Document

ತುಮಕೂರು ಲೋಕಸಭಾ ಭಾಜಪ, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ:ಡಾ. ಎಸ್ ಪರಮೇಶ್.

Janataa24 NEWS DESK



ಗುಬ್ಬಿ: ತಾಲೂಕಿನ ಹಾಗಲವಾಡಿ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಶ್ರೀ ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು .

IMG 20240128 WA0002



ಜಿಲ್ಲಾ ಭಾ ಜ ಪ ಖಜಾಂಚಿ ಸಿದ್ದಗಂಗಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ, ಎಸ್ ಪರಮೇಶ್ ಮಾತನಾಡಿ ಶ್ರೀ ಸಿದ್ದಗಂಗಾ ಆಸ್ಪತ್ರೆಯು ಸ್ಥಾಪನೆಯಾಗಿ ಏಳು ವರ್ಷ ಕಳೆದಿದೆ.
ಸತತ ಏಳು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗುತ್ತಿದೆ.



ಇದರ ಉದ್ದೇಶವೆಂದರೆ :
ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಗ್ರಾಮೀಣ ಭಾಗದ ಜನರು ನಗರಗಳಿಗೆ ತೆರಳಿ ಆರೋಗ್ಯ ತಪಾಸಣ ಮಾಡಿಸಿಕೊಳ್ಳುವುದು ಕಷ್ಟಕರವಾದ ಸಂಗತಿಯಾಗಿದೆ.
ಹಾಗಾಗಿ ಶ್ರೀ ಸಿದ್ದಗಂಗಾ ಆಸ್ಪತ್ರೆಯ ಆಸ್ಪತ್ರೆಯ ನುರಿತ ವೈದ್ಯರು ಹಲವು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮೀಣ ಭಾಗದ ಜನರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಹೆಚ್ಚಿನ ಚಿಕಿತ್ಸೆ ಪಡೆಯುವವರು ಉಚಿತವಾಗಿರುತ್ತದೆ.
ಕಣ್ಣಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯು ಉಚಿತವಾಗಿರುತ್ತದೆ.

ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ 400 ಹಾಸಿಗೆಯುಳ್ಳ ಉನ್ನತ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

IMG 20240128 WA0001



ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯು ಕೂಡ ಆಗಿದ್ದೇನೆ. ರಾಷ್ಟ್ರೀಯ ಸ್ವಯಂಸೇವಾ ಸಂಘದಲ್ಲಿ ವಿದ್ಯಾಭ್ಯಾಸ ಮಾಡಿ
ಸುಮಾರು 40 ವರ್ಷಗಳ ಕಾಲದಿಂದಲೂ ಬಿಜೆಪಿ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿದ್ದೇನೆ.
ಕಳೆದ ಐದು ವರ್ಷಗಳಿಂದ ಭಾಜಪ ಜಿಲ್ಲಾ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ವೃತ್ತಿಯಲ್ಲಿ ವೈದ್ಯನಾಗಿದ್ದು. ಅನೇಕ ಸಮಾಜ ಸೇವೆಯಲ್ಲಿ ತೊಡಗಿ ಜನಾನುರಾಗಿದ್ದೇನೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಒಂದು ಹೊಸ ಅಲೆ ಪ್ರಾರಂಭವಾಗಿದೆ
ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ನಾನು ಸಹ ಇದ್ದೇನೆ ಎಂದು ತಿಳಿಸಿದರು.

ಇದೇ ವೇಳೆಯಲ್ಲಿ ಸುತ್ತಮುತ್ತಲಿನ ಗ್ರಾಮದವರು ಸಾವಿರಾರು ಸಂಖ್ಯೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಲು ಆಗಮಿಸಿದ್ದರು.



ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ ನವೀನ್, ಡಾ. ರೇಖಾ, ಡಾ ಕಾಂತರಾಜು, ಡಾ ಕುಸುಮ,ಡಾ. ರಾಜೀವ್, ಡಾ. ಚೇತನ್ ಕುಮಾರ್ ಇತರರು ಹಾಜರಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *