Document

ಡಾ| ಬಿ ಆರ್ ಅಂಬೇಡ್ಕರ್ ರವರು ಒಂದು ಜಾತಿ ಜನಾಂಗಕ್ಕೆ ಸೀಮಿತರಲ್ಲ ಇಡೀ ವಿಶ್ವಕ್ಕೆ ಸೀಮಿತರು

Janataa24 NEWS DESK

ಡಾ| ಬಿ ಆರ್ ಅಂಬೇಡ್ಕರ್ ರವರು ಒಂದು ಜಾತಿ ಜನಾಂಗಕ್ಕೆ ಸೀಮಿತರಲ್ಲ ಇಡೀ ವಿಶ್ವಕ್ಕೆ ಸೀಮಿತರು ಎಂದು ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್ ತಿಳಿಸಿದರು.

IMG 20230414 WA0016



ಗುಬ್ಬಿ : ತಾಲೂಕಿನ ನಿಟ್ಟೂರಿನಲ್ಲಿ ಆಯೋಜಿಸಲಾಗಿದ್ದ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ132 ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಬಾಲ್ಯದಿಂದಲೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಅನೇಕ ನೋವು ನಲಿವುಗಳನ್ನು ಅನುಭವಿಸಿ ಸಂವಿಧಾನ ರಚಿಸಿದ ಮಹಾನ್ ಪುರುಷ.
ಕಾಂಗ್ರೆಸ್ ಸರ್ಕಾರವು ಅವರಿಗೆ ಅನೇಕ ನೋವುಗಳನ್ನುಂಟು ಮಾಡಿತ್ತು.

IMG 20230414 WA0017



ಕಳೆದ 50 ವರ್ಷಗಳಿಂದ ಒಳ ಮೀಸಲಾತಿ ಜಾರಿ ಮಾಡದೆ ದಲಿತ ಜನಾಂಗದವರಿಗೆ ಅನ್ಯಾಯ ಮಾಡಿದ್ದಾರೆ. ಆದರೆ ಈಗಿನ ರಾಜ್ಯ ಸರ್ಕಾರವು ಗೋವಿಂದ ಕಾರಜೋಳ ಹಾಗೂ ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಯವರು ಕಾನೂನು ಸಚಿವರಾದ ಮಾಧುಸ್ವಾಮಿಯವರಿಗೆ ಎ ಜೆ ಸದಾಶಿವ ಆಯೋಗ ವರದಿಯನ್ನು ನೀಡಿ ನಿಮ್ಮ ನೇತೃತ್ವದಲ್ಲಿ ನ್ಯಾಯ ಒದಗಿಸಿ ಕೊಡಬೇಕೆಂದು ತಿಳಿಸಿದ್ದರು.
ಅದರಂತೆ ನ್ಯಾಯಯುತವಾಗಿ ಪರಿಶೀಲಿಸಿ ರಾಜ್ಯ ಸರ್ಕಾರದ ಮುಖಂಡರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು ಎಂದು ತಿಳಿಸಿದರು.

IMG 20230414 WA0018



ನಂತರ ತನ್ನ ಬಾಲ್ಯವನ್ನು ನೇನದು ನಾನು ಚಿಕ್ಕ ವಯಸ್ಸಿನಲ್ಲಿ ನನಗೆ ಕೈ ತುತ್ತು ನೀಡಿ ಲಾಲನೆ ಪಾಲನೆ ಮಾಡಿ ಪೋಷಿಸಿದವರು ದಲಿತ ಕುಟುಂಬದವರು ಹಾಗಾಗಿ ನನಗೂ ಅವರಿಗೂ ಅವಿನವ ಭಾವ ಸಂಬಂಧ ಹಾಗಾಗಿ ಅಂಬೇಡ್ಕರ್ ರವರು ಇಡೀ ವಿಶ್ವಕ್ಕೆ ಸೀಮಿತರು ಎಂದು ತಿಳಿಸಿದರು



ದಲಿತ ಮುಖಂಡ ಕೀರ್ತಿ ಮಾತನಾಡಿ ಅಂಬೇಡ್ಕರ್ ರವರು ಅನೇಕ ನೋವುಗಳನ್ನು ಅನುಭವಿಸುದ್ದಾರೆ. ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ವಿಧಿವಶರದಾಗ ಅವರ ಶಾಂತಿ ಗೃಹಕ್ಕೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ ಅವರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅನೇಕ ನೋವು ನಿಂದನೆಗಳನ್ನು ಎದುರಿಸಬೇಕಾಯಿತು. ದಲಿತರು ವಿಚಾರವಂತರಾಗಬೇಕು ಬುದ್ಧಿಜೀವಿಗಳಗಬೇಕು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ಧಾಂತದಂತೆ ಶಿಕ್ಷಣ ಸಂಘಟನೆ ಹೋರಾಟ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ.ಶಿವಸ್ವಮಿ, ಎನ್ಎಸ್ ಜಗನ್ನಾಥ್, (ನಿಟ್ಟೂರ್ )ಬಿ ಎಚ್
ಕಾವಲ್ ರಘು, ಹಮ್ನಳ್ಳಿ ಮೋಹನ್ ಕುಮಾರ್, ಗಂಗಾರಂ,ಅಶೋಕ್, ಶಂಕ್ರಣ್ಣ ಮನು,ಮಾರಶೆಟ್ಟಿಹಳ್ಳಿ ಬಸವರಾಜು ಹಾಗೂ ದಲಿತ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *