Document

Turuvekere: ಗ್ರಾಮ ಸಭೆಗೆ ಕೆಲವು ಇಲಾಖಾ ಅಧಿಕಾರಿಗಳು ಗೈರು.

Janataa24 NEWS DESK

Turuvekere: ಕೆಲವು ಗೊಂದಲಗಳ ನಡುವೆಯೂ ಸಾಮಾಜಿಕ ಪರಿಶೋಧನ ಗ್ರಾಮ ಸಭೆ ಯಶಸ್ವಿ.
Turuvekere,

ತುರುವೇಕೆರೆ: ತಾಲೂಕಿನ ಸೊರವನಹಲ್ಲಿ ಗ್ರಾಮ ಪಂಚಾಯಿತಿಯಲ್ಲಿ, ಇಂದು 2021- 22- 23ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ಇಂದು ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು.

ಈ ಗ್ರಾಮ ಸಭೆಯನ್ನು ಅಧ್ಯಕ್ಷರಾದ ಇಂದಿರಾ ಕೃಷ್ಣಸ್ವಾಮಿ, ಉಪಾಧ್ಯಕ್ಷರಾದ ಮಂಜುನಾಥ್, ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಮತಿ ಸವಿತಾ, ಜಿಲ್ಲಾ ಸಂಯೋಜಕ ಮತ್ತು ಸಾಮಾಜಿಕ ಲೆಕ್ಕ ಪರಿಶೋಧಕರು ನರೇಗಾ ಯೋಜನೆ, ಗಜೇಂದ್ರ, ಇವರುಗಳು ದೀಪ ಬೆಳಗುವುದರ ಮೂಲಕ ಗ್ರಾಮ ಸಭೆಗೆ ಚಾಲನೆ ನೀಡಿದರು.
Turuvekere,

ಇನ್ನು ಗ್ರಾಮ ಸಭೆ ಪ್ರಾರಂಭ ಮಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯೋಗೀಶಪ್ಪ ಅವರು ಸಭೆಗೆ ಹಾಜರಿರುವ ಅಧಿಕಾರಿಗಳಿಗೆ, ಸದಸ್ಯರುಗಳಿಗೆ, ಗ್ರಾಮಸ್ಥರುಗಳಿಗೆ ಸ್ವಾಗತ ಕೋರಿದರು, ಇದೆ ವೇಳೆ ಜಿಲ್ಲಾ ಸಂಯೋಜಕರು ಮತ್ತು ಸಾಮಾಜಿಕ ಲೆಕ್ಕ ಪರಿಶೋಧಕರು ಆದ ಗಜೇಂದ್ರ ಅವರು 2021- 22- 23ನೇ ಸಾಲಿನ ಮತ್ತು 15ನೇ ಹಣಕಾಸಿನ ಯೋಜನೆಯ ಕಾಮಗಾರಿಯ ವಿವರವನ್ನು ಹೇಳುತ್ತಿದ್ದಂತೆ ,ಗ್ರಾಮಸ್ಥನಾದ ಪಾಂಡುರಂಗಯ್ಯ ಅವರು ಮಧ್ಯ ಪ್ರವೇಶ ಮಾಡಿ, ಕೆಲವು ಕಾಮಗಾರಿಗಳ ವಿವರ ಕೇಳಿದಾಗ ಕೆಲ ಸಮಯ ಗೊಂದಲ ಕೂಡ ಸೃಷ್ಟಿಯಾಗಿ ಕೆಲ ನಿಮಿಷ ವಾದ ವಿವಾದಗಳು ಸೃಷ್ಟಿಯಾಯಿತು, ಇದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗ್ರಾಮ ಪಂಚಾಯಿತಿ ಸದಸ್ಯ ಸಂದೇಶ್, ಉಪಾಧ್ಯಕ್ಷರಾದ ಮಂಜುನಾಥ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯೋಗೀಶಪ್ಪ, ವಿವರ ಕೇಳಿದ ಗ್ರಾಮಸ್ಥನಿಗೆ ಈ ಗ್ರಾಮ ಸಭೆಯ ಉದ್ದೇಶವನ್ನು ಅಲ್ಪಸಮಯದಲ್ಲೇ ಮನವರಿಕೆ ಮಾಡಿ ಗೊಂದಲಕ್ಕೆ ತೆರೆ ಎಳೆದರು.

ಇದರ ನಡುವೆ ಕೆಲವು ಸದಸ್ಯರು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, ಕಾಮಗಾರಿಗಳು ಮುಗಿದಿದ್ದರೂ ಸಹ ಹಣ ಹೂಡಿಕೆ ಮಾಡಿದ್ದವರಿಗೆ ಇನ್ನೂ ಸಹ ಯಾವುದೇ ತರಹದ ಬಿಲ್ಗಳು ಪಾವತಿಯಾಗದೆ ಇದ್ದ ಕಾರಣ ಲೆಕ್ಕ ಪರಿಶೋಧಕರಾದ ಗಜೇಂದ್ರ ಅವರಿಗೆ ಸ್ಥಳದಲ್ಲಿಯೇ ತರಾಟೆ ತೆಗೆದುಕೊಂಡಿದ್ದು ಅನಿವಾರ್ಯವೇ ಸರಿ,ಜೊತೆಗೆ ಮೇಲ್ಕಂಡ ಸಾಲಿನ ಇಸವಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ವಾಸು ಕೂಡ ಈ ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದು, ಅವರಿಗೂ ಸದಸ್ಯರು ಪ್ರಶ್ನೆಗಳ ಸುರಿಮಳೆಯನ್ನೇ ಗೈದು, ಕಾಮಗಾರಿಗಳಿಗೆ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಇನ್ನೂ ಸಹ ಯಾವುದೇ ತರಹದ ಬಿಲ್ ಪಾವತಿಯಾಗಿಲ್ಲ, ಇದರಿಂದಾಗಿ ಸದಸ್ಯರುಗಳ ಮೇಲೆ ಗ್ರಾಮಸ್ಥರುಗಳು ಎಲ್ಲಾ ಕಾಮಗಾರಿ ಮುಗಿಯದೆ ಸದಸ್ಯರುಗಳೇ ಪಂಚಾಯಿತಿಯ ಹಣವನ್ನು ಗುಳುಂ ಮಾಡಿದ್ದಾರೆ ಎಂಬ ಮಾತುಗಳನ್ನು ಸಾರ್ವಜನಿಕರಿಂದ ನಮ್ಮಿಂದ ಕೇಳಲು ಸಾಧ್ಯವಿಲ್ಲ, ನೀವುಗಳು ಬಿಲ್ ಮಾಡದೆ ಸುಮ್ಮನೆ ಸಮಯ ವ್ಯರ್ಥ ಮಾಡಿ ನಮ್ಮೆಲ್ಲರಿಗೂ ಕೆಟ್ಟ ಹೆಸರನ್ನು ತರುತ್ತಿದ್ದೀರಾ ಎಂದು ಲೆಕ್ಕಪರಿಶೋಧಕರಾದ ಗಜೇಂದ್ರ ಮತ್ತು ಮೇಲ್ಕಂಡ ಇಸವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಸು ಅವರಿಗೆ ಛೀಮಾರಿ ಹಾಕಿದರು, ಇದೆ ವೇಳೆ ಅಧಿಕಾರಿಗಳು ಉತ್ತರಿಸದೆ ಮೌನಕ್ಕೇ ಶರಣಾದರು.

ಇದೆ ವೇಳೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗೀಶಪ್ಪ ಅವರು ಕಾಮಗಾರಿ ನಿರ್ವಹಿಸಿದ ಹೂಡಿಕೆದಾರರಿಗೆ ಮತ್ತು ಸದಸ್ಯರುಗಳಿಗೆ ಸಮಾಧಾನಪಡಿಸಿ, ಅತಿ ಶೀಘ್ರದಲ್ಲೇ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಬರವಸೆ ನೀಡಿದರು.ಒಟ್ಟಾರೆ ನಡೆಯುತ್ತಿದ್ದ ಗ್ರಾಮ ಸಭೆಯಲ್ಲಿ ಗೊಂದಲಗಳು ಸೃಷ್ಟಿಯಾದರು, ಅವುಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿ ಗ್ರಾಮ ಸಭೆಯನ್ನು ಯಶಸ್ವಿಗೊಳಿಸುವಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗೀಶಪ್ಪ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರುಗಳು, ವಿವಿಧ ಗ್ರಾಮಗಳ ನೂರಾರು ಗ್ರಾಮಸ್ಥರುಗಳು, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಎಲ್ಲಾ ಸಿಬ್ಬಂದಿಗಳು, ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/donors-should-encourage-the-survival-of-government-schools/

 

https://youtu.be/8Pp1JOdggik?si=1XDRB-j47hWgjXoc

Document

Leave a Reply

Your email address will not be published. Required fields are marked *