Document

Turuvekere: ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಭಾಗಿ- ತಹಶೀಲ್ದಾರ್ YM ರೇಣು ಕುಮಾರ್ .

 

Janataa24 NEWS DESK 

 

Turuvekere: ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಭಾಗಿ- ತಹಶೀಲ್ದಾರ್ YM ರೇಣು ಕುಮಾರ್ .Turuvekere,

 

 

ತುರುವೇಕೆರೆ: ತಾಲೂಕಿನ ಆಡಳಿತ ಕಚೇರಿಯಲ್ಲಿ ತುರುವೇಕೆರೆಯಲ್ಲಿ ಜೂನ್ 26ನೇ ಬುಧವಾರದಂದು ನಡೆಯುವ ಜನಸ್ಪಂದನ ಕಾರ್ಯಕ್ರಮದ ಹಿನ್ನೆಲೆ ಪೂರ್ವಭಾವಿಯಾಗಿ ತಾಲೂಕು ದಂಡಾಧಿಕಾರಿಯಾದ ವೈ ಎಂ ರೇಣು ಕುಮಾರ್ ಅವರು ಪತ್ರಿಕಾ ಮಾಧ್ಯಮಗೋಷ್ಠಿ ನೆಡೆಸಿದರು.

 

 

 

 

ಇದೇ ವೇಳೆ ಮಾತನಾಡಿದ ತಾಲೂಕು ದಂಡಾಧಿಕಾರಿ ಈ ಜನಸ್ಪಂದನ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇವರುಗಳ ಉಪಸ್ಥಿತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಗಣಪತಿ ಪೆಂಡಾಲ್ ನಲ್ಲಿ ಆಯೋಜನೆ ಮಾಡಲಾಗಿದ್ದು, ತಾಲೂಕಿನ ಜನತೆ ತಮ್ಮ ತಮ್ಮ ದೂರುಗಳ ಮನವಿಯನ್ನು ಈ ಸಂದರ್ಭದಲ್ಲಿ ಸಲ್ಲಿಸಬಹುದು.

 

 

ಜಿಲ್ಲಾಧಿಕಾರಿಯ ಸೂಚನೆಯಂತೆ ನೀವು ಸಲ್ಲಿಸುವ ದೂರುಗಳಿಗೆ ಸಂಬಂಧಪಟ್ಟ ಇಲಾಖೆಗಳು ಸ್ಥಳದಲ್ಲೇ ಬಗೆಹರಿಸಿ ಕೊಡಲಿದ್ದು, ಇನ್ನು ಕೆಲವು ದೂರುಗಳ ಮನವಿ ಪತ್ರಗಳಿಗೆ ಒಂದೇ ವಾರದಲ್ಲಿ ಸಮಸ್ಯೆಗಳನ್ನು ಇತ್ಯರ್ಥ ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿಯವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಅಹವಾಲುಗಳನ್ನು ನೀಡುವಂತೆ ಮಾಧ್ಯಮದ ಮುಖಾಂತರ ತಾಲೂಕಿನ ಜನತೆಗೆ ಕಾರ್ಯಕ್ರಮದ ವಿವರಣೆ ನೀಡಿದರು.

 

 

 

ಇನ್ನು ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳು ಮತ್ತು ಇಲಾಖೆ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದರು.

 

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/turuvekere-bandh-in-turuvekere-led-by-mla/

https://youtube.com/@janataa24?si=XsFcych2GMH0O6Gv

 

Document

Leave a Reply

Your email address will not be published. Required fields are marked *