Document

ವಿಶೇಷ ವಿಕಲ ಚೇತನರಿಗೆ ಮತದಾನದ ಅರಿವು ಕಾರ್ಯಕ್ರಮ.

Janataa24 NEWS DESK

ತುರುವೇಕೆರೆ

ವಿಶೇಷ ವಿಕಲ ಚೇತನರಿಗೆ ಮತದಾನದ ಅರಿವು ಕಾರ್ಯಕ್ರಮ.

ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಇಂದು ವಿಶೇಷ ವಿಕಲ ಚೇತನರಿಗಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕರಾದ ಸತೀಶ್ ಅವರ ನೇತೃತ್ವದಲ್ಲಿ ಮತದಾನದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

P IMG 20230421 WA0062

ಇದೇ ವೇಳೆ ಮಾತನಾಡಿದ ಅವರು ಬಹಳ ಮುಖ್ಯವಾಗಿ ಈ ಬಾರಿ ವಿಶೇಷ ವಿಕಲಚೇತನರಿಗೆ ವಿಶೇಷವಾದ ಸೌಲಭ್ಯ ಕೊಟ್ಟು ಮತದಾನ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಅದರಲ್ಲಿ ಮುಖ್ಯವಾಗಿ ಬೂದುಗನ್ನಡಿ ಸೌಲಭ್ಯ, ವೀಲ್ ಚೇರ್ ವ್ಯವಸ್ಥೆ, ಆಟೋ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು.

P IMG 20230421 WA0060 1

ಮನೆಯಲ್ಲಿ ಮತದಾನ ಮಾಡಲು ವಿಶೇಷ ವಿಕಲಚೇತನರಿಗೆ 12 D ನಮೂನೆಯ ಅರ್ಜಿಯನ್ನು ತೆಗೆದುಕೊಂಡು ಭರ್ತಿ ಮಾಡಿ, ಅದನ್ನ ಈಗಾಗಲೇ ಸ್ವೀಕಾರ ಮಾಡಿ ಮತದಾನ ಮಾಡಲು ಎಲ್ಲಾ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಹೇಳಿದರು

P IMG 20230421 WA0061

ಈ ಸಂದರ್ಭದಲ್ಲಿ ಮಾಯಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್, ತಾಲೂಕು ಪಂಚಾಯಿತಿ ಎಂ ಆರ್‌ ಡಬ್ಲ್ಯೂ, ಮಾಯಸಂದ್ರ ಹೋಬಳಿಯ ವಿ ,ಆರ್, ಡಬ್ಲ್ಯೂ, ಹಾಗೂ ಅನೇಕ ವಿಶೇಷ ವಿಕಲಚೇತನ ಬಂಧುಗಳು ಹಾಜರಿದ್ದರು.

P IMG 20230421 WA0063

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *