Janataa24 NEWS DESK
ಪಾವಗಡ
ಇಂದು ಈದ್-ಉಲ್-ಫಿತರ್ ಅಚರಣೆ
ಪಾವಗಡ ಮುಸ್ಲಿಮರ ಪವಿತ್ರ ಹಬ್ಬವೆಂದೆ ಖ್ಯಾತಿ ಹೊಂದಿರುವ ರಂಜಾನ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇಸ್ಲಾಮಿಕ್ ಕ್ಯಾಲೆಂಡರ್ನಲ್ಲಿ 9ನೇ ತಿಂಗಳನ್ನು ರಂಜಾನ್ ತಿಂಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಈ ತಿಂಗಳ 30 ದಿನ ಮುಸ್ಲಿಮರು ಬೆಳಿಗ್ಗೆಯಿಂದ ಸಂಜೆವರೆಗೆ ಉಪವಾಸವಿದ್ದು, ತಮ್ಮ ಹಿಂದಿನ ಪಾಪವನ್ನು ದೂರ ಮಾಡಿಕೊಳ್ಳಲು ಅಲ್ಲಹನನ್ನು ಕ್ಷಮೆ ಕೋರುತ್ತಾರೆ. ರಂಜಾನ್ ತಿಂಗಳು ಮುಗಿದು ಶವ್ವಾಲ್ ತಿಂಗಳ ಆರಂಭದ ಮೊದಲ ದಿನವೇ ಈದ್-ಉಲ್-ಫಿತರ್ ಅನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ.

ಇಂದು ಸತತ ಒಂದು ತಿಂಗಳಕಾಲ ಉಪವಾಸ ಮುಗಿಸಿ,ತಿಂಗಳೆಲ್ಲಾ ಕುರಾನ್ ಪಟಿಸಿ ತಾರಾವೇ ನಮಾಜ್ ಮುಗಿಸಿ ನಂತರ ಐದು ವೇಳೆ ಸತತ ನಮಾಜ್ ಮಾಡುತ್ತಾರೆ.ಆ ಒಂದು ತಿಂಗಳಲ್ಲಿ ಐದು ತಾಕರಾತ್ ಅಂದರೆ ಇಡೀ ರಾತ್ರಿ ಜಾಗರಣೆ ಮಾಡಿ ಅಲ್ಲಾಹನ ವಿಚಾರದಾರೆಗಳು ಪಟಿಸುತ್ತಾರೆ. ಈ ಐದು ರಾತ್ರಿಯಲ್ಲಿ ಮನುಷ್ಯನು ತಮ್ಮ ಪಾಪಗಳನ್ನು ತೊಳೆದು ಹಾಕಲು ಹೀಡಿ ರಾತ್ರಿ ದೇವರಲ್ಲಿ ನಮಾಜ್ ಮಾಡುವ ಮೂಲಕ ದೇವರಲ್ಲಿ ಕ್ಷಮೆ ಕೋರಿದರೆ ಆತನ ಪಾಪಗಳು ಕ್ಷಮೆ ಗೊಳ್ಳುತ್ತವೇ ಎಂಬುದು ಅರ್ಥ.

ಇಸ್ಲಾಮಿಕ್ ಕ್ಯಾಲೆಂಡರ್ನ ಪ್ರಕಾರ ಶವ್ವಾಲ್ ಅಮಾವಾಸ್ಯೆಯನ್ನು ನೋಡುವುದರೊಂದಿಗೆ ಒಂದು ತಿಂಗಳ ಕಾಲ ಮಾಡಿದ ಉಪವಾಸದ ಅವಧಿಯು ಕೊನೆಗೊಳ್ಳುತ್ತದೆ ಮತ್ತು ರಂಜಾನ್ನ ಕೊನೆಯ ದಿನದಂದು ಅರ್ಧ ಚಂದ್ರಾಕಾರವನ್ನು ನೋಡಿದ ನಂತರ ಈದ್-ಉಲ್-ಫಿತರ್ ಆಚರಣೆ ಮಾಡಲಾಗುತ್ತದೆ. ಈದ್-ಉಲ್-ಫಿತರ್ ಅನ್ನು ಉಪವಾಸ ಮುರಿಯುವ ಹಬ್ಬ ಎಂದು ಕೂಡ ಕರೆಯಲಾಗುತ್ತದೆ.

ರಂಜಾನ್ ಹಬ್ಬವನ್ನು ಸೌದಿ ಅರೇಬಿಯಾ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಚಂದ್ರನನ್ನು ಯಾವಾಗಲೂ ಮೊದಲು ನೋಡಲಾಗುತ್ತದೆ. ಈ ವರ್ಷ ಈದ್ ಮಾರ್ಚ್ 24ಸಂಜೆ ಚಂದ್ರ ನೋಡಿ ಪ್ರಾರಂಭವಾಗಿ ಏಪ್ರಿಲ್ 21 ಉಪವಾಸ ಕೊನೆ ಕೊಂಡು 22 ರಂದು ಈದುಲ್ ಫಿತರ್ ಆಚರಣೆಗೆ ಮುಂದಾಗುತ್ತಾ ಇರುತ್ತದೆ. ಅದರಂತೆ ಇಂದು ಮುಸ್ಲಿಮ್ರು ಈದ್ ಆಚರಣೆ ಮಾಡುತ್ತಾರೆ.
ಇತಿಹಾಸ
ಇಸ್ಲಾಂ ಧರ್ಮದ ಪ್ರಕಾರ, ರಂಜಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಪ್ರವಾದಿ ಮುಹಮ್ಮದ್ ಬಹಿರಂಗಪಡಿಸಿದರು ಎಂದು ನಂಬಲಾಗಿದೆ. ಈದ್ ಇಸ್ಲಾಮಿಕ್ ಪ್ರಾರ್ಥನೆಯ ಮೂಲಕ ಆರಂಭವಾಗುತ್ತದೆ. ಈ ಪ್ರಾರ್ಥನೆಯ ನಂತರ ಧರ್ಮೋಪದೇಶ ನಡೆಯುತ್ತದೆ. ಬಳಿಕ ಮುಸ್ಲಿಮರು ಅಲ್ಲಾಹನನ್ನು ಕ್ಷಮೆ, ಕರುಣೆ, ಶಾಂತಿ ಕೋರುತ್ತಾರೆ, ಮತ್ತು ಇದು ದೇವರ ಆರ್ಶೀವಾದ ಪಡೆಯಲು ಇರುವ ಮಾರ್ಗ ಎಂದು ನಂಬಲಾಗಿದೆ.

ಆಚರಣೆಗಳು
ಈದ್-ಉಲ್-ಫಿತರ್ ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥನೆ ಮತ್ತು ಧರ್ಮೋಪದೇಶಗಳಿಗೆ ಹಾಜರಾಗುತ್ತಾರೆ. ಈ ದಿನ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತಿಂಗಳ ಉಪವಾಸದ ನಂತರ ತಾವು ಇಷ್ಟಪಟ್ಟಂತೆ ತಿನ್ನಲು ಮುಕ್ತರಾಗಿದ್ದಾರೆ. ಪ್ರತಿ ಮನೆಯಲ್ಲೂ ಪುಲಾವ್, ಸಲಾನ್, ಬಿರಿಯಾನಿ, ಹಲೀಮ್, ನಿಹಾರಿ, ಚಾಪ್ಲಿ ಕಬಾಬ್, ಕೋಫ್ಟೆ ಮತ್ತು ಇನ್ನು ಹೆಚ್ಚು ರುಚಿಕರವಾದ ಆಹಾರವನ್ನು ಸಿದ್ಧಪಡಿಸುತ್ತಾರೆ.

ಸಿಹಿ ತಿಂಡಿಗಳಾದ ಸೆವಿಯನ್, ಸಂಪೂರ್ಣ ಕೊರ್ಮಾ (ಹಾಲಿನಲ್ಲಿ ಬೇಯಿಸಿದ ಸಿಹಿಯಾದ ಪದಾರ್ಥ), ಶಾಹಿ ತುಕ್ಡಾ ಮತ್ತು ರೋಸ್ ಶರ್ಬತ್ ಕುಟುಂಬ ಸದಸ್ಯರು, ಅತಿಥಿಗಳು ಮತ್ತು ಬಾಂಧವರಿಗೆ ನೀಡಲಾಗುತ್ತದೆ. ಮುಸ್ಲಿಮರು ಈ ದಿನದಂದು ಹೊಸ ಬಟ್ಟೆ ಧರಿಸುತ್ತಾರೆ. ಈದ್ ಮುಬಾರಕ್ ಶುಭಾಶಯಗಳೊಂದಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಸ್ವಾಗತಿಸುತ್ತಾರೆ. ಈ ಸಂದರ್ಭದಲ್ಲಿ ಉಡುಗೊರೆಗಳು, ಆಹಾರ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಮಕ್ಕಳಿಗೆ ಹಿರಿಯರಿಂದ ಈಡಿ ಎಂದು ಕರೆಯಲ್ಪಡುವ ಹಣ ಮತ್ತು ಉಡುಗೊರೆಗಳನ್ನು ನೀಡಲಾಗುತ್ತದೆ.

ಈ ರಂಜಾನ್ ಹಬ್ಬಕ್ಕೆ ನಾಡಿನ ಮುಸ್ಲಿಂ ಸಮುದಾಯಕ್ಕೆ ಸ್ಥಳೀಯ ಮಾಜಿ ಶಾಸಕ ಹಾಲಿ ಶಾಸಕ ವೆಂಕಟರಮಣಪ್ಪ .ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್.
ವಕೀಲ ನಾಗೇಂದ್ರಪ್ಪ. ಮಾಜಿ ಶಾಸಕ ಸೋಮ್ಲಾನಾಯ್ಕ್.ನೇರಳೆಕುಂಟೆ ನಾಗೇಂದ್ರ. ಕೃಷ್ಣನಾಯ್ಕ್. ಗಾಯತ್ರಿ ಬಾಯಿ.ಇತರೆ ಹಲವು ಗಣ್ಯರು ಶುಭಾಶಯಗಳು ಕೋರಿದರು.
ವರದಿ
ಪಾವಗಡ:ಇಮ್ರಾನ್ ಉಲ್ಲಾ