JANATAA24 NEWS DESK
Turuvekere: ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ– ತಹಶೀಲ್ದಾರ್ ಗೆ ದಲಿತ ಲೀಡರ್ ನಂದಿನಿ ಪ್ರಶ್ನೆ.

ತುರುವೇಕೆರೆ: ದೇವರು ಬಂದಂತೆ ನಟಿಸಿ ದಲಿತರನ್ನ ಗುಡಿಯೊಳಗಿಂದ ಹೊರ ಹಾಕಿದ ಮೇಲ್ಜಾತಿಯ ವ್ಯಕ್ತಿ ಮತ್ತು ಇತರರು ಸೇರಿ ಅಸ್ಪೃಶ್ಯತೆ ತೋರುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿರುವ ಅರಸಮ್ಮ ದೇವಸ್ಥಾನದಲ್ಲಿ ನಡೆದಂತಹ ಘಟನೆ ಇದಾಗಿದೆ.
ಇದೇ ವಿಚಾರವಾಗಿ ಈಗಾಗಲೇ ಒಬ್ಬರನ್ನು ಅಟ್ರಾಸಿಟಿ ಪ್ರಕರಣದಲ್ಲಿ ಜೈಲಿಗೆ ಕಳುಹಿಸಲಾಗಿದ್ದು ಒಟ್ಟಾರೆ ಏಳು ಜನರ ವಿರುದ್ಧ ಎಫ್ಐಆರ್(FIR) ದಾಖಲಾಗಿದ್ದು, ಇಂದು ಶಾಂತಿ ಸಭೆ ಕೂಡ ಗೋಣಿ ತುಮಕೂರು ಗ್ರಾಮದಲ್ಲಿ ತಾಶಿಲ್ದಾರ್ ಉಪಸ್ಥಿತಿಯಲ್ಲಿ ಆಯೋಜನೆಗೊಂಡಿತ್ತು.
ದಲಿತ ಮುಖಂಡೆ ತಿಪಟೂರು ನಂದಿನಿ ಸ್ಥಳಕ್ಕೆ ಭೇಟಿ ಕೊಟ್ಟು, ತಹಸೀಲ್ದಾರ್ ಅವರಿಗೆ ಕೇವಲ ಒಬ್ಬರನ್ನೇ ಅರೆಸ್ಟ್ ಮಾಡಿದ್ದು ಬಾಕಿ ಉಳಿದವರನ್ನು ಯಾಕೆ ಇನ್ನು ಅರೆಸ್ಟ್ ಮಾಡಿಲ್ಲ ಎಂದು ಪ್ರಶ್ನಿಸುತ್ತ, ಗೃಹ ಸಚಿವ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕವಾಗಿ ಅವಮಾನಕಾರಿಯಾಗಿ ವರ್ತನೆ ಮಾಡಿ ಪರಿಶಿಷ್ಟ ಜಾತಿಯನ್ನು ಉಲ್ಲೇಖಿಸಿ ಅಪಮಾನ ಮಾಡಿರುವುದು ಖಂಡನೀಯ 7 ಜನಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ
ಹೊಸದಾಗಿ ಮದುವೆಯಾದ ನವಜೋಡಿ ದೇವಸ್ಥಾನ ಒಳಗೆ ಹೋದರೆ, ಮೇಲ್ಜಾತಿಯ ವ್ಯಕ್ತಿ ದೇವರು ಬಂದಂತೆ ನಟಿಸಿ ಅವರನ್ನು ದೇವಸ್ಥಾನದಿಂದ ಹೊರ
ಹಾಕಿಸಿದ್ದಾರೆ, ಆದರೂ ಒಬ್ಬರನ್ನ ಮಾತ್ರ ಬಂಧಿಸಿ ಮಿಕ್ಕವರನ್ನೆಲ್ಲ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದೆ ವೇಳೆ ತಹಶೀಲ್ ಸ್ಥಳದಲ್ಲಿದ್ದರು ಕೆಲ ನಿಮಿಷ ಕಂದಾಯ ಇಲಾಖೆ ಸಿಬ್ಬಂದಿಗಳ ಮೇಲೆ ಯುವಕನೊಬ್ಬ ಜಮೀನು ವಿಷಯ ಕುರಿತು ಆರೋಪ ಪ್ರತ್ಯಾರೋಪ ಕುರಿತು ಮಾತಿನ ಚಕಮಕಿ ನಡೆಸಿದರು ನಂತರ ದಲಿತ ನಾಯಕಿ ತಿಪಟೂರು ನಂದಿನಿ ನೇತೃತ್ವದ ತಂಡ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ತೆರಳಿ ಉಳಿದವರನ್ನು ಬಂಧಿಸುವಂತೆ ಮನವಿಯನ್ನು ನೀಡಿದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.