಿದ್ದರು.

ತನ್ನ ಸಾಧನೆಯ ಬಗ್ಗೆ ಮಾತನಾಡಿದ ಕಾವ್ಯ, “ನಮ್ಮ ತಂದೆ ನನಗಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಅವರು ಬಾಡಿಗೆಗೆ ಕಾರು ಓಡಿಸಿ ತರುತ್ತಿದ್ದ ಹಣದಲ್ಲಿ ನನ್ನ ಫೀಸ್ ಕಟ್ಟುತ್ತಿದ್ದರು. ಅವರಿಗೆ ಗೌರವ ತರಬೇಕು ಎಂಬ ಹಂಬಲ ನನಗಿತ್ತು. ಪರೀಕ್ಷೆಗಾಗಿ ಪ್ರತಿದಿನ 8 ರಿಂದ 10 ಗಂಟೆಗಳ ಕಾಲ ಶಿಸ್ತಿನಿಂದ ಅಭ್ಯಾಸ ಮಾಡುತ್ತಿದ್ದೆ. ಉಪನ್ಯಾಸಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲ ಈ ಅಂಕಗಳನ್ನು ಗಳಿಸಲು ಸಹಕಾರಿಯಾಯಿತು,” ಎಂದು ಹರ್ಷ ವ್ಯಕ್ತಪಡಿಸಿದರು

 

ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ಸೀಮಿತ ಸೌಲಭ್ಯಗಳ ನಡುವೆ ಇಷ್ಟೊಂದು ದೊಡ್ಡ ಮೊತ್ತದ ಅಂಕಗಳನ್ನು ಗಳಿಸಿರುವುದು ಬೊಮ್ಮತನಹಳ್ಳಿ ಗ್ರಾಮಕ್ಕೆ ಹೆಮ್ಮೆ ತಂದಿದೆ. ಗ್ರಾಮದ ಪ್ರಮುಖರು ಕಾವ್ಯ ಅವರನ್ನು ಅಭಿನಂದಿಸಿದರು. ಕಾವ್ಯ ಅವರ ಈ ಯಶಸ್ಸು ಗ್ರಾಮೀಣ ಭಾಗದ ಇತರೆ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ.

 

ವರದಿ :ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *