Document

Turuvekere: ಶಾಕ್ ಸರ್ಕ್ಯೂಟ್ ನಿಂದ ಮೊಬೈಲ್ ಅಂಗಡಿಗೆ ಬೆಂಕಿ, ಅ,18 ಲಕ್ಷಕ್ಕೂ ಹೆಚ್ಚು ನಷ್ಟ.

JANATAA24 NEWS DESK 

 

 

Turuvekere: ಶಾಕ್ ಸರ್ಕ್ಯೂಟ್ ನಿಂದ ಮೊಬೈಲ್ ಅಂಗಡಿಗೆ ಬೆಂಕಿ, ಅ,18 ಲಕ್ಷಕ್ಕೂ ಹೆಚ್ಚು ನಷ್ಟ.
Turuvekere

ತುರುವೇಕೆರೆ: ತಾಲೂಕಿನ ಟಿ ಬಿ ಕ್ರಾಸ್ ನಲ್ಲಿರುವ ವಿವೊ ಮೊಬೈಲ್ ಮಾರ್ಟ್ ಗೆ ಭಾನುವಾರ ತಡರಾತ್ರಿ ಸುಮಾರು 11.30 ರ ಸಮಯದಲ್ಲಿ ಮೋಹನ್ ಎಂಬ ವ್ಯಕ್ತಿಯ ಮಾಲೀಕತ್ವದ ಮೊಬೈಲ್ ಅಂಗಡಿ ಶಾಕ್ ಸರ್ಕ್ಯೂಟ್ ನಿಂದ ಬೆಂಕಿಯ ಕೆನ್ನಾಲೆಯಿಂದ ಅಂಗಡಿಯಲ್ಲಿದ್ದ 12ಸಾವಿರದಿಂದ 50 ಸಾವಿರದವರೆಗೆ ಬೆಲೆಬಾಳುವ ಮೊಬೈಲ್ಗಳು ಒಟ್ಟು 18 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್ ಮತ್ತು ಇನ್ನಿತರೆ ವಸ್ತುಗಳು ಸುಟ್ಟು ಕರಕಲಾಗಿ ಮಾಲಿಕ ಮೋಹನ್ ಕಂಗಾಲಾಗಿದ್ದಾನೆ.

 

 

ಮಾಲಿಕ ಮೋಹನ್ ಸುಮಾರು ಐದು ವರ್ಷದಿಂದ ತಿಂಗಳಿಗೆ 8,000 ನಂತೆ ಬಾಡಿಗೆ ನೀಡುತ್ತಾ ಮೊಬೈಲ ಅಂಗಡಿ ನಡೆಸುತ್ತಿದ್ದು, ಎಂದಿನಂತೆ ರಾತ್ರಿ 10.30 ಕ್ಕೆ ಮೊಬೈಲ್ ಅಂಗಡಿ ಮುಚ್ಚಿ ಮನೆಗೆ ತೆರಳಿದ ವೇಳೆ ಈ ಅವಘಡ ಸಂಭವಿಸಿದ್ದು ಸ್ಥಳೀಯರು ಕೂಡಲೇ ಆತನಿಗೆ ವಿಷಯ ಮುಟ್ಟಿಸಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿ ಹತ್ತಿ ಉರಿಯುತ್ತಿತ್ತು ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಹಿತರು ಬೆಸ್ಕಾಂಗೆ ಕರೆ ಮಾಡಿ ಪವರ್ ಕೂಡ ನಿಷ್ತ್ರೀಯಗೊಂಡಿದ್ದು ,ಅಗ್ನಿಶಾಮಕ ಕಚೇರಿಗೆ ಕರೆ ಮಾಡಿ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಆದರೆ ಅಷ್ಟರಲ್ಲಾಗಲೆ ಎಲ್ಲಾ ಮೊಬೈಲ್ ಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು ಮಾಲಿಕ ಕಳೆದ ತಿಂಗಳಷ್ಟೇ ಚಿನ್ನವನ್ನು ಅಡವಿಟ್ಟು, ಜೊತೆಗೆ ಹಲವು ಸಂಘಗಳಲ್ಲಿ ಸಾಲ ಪಡೆದು ಹೊಸ ಮೊಬೈಲ್ ಗಳನ್ನು ಮಾರಾಟಕ್ಕಾಗಿ ತಂದಿದ್ದು ಈಗ ಈ ಅವಘಡದಿಂದಾಗಿ ಮಾಲಿಕ ಏನೂ ತೋಚದಂತಾಗಿದೆ. ಒಟ್ಟಾರೆ ಅಕ್ಕ ಪಕ್ಕದ ಯಾವುದೇ ಅಂಗಡಿಗೆ ಇದರಿಂದಾಗಿ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *