Janataa24 NEWS DESK

ಪಾವಗಡ
ಮುಸ್ಲಿಂ ಸಮುದಾಯಕ್ಕೆ ತಹಶಿಲ್ದಾರ್ ಕೆ.ಎಸ್.ಸುಜಾತ ರವರಿಂದ ಹಬ್ಬದ ಶುಭಾಶೆ ಕೋರಿದರು.

ಪಾವಗಡ ಪಟ್ಟಣದಲ್ಲಿ ಶನಿವಾರ ಮುಸ್ಲಿಂ ಸಮುದಾಯದಿಂದ ಈದ್ ಉಲ್ ಫಿತರ್ ಹಬ್ಬ ಶಾಂತಿ ಹಾಗೂ ಸಡಗರಿಂದ ಆಚರಣೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಎಂಟು ಮಸೀದಿ ಗಳಿಂದ ಸಮುದಾಯದ ಮುಖಂಡರುಗಳು ಸೇರಿ ಪಶುವೈದ್ಯ ಇಲಾಖೆಯ ಹತ್ತಿರ ಎಲ್ಲರೂ ಸೇರಿ ಅಲ್ಲಿಂದ ಪ್ರಮುಖ ರಸ್ತೆಯಿಂದ ಈದ್ಗ್ ಮೈದಾನ ಸೇರಿ ಈದ್ ಉಲ್ ಫಿತರ್ ನಮಾಜ್ ಪೂರೈಸಿದರು.
ನಂತರ ಒಬ್ಬರಿಗೊಬ್ಬರು ಹಬ್ಬದ ಶುಭಾಶೆಯಗಳು ಹಂಚಿಕೊಳ್ಳವು ಮೂಲಕ ರಂಜಾನ್ ಆಚರಣೆ ಮಾಡಿಕೊಂಡರು.
ಇದೇ ವೇಳೆ ತಹಶಿಲ್ದಾರ್ ಕೆ.ಎಸ್.ಸುಜಾತ ರವರು ಈದ್ಗ್ ಮೈದಾನದ
ಬೇಟೆ ನೀಡಿ ಮುಸ್ಲಿಂ ಸಮುದಾಯಕ್ಕೆ ರಂಜಾನ್ ಹಬ್ಬದ ಶುಭಾಶೆಯಗಳು ಕೋರಿದರು.

ನಂತರ ಮಾತನಾಡಿ ನಿವುಗಳು ಒಂದು ತಿಂಗಳು ಕಾಲ ಉಪವಾಸ ಇದ್ದು ತಮ್ಮ ಮನಸ್ಸು ಸ್ವಚ್ಛ ಮಾಡಿಕೊಂಡಿರುತ್ತಿರಾ.ಅದೇ ಸ್ವಚ್ಛ ಮನಸಿನಿಂದ ಈ ಭಾಗದಲ್ಲಿ ಎಲ್ಲಾ ಸಮುದಾಯದವರು ಅಣ್ಣ ತಮ್ಮಂದಿರಂತೆ ಜೀವನ ಕಳೆಯುತ್ತಿದ್ದಿರಾ ಹೀಗೆ ಸದಾ ಎಲ್ಲರೂ ಒಗ್ಗೂಡಿಸಿ ಜೀವನ ನಡೆಸಲು ಆ ದೇವರಲ್ಲಿ ನಾನು ಸಹ ಪ್ರಾರ್ಥನೆ ಸಲ್ಲಿಸುತ್ತೆನೆ ಎಂದರು.

ಬರುವ ಮೇ 10ರಂದು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ ಎಂದರು.
ಇದೇ ವೇಳೆ ಸರ್ವಧಮ ಪೀಠದ ರಾಮ್ ಮೂರ್ತಿ ಸ್ವಾಮೀಜಿ ಮಸೀದಿಗೆ ಭೇಟಿ ನೀಡಿ ಮಸೀದಿ ಮುಖ್ಯಸ್ಥರಿಗೆ ಕನ್ನಡ ಹಾಗೂ ತೆಲುಗು ಮಾದರಿಯ ಕುರಾನ್ ಅನ್ನು ನೀಡಿ ರಂಜಾನ್ ಹಬ್ಬದ ಶುಭಾಶಯಗಳು ಕೋರಿದ್ದು ವಿಶೇಷವಾಗಿತ್ತು.

ಈ ವೇಳೆ ಜಾಮೀಯ ಮಸೀದಿಯ ಮಾತುವಲ್ಲಿ ಲತೀಪ್ ಸಾಬ್.ಮಾಜಿ ಮುತವಲ್ಲಿ ಫಜ್ಲುಸಾಬ್.ಆರ್.ಕೆ.ನಿಸಾರ್.ಅನ್ವರ್ ಸಾಬ್.ಹೋಟಲ್ ಸಾದೀಕ್.ಸಮೀಉಲ್ಲ.ಆರ್.ಟಿ.ಖಾನ್.ರಿಜ್ವಾನ್ ಉಲ್ಲಾ.ಷ ಬಾಬು.ಇತರೆ ಮುಸ್ಲಿಂ ಮುಖಂಡ ಭಾಗವಹಿಸಿದರು.ಇದೇ ವೇಳೆ ಸಮುದಾಯದ ವತಿಯಿಂದ ತಹಶಿಲ್ದಾರ್ ಸುಜಾತಾ ಅವರಿಗೆ ಗೌರವಿಸಲಾಯಿತು.ಈದ್ ಉಲ್ ಫಿತರ್ ನಾಮಾಜಿಗೆ ಬಂದಂತಹ ಜನರಿಗೆ ತಣ್ಣನೆಯ ನೀರಿನ ವ್ಯವಸ್ಥೆ ಮಾಡಿದ್ದ ಗ್ರಾನೈಟ್ ಅಂಗಡಿ ಮಾಲಿಕ ಶಪೀ ಆಯೋಜನೆ ಮಾಡಿದ್ದರು.

ಈ ರಂಜಾನ್ ಹಬ್ಬಕ್ಕೆ ತಾಲೂಕಿನ ಮುಸ್ಲಿಂ ಸಮುದಾಯಕ್ಕೆ ಸ್ಥಳೀಯ ಮಾಜಿ ಶಾಸಕ ಹಾಲಿ ಶಾಸಕ ವೆಂಕಟರಮಣಪ್ಪ .ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್.
ವಕೀಲ ನಾಗೇಂದ್ರಪ್ಪ. ಮಾಜಿ ಸೋಮ್ಲಾನಾಯ್ಕ್.ನೇರಳೆಕುಂಟೆ ನಾಗೇಂದ್ರ. ಕೃಷ್ಣನಾಯ್ಕ್. ಗಾಯತ್ರಿ ಬಾಯಿ.ಇತರೆ ಅನೇಕ ಮುಖಂಡರು ಶುಭಾಶೆಯಗಳು ಕೋರಿದ್ದಾರೆ.
ವರದಿ
ಪಾವಗಡ:ಇಮ್ರಾನ್ ಉಲ್ಲಾ.