Document

Turuvekere: ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ತಹಸೀಲ್ದಾರ ರೇಣುಕುಮಾರ್.

Janataa24 NEWS DESK 

 

Turuvekere: ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ, ಭ್ರಷ್ಟಾಚಾರಿಗಳಿಗೆ ದುಸ್ವಪ್ನವಾಗಿ ಕಾಡುತ್ತಿರುವ, ತಹಸಿಲ್ದಾರ್ ವೈ ಎಂ ರೇಣು ಕುಮಾರ್Turuvekere,

 

 

ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಇಂದು ತಾಸಿಲ್ದಾರ್ ವೈ ಎಂ ರೇಣು ಕುಮಾರ್ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ, ರೋಗಿಗಳ ತಪಾಸಣೆ, ಮತ್ತು ಸಿಬ್ಬಂದಿಗಳ ಕಾರ್ಯವೈಖರಿ, ಇವುಗಳ ಬಗ್ಗೆ ತಾವೇ ಖುದ್ದು ಭೇಟಿಕೊಟ್ಟು ತಹಸಿಲ್ದಾರ್ ರೇಣು ಕುಮಾರ್ ಪರಿಶೀಲನೆ ನಡೆಸಿದ್ದಾರೆ.

Turuvekere,

 

 

ಇನ್ನೂ ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ದಂಡಾಧಿಕಾರಿ, ತಜ್ಞವೈದ್ಯರುಗಳ ಮತ್ತು ಸಿಬ್ಬಂದಿ ವರ್ಗಗಳ ಹಾಜರಾತಿಯನ್ನು ಪರಿಶೀಲನೆ ಮಾಡಿ, ಸರಿಯಾದ ಸಮಯಕ್ಕೆ ವೈದ್ಯರು, ಸಿಬ್ಬಂದಿಗಳು, ರೋಗಿಗಳಿಗೆ ಸರಿಯಾದ ಸಮಯಕ್ಕೆ ಸ್ಪಂದಿಸಿ ಚಿಕಿತ್ಸೆ ನೀಡುತ್ತಿದ್ದಾರೆಯೇ, ಅಥವಾ ಸುಮ್ಮನೆ ಕಾಟಚಾರಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಸಹ ಪರಿಶೀಲನೆ ನಡೆಸಿದ್ದಾರೆ.

 

 

Turuvekere,

ಒಟ್ಟಾರೆ ಇವತ್ತಿನ ತಹಶೀಲ್ದಾರ್ ವೈ ಎಂ ರೇಣು ಕುಮಾರ್ ಅವರ ದಿಢೀರ್ಭೇ ಭೇಟಿ ಹಿನ್ನೆಲೆ, ವೈದ್ಯರುಗಳಾಗಲಿ ,ಸಿಬ್ಬಂದಿಗಳಾಗಲಿ ಕೆಲಸ ನಿರ್ವಹಿಸದೆ ಏನಾದರೂ ಮುಂದಿನ ದಿನಗಳಲ್ಲಿ ಸುಮ್ಮನೆ ಕಾಟಚಾರಕ್ಕೆ ಕೆಲಸ ನಿರ್ವಹಿಸಬೇಕೆಂದುಕೊಂಡಿದ್ದರೆ ಅಂತವರಿಗೆ ಇವತ್ತಿನ ದಿಡೀರ್ ಭೇಟಿ ಎಲ್ಲೋ ಒಂದು ಕಡೆ ಬಿಸಿ ಮುಟ್ಟಿಸಿದಂತಾಗಿದೆ.

 

 

ವರದಿ: ಮಂಜುನಾಥ್ ತುರುವೇಕೆರೆ

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBR

 

Document

Leave a Reply

Your email address will not be published. Required fields are marked *