Document

ಗುಬ್ಬಿ. ಜೆ ಡಿ ಎಸ್ ಭದ್ರಕೋಟೆಗೆ ಎಚ್ ಡಿ ಕುಮಾರಸ್ವಾಮಿಯವರು ಆಗಮನ.

Janataa24:NEWS DESK

ನಾಳೆ ಗುಬ್ಬಿ ಜೆ ಡಿ ಎಸ್ ಭದ್ರಕೋಟೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗಮನ

IMG 20230414 WA0007


ಗುಬ್ಬಿ :
ತಾಲ್ಲೂಕಿನ ಜೆಡಿಎಸ್ ಅಭ್ಯರ್ಥಿಯಾದ ಬಿಎಸ್ ನಾಗರಾಜ್ ರವರು ತಮ್ಮ ಜೆಡಿಎಸ್ ಕಚೇರಿಯಲ್ಲಿ ಅಂಬೇಡ್ಕರ್ ಅವರ 132ನೇ ಜಯಂತೋತ್ಸವದ ಅಂಗವಾಗಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸುದ್ದಿಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಯ 11:00 ಗಂಟೆಗೆ ಮಾಜಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಹೆಲಿಕಾಪ್ಟರ್ ಮೂಲಕ ಗುಬ್ಬಿಗೆ ತಲುಪಲಿದ್ದಾರೆ. ಈ ವೇಳೆ ಸುಮಾರು 20ರಿಂದ 30,000 ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಕುಮಾರಣ್ಣನ ಆಗಮನದ ನಂತರ ಗುಬ್ಬಿ ಚನ್ನಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಸಾವಿರಾರು ಅಭಿಮಾನಿಗಳ ಜೊತೆ ಗುಬ್ಬಿ ತಾಲ್ಲೂಕು ಕಚೇರಿಗೆ ನಾಮಪತ್ರ ಅರ್ಜಿ ಸ್ವೀಕೃತ ಸಲ್ಲಿಸುತ್ತೇವೆ ಎಂದು ತಿಳಿಸಿದರು.

IMG 20230414 WA0006


ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕ ಈರಯ್ಯ, ಮುಖಂಡರಾದ ಯೋಗಾನಂದ ಕುಮಾರ್, ರಘು, ಪ್ರೇಮ್ ಕುಮಾರ್, ಇತರರು ಹಾಜರಿದ್ದರು.

Document

Leave a Reply

Your email address will not be published. Required fields are marked *