Janataa24 NEWS DESK
Turuvekere: : ಕೂದಲೆಳೆ ಅಂತರದಲ್ಲಿ ಚಿರತೆ ದಾಳಿಯಿಂದ ತಹಶೀಲ್ದಾರ್ ಹಾಗೂ ಸಿಬ್ಬಂದಿ ಪಾರು, ರೈತರ ಮೇಲೆ ಎರಗಿದ ಚಿರತೆ.

ತುರುವೇಕೆರೆ: ತಾಲೂಕಿನ ಗೋಣಿ ತುಮಕೂರಿನ ಗ್ರಾಮದಲ್ಲಿ ಬುಧವಾರ ಮಧ್ಯಾನದoದೆ ಕಂದಾಯ ಗ್ರಾಮ ಗುರುತಿಸುವ ವೇಳೆ ಚಿರತೆ ತಹಶೀಲ್ದಾರ್ ಕುಂ ಈ ಅಹಮದ್ ಹಾಗೂ ಸಿಬ್ಬಂದಿ ವರ್ಗದ ಮೇಲೆ ಜೊತೆಗೆ ರೈತರ ಮೇಲೆ ದಾಳಿ ನಡೆಸಿದೆ.
ಚಿರತೆ ದಾಳಿ ಸಂದರ್ಭದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ಮತ್ತು ಸಿಬ್ಬಂದಿಗಳು ಸೇರಿದಂತೆ ರೈತರ ಮೇಲು ದಾಳಿ ನಡೆಸಲು ಮುಂದಾದಾಗ ಹೇಗೋ ತಾಲೂಕು ದಂಡಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಚಲ್ಲಾಪಿಲ್ಲಿಯಾಗಿದ್ದು ಕಂದಾಯ ಇಲಾಖೆಯ ಸಿಬ್ಬಂದಿಯೋರ್ವ ಮರವೇರಿ ಕುಳಿತು ಚಿರತೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ಆದರೂ ದಾಳಿ ಬಿಡದ ಚಿರತೆ ವೃದ್ಧರೊಬ್ಬರ ಮೇಲೆ ದಾಳಿ ಮಾಡಿ ನಂತರ ಶೆಡ್ಡು ಒಂದರಲ್ಲಿ ಅವಿತು ಕುಳಿತಿದೆ ಕೂಡಲೇ ದಾಳಿಗೊಳಗಾಗಿದ್ದ ರೈತನನ್ನು ಕೂಡಲೇ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇದರ ಬೆನ್ನಲ್ಲೇ ಅವಿತು ಕುಳಿತಿರುವ ಚಿರತೆಯನ್ನು ಗಮನಿಸಲು ಗ್ರಾಮದ ರೈತರು ಮತ್ತು ತಹಶೀಲ್ದಾರ್ ಹಾಗೂ ಸಿಬ್ಬಂದಿ ವರ್ಗ ಮತ್ತು ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗ ಶೆಡ್ ಬಳಿ ತೆರಳಿದಾಗ ಕೂಡಲೇ ಮತ್ತೆ ಶೆಡ್ನಿಂದ ಹೊರಗೆ ಜಿಗಿದು ಓರ್ವ ಮಹಿಳೆ ಸೇರಿದಂತೆ ಮೂರರಿಂದ ನಾಲ್ಕು ರೈತರ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿ ಚಿರತೆ ಅಲ್ಲಿಂದ ಪರಾರಿಯಾಗಿದೆ. ಗಾಯಗೊಂಡವರನ್ನು ಕೂಡ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಇದಲ್ಲದೆ ಅದೇ ಗ್ರಾಮದ ಮೇಕೆಗಳು ಮತ್ತು ಎಮ್ಮೆಯ ಮೇಲೆ ದಾಳಿ ಕೂಡ ನಡೆಸಿದೆ ಎಂದು ತಿಳಿದು ಬಂದಿದೆ.
ಇದಾದ ಬಳಿಕ ಕೆಲವು ಸಮಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಗ್ರಾಮದ ಸುತ್ತಮುತ್ತ ಚಿರತೆಗಾಗಿ ಶೋಧ ನಡೆಸಿದರು ಚಿರತೆ ಕಣ್ಣಿಗೆ ಕಾಣದೆ ಕಣ್ಮರೆಯಾಗಿದೆ, ನಂತರ ಅಲ್ಲಿಂದ ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ತನ್ನ ಕೇಂದ್ರ ಸ್ಥಾನದತ್ತ ತೆರಳಲು ಮುಂದಾಗಿ ಕೇವಲ ಒಂದೇ ಗಂಟೆಯಲ್ಲಿ ಅದೇ ಚಿರತೆ ಪಕ್ಕದ ಗ್ರಾಮವಾದ ದೇವಿಹಳ್ಳಿ ಗ್ರಾಮದ ತೋಟ ಒಂದರಲ್ಲಿ ಶೇಖರ್ ಎಂಬ ರೈತ ಮನೆಯ ಬಳಿ ಕಾಣಿಸಿಕೊಂಡಿದ್ದು ರೈತ ಶೇಖರ್ ಮೇಲೂ ದಾಳಿ ನಡೆಸಿ ತೊಡೆ, ಮಂಡಿ ಮತ್ತು ತಲೆಯ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿದೆ ಇದರಿಂದಾಗಿ ಆತನಿಗೆ ಹೆಚ್ಚು ರಕ್ತಸ್ರಾವವೂ ಕೂಡ ಆಗಿದ್ದು ಯಾವುದಕ್ಕೂ ಜಗ್ಗದ ರೈತ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬುದ್ಧಿವಂತಿಕೆಯಿಂದ ತನ್ನ ಮನೆಯೊಳಗೆ ಸೇರಿಕೊಂಡಿದ್ದಾನೆ ಆತನನ್ನೇ ಹಿಂಬಾಲಿಸಿದ ಚಿರತೆ ಕೂಡ ಆತನ ಮನೆಯ ಒಳಗೆ ನುಗ್ಗಿದೆ ಕೂಡಲೇ ಎಚ್ಚೆತ್ತ ರೈತ ರಕ್ತಸ್ರಾವವಾಗುತ್ತಿದ್ದರು ಮನೆಯ ಹೊರಗೆ ಬಂದು ಹೊರಗಿನಿಂದ ಬಾಗಿಲು ಮುಚ್ಚಿ ಬಾಗಿಲ ಬಳಿ ರಕ್ತದ ಮಡುವಿನಲ್ಲಿ ಕುಳಿತಿದ್ದು, ಮನೆಯ ಸ್ವಲ್ಪ ದೂರದಲ್ಲಿ ತನ್ನ ಪತ್ನಿಯಾದ ಲಲಿತಮ್ಮ ಎಂಬುವರು ಮೇಕೆಗಳನ್ನು ಮೇಯಿಸುತ್ತಿದ್ದು ಕೂಡಲೇ ಗಾಬರಿಯಿಂದ ಮನೆಯ ಬಳಿ ಬಂದು ನೋಡಿದಾಗ ತನ್ನ ಪತಿ ರಕ್ತದ ಮಡುವಿನಲ್ಲಿ ಕುಳಿತಿರುವುದನ್ನು ಗಮನಿಸಿ ಅಲ್ಲೇ ಅಕ್ಕಪಕ್ಕದವರ ಸಹಾಯ ಪಡೆದು ಮನೆ ಬಾಗಿಲಿನಿಂದ ಸ್ವಲ್ಪ ದೂರಕ್ಕೆ ಕರೆತಂದಿದ್ದಾರೆ.
ಅಷ್ಟರೊಳಗಾಗಲಿ ವಿಷಯ ತಿಳಿದಿದ್ದ ತಹಶೀಲ್ದಾರ್ ಕುಂ ಹಿ ಅಹಮದ್ ಹಾಗೂ ಸಿಬ್ಬಂದಿ ವರ್ಗ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಸ್ಥಳಕ್ಕೆ ಧಾವಿಸಿ ಕೂಡಲೇ ಚಿರತೆ ದಾಳಿಗೊಳಗಾದ ರೈತ ಶೇಖರ್ ನನ್ನು ಕೂಡಲೆ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅರಣ್ಯ ಇಲಾಖೆಯ ಡಿ ಆರ್ ಎಫ್ ವಿಜಯಕುಮಾರ್ ಅವರೊಂದಿಗೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ಧು.
ಬಳಿಕ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಲಾಗಿ ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆಯ ತುಮಕೂರು ಜಿಲ್ಲೆಯ ಡಿಎಫ್ಓ ಶಶಿಧರ್, ಚಿಕ್ಕನಾಯಕನಹಳ್ಳಿ, ತಿಪಟೂರು, ಉಪ ವಿಭಾಗಧಿಕಾರಿಗಳಾದ ಎಸಿಎಫ್ ಭರತ್, ಆರ್‌ಎಫ್‌ಒ ಅಮಿತ್, ಬಿಎಫ್ಓ ರೂಪೇಶ್ , ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಜೊತೆಗೆ ಮೈಸೂರಿನ ಅರವಳಿಕೆ ತಜ್ಞರ ತಂಡ, ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್, ಎಸ್ ಐ, ಕೃಷ್ಣಕುಮಾರ್, ಸಿಬ್ಬಂದಿಗಳಾದ ಗುರುಮೂರ್ತಿ, ರಾಜಕುಮಾರ, ಅರುಣ್, ದಿನೇಶ್, ಇನ್ನು ಹೆಚ್ಚಿನ ಸಿಬ್ಬಂದಿಗಳು ಹಾಜರಿದ್ದು.
ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಮನೆಯೊಳಗೆ ಅವಿತಿದ್ದ ಚಿರತೆಗೆ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ, ಇನ್ನು ಸ್ಥಳದಲ್ಲಿ ಸುತ್ತ ಮುತ್ತಲಿನ ಮಹಿಳೆಯರು ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಜಮಾವಣೆಗೊಂಡು ಚಿರತೆ ಸೆರೆಹಿಡಿಯುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು ಕೊನೆಗೂ ಚಿರತೆಯಂತೂ ಸೆರೆಯಾಯಿತು ಆದರೆ ಚಿರತೆಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ರೈತಾಪಿ ವರ್ಗ ಮತ್ತು ಗ್ರಾಮಸ್ಥರಿಗೆ ಸ್ವಲ್ಪ ನಿರಾಸೆಯ ಬಿಸಿಯೂ ಕೂಡ ಮುಟ್ಟಿತ್ತು.
ಚಿರತೆಯ ಸೆರೆ ಬಳಿಕ ಅರಣ್ಯ ಇಲಾಖೆಯವರು ಅಲ್ಲಿ ನೆರದಿದ್ದ ನೂರಕ್ಕೂ ಹೆಚ್ಚು ರೈತ ಮತ್ತು ಗ್ರಾಮಸ್ಥರುಗಳಿಗೆ ಚಿರತೆಯ ದರ್ಶನ ಮಾಡಿಸದೆ ತೆರಳುವ ವೇಳೆ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ರೈತರ ನಡುವೆ ಸ್ವಲ್ಪ ಸಮಯ ಮಾತಿನ ಚಕಮಕಿಯು ಕೂಡ ನಡೆದು ಕೊನೆಗೆ ಅರಣ್ಯ ಇಲಾಖೆಯವರು ಚಿರತೆಯನ್ನು ಕೊಂಡೊಯ್ದರು, ರಾತ್ರಿ ಸುಮಾರು 10 ಗಂಟೆಯವರೆಗೆ ಚಿರತೆ ನೋಡಲು ಕಾಯುತ್ತಿದ್ದವರಿಗೆ ನಿರಾಸೆ ಮೂಡಿ ತಮ್ಮ ತಮ್ಮ ಗ್ರಾಮಗಳತ್ತ ಹೊರಡಲು ಸಿದ್ದರಾದರು.
ಆದರೂ ಸಹ ರೈತರಲ್ಲಿ ಗೊಂದಲ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿದ್ದು ಮೇಲ್ನೋಟಕ್ಕೆ ಕಾಣುತ್ತಿತ್ತು ಈ ಗೊಂದಲಕ್ಕೆ ಕಾರಣವಿಷ್ಟೇ ಚಿರತೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆಯವರು ತುರುವೇಕೆರೆ ತಾಲೂಕಿಗೆ ಹೊಂದಿಕೊಂಡಂತಿರುವ ಚಿಕ್ಕನಾಯಕನಹಳ್ಳಿಯ ಅರಣ್ಯದಲ್ಲಿ ಬಿಟ್ಟರೆ ಈಗಾಗಲೇ ಮನುಷ್ಯನ ರಕ್ತದ ವಾಸನೆಯನ್ನು ಕಂಡಿರುವ ಚಿರತೆ ಮತ್ತೆ ಬರುತ್ತದೆ ಎಂಬ ಗೊಂದಲ ಮತ್ತು ಭಯದ ಆತಂಕದಲ್ಲಿದ್ದಾರೆ, ಒಟ್ಟಾರೆ ಈಗಾಗಲೇ ತಾಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ ಚಿರತೆಯ ಸುತ್ತಾಟ ಕಂಡು ಬಂದಿದ್ದು ಕೆಲ ಚಿರತೆಗಳನ್ನು ಸಹ ಸೆರೆ ಹಿಡಿಯಲಾಗಿದೆ ಆದರೂ ಮತ್ತೆ ಮತ್ತೆ ಕಾಣಸಿಗುತ್ತಿರುವ ಚಿರತೆಗಳಿಂದ ರೈತಾಪಿ ವರ್ಗಕ್ಕೆ ಆತಂಕ ಹೆಚ್ಚಾಗಿದ್ದು, ಈಗ ಸೆರೆ ಹಿಡಿದಿರುವ ಚಿರತೆಯನ್ನು ದೂರದಲ್ಲಿರುವ ಮೃಗಾಲಯಕ್ಕೆ ಬಿಡುತ್ತಾರೋ ಅಥವಾ ಇಲ್ಲೇ ಹತ್ತಿರದಲ್ಲೇ ಬಿಟ್ಟು ಮತ್ತೆ ರೈತರ ಗೊಂದಲ ಹೆಚ್ಚು ಮಾಡುತ್ತಾರೋ ಎಂಬ ಯಕ್ಷ ಪ್ರಶ್ನೆ ತಾಲೂಕಿನ ರೈತರಲ್ಲಿ ಮತ್ತು ಗ್ರಾಮಸ್ಥರಲ್ಲಿ ಪ್ರಶ್ನೆಯಾಗಿ ಉಳಿದಿದೆ.
ಒಟ್ಟಾರೆ ಒಂದರಿಂದೊoದು ಚಿರತೆಯ ಕಾಟ ಹೆಚ್ಚಾಗುತ್ತಿದ್ದು ಇದಕ್ಕೆ ಅರಣ್ಯ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುವುದು ಎಂಬುದನ್ನು ಕಾದು ನೋಡೋಣ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.