Turuvekere: ಮಾಯಸಂದ್ರ ಹೋಬಳಿ ಅಂಗಡಿ ಮುಂಗಟ್ಟುಗಳು ಪ್ರತಿನಿತ್ಯದಂತೆ ತೆರೆದಿರುವ ದೃಶ್ಯ ಕಂಡುಬಂದಿದೆ.

ತುರುವೇಕೆರೆ: ತುಮಕೂರು ಜಿಲ್ಲೆಯ ನೀರನ್ನು ರಾಮನಗರಕ್ಕೆ ಕೊಂಡೊಯ್ಯುವ ಯೋಜನೆಯ ಕಾಮಗಾರಿಗಳ ವಿರುದ್ಧ, ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯಿಂದ ಇಂದು ತುರುವೇಕೆರೆಯಲ್ಲಿ ಹಾಲಿ ಶಾಸಕರಾದ ಎಂ ಟಿ ಕೃಷ್ಣಪ್ಪ ಮತ್ತು ಮಾಜಿ ಶಾಸಕರಾದ ಮಸಾಲಾ ಜೈರಾಮ್ ಇವರ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ಸಂಪೂರ್ಣ ಬಂದ್ ಹಿನ್ನೆಲೆಯಲ್ಲಿ ತುರುವೇಕೆರೆ ತಾಲೂಕು ಬಂದ್ ಮಾಡಲು ಈ ಹಿಂದೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ತುರುವೇಕೆರೆ ಪಟ್ಟಣ ಇಂದು ಸಂಪೂರ್ಣ ಬಂದ್ ಆಗಿದೆ.
ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ 24.5 TMC ನೀರನ್ನು ಹಂಚಿಕೆ ಮಾಡಿರುವುದು ಸರಿ ಅಷ್ಟೇ, ಆದರೆ ಪ್ರತಿ ವರ್ಷವೂ ಹಂಚಿಕೆ ಮಾಡಿರುವ ಪೂರ್ಣ ಪ್ರಮಾಣದ ನೀರನ್ನು ಹರಿಬಿಡದೆ, ಜಿಲ್ಲೆಯ ರೈತರು, ಜನ ಜಾನುವಾರುಗಳು, ಪ್ರಾಣಿ ಪಕ್ಷಿಗಳು, ಕುಡಿಯುವ ನೀರಿಗಾಗಿ ಹಾಹಾಕಾರ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಈ ನಡೆಯನ್ನು ವಿರೋಧಿಸಿ ಬಂದ್ ಮಾಡಲಾಗಿದ್ದು, ಈ ಬಂದ್ ಗೆ ರೈತರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ವಿವಿಧ ಪರ ಸಂಘಟನೆಗಳು, ಮಹಿಳಾ ಸ್ವಸಹಾಯ ಸಂಘಗಳು, ಮಠಾಧೀಶರು, ಸಾವಿರಾರು ಸಂಖ್ಯೆಯಲ್ಲಿ ಪಕ್ಷಾತೀತವಾಗಿ *ನಮ್ಮ ನೀರು – ನಮ್ಮ ಹಕ್ಕು ಎಂಬ ಈ ಬೃಹತ್ ಹೋರಾಟಕ್ಕೆ ಬೆಂಬಲ ನೀಡಲಾಗಿತ್ತು.
ಮೇಲ್ಕಂಡ ವಿವಿಧಪುರ ಸಂಘಟನೆಗಳ ಮುಖಂಡರುಗಳು ಈ ಹೋರಾಟದಲ್ಲಿ ಪಾಲ್ಗೊಂಡು ಪಟ್ಟಣದಲ್ಲಿ ಬಂದ್ ಯಶಸ್ವಿಯಾಗಿದೆ, ಇದೇ ವೇಳೆ ಹಾಲಿ ಶಾಸಕರಾದ ಎಂ ಟಿ ಕೃಷ್ಣಪ್ಪ, ಹಾಗೂ ಮಾಜಿ ಶಾಸಕರಾದ ಮಸಾಲ ಜಯರಾಮ್ ಅವರು ವಿವಿಧ ಪರ ಸಂಘಟನೆಗಳ ಮುಖಂಡರುಗಳ ಉಪಸ್ಥಿತಿಯಲ್ಲಿ ತಾಲೂಕಿನ ದಂಡಾಧಿಕಾರಿ ವೈ ಎಮ್ ರೇಣು ಕುಮಾರ್ ಅವರಿಗೆ ಈ ಮನವಿ ಪತ್ರವನ್ನು ಗವರ್ನರ್ ಅವರಿಗೆ ಕಳುಹಿಸುವಂತೆ ರಾಜ್ಯ ಸರ್ಕಾರದ ಈ ನೆಡೆಯ ವಿರುದ್ಧ ಮನವಿ ಪತ್ರ ಸಲ್ಲಿಸಿದರು.
ಇನ್ನು ತುರುವೇಕೆರೆ ತಾಲೂಕಿನಲ್ಲಿ ಒಟ್ಟಾರೆ ನಾಲ್ಕು ಹೋಬಳಿಗಳು ಇದ್ದು, ಮಾಯಸಂದ್ರ ಹೋಬಳಿಯಲ್ಲಿ ಈ ಬಂದ್ ಯಾವುದೇ ಪರಿಣಾಮ ಬೀರದೆ ಅಂಗಡಿ ಮುಂಗಟ್ಟುಗಳು ಪ್ರತಿನಿತ್ಯದಂತೆ ತೆರೆದಿರುವ ದೃಶ್ಯ ಕಂಡು ಬಂತು.
ಇದೇ ಸಂದರ್ಭದಲ್ಲಿ ಇನ್ನು ಅನೇಕ ಮುಖಂಡರುಗಳು, ವಿವಿಧ ಪರ ಸಂಘಟನೆಗಳ ಪದಾಧಿಕಾರಿಗಳು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರುಗಳು ತುರುವೇಕೆರೆ ಬಂದ್ ಗೆ ಕೈಜೋಡಿಸಿದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/ceo-prabhu-who-suspended-pavagada-useless-pdo/