Janataa24 NEWS DESK
Tumkur News: ತುಮಕೂರು ಡಿಸಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ನಿರ್ಲಕ್ಷಕ್ಕೆ ಬಲಿಯಾದ ಗಣಿ ಬಾಧಿತ ಪ್ರದೇಶದ ನಿವಾಸಿಗಳು

Tumkur News: ಡಿಸಿ ಮತ್ತು ಸಿಇಓ ಅವರ ಮುಸುಕಿನ ಗುದ್ದಾಟದಲ್ಲಿ ಗಣಿ ಬಾಧಿತ ಪ್ರದೇಶ ವಸತಿ ಮತ್ತು ನಿವೇಶನ ಶೂನ್ಯ.
ತಿಪಟೂರು: ಪುನರ್ ಚೇತನ ಗಣಿಭಾದಿತ ಪ್ರದೇಶ ವಸತಿ ಮತ್ತು ನಿವೇಶನಗಳ ಪಟ್ಟಿಯನ್ನು ತಯಾರು ಮಾಡುವ ವಿಚಾರದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಸಿಇಓ ಅವರ ಮುಸುಕಿನ ಗುದ್ದಾಟದಲ್ಲಿ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ಮತ್ತು ಬಿಳಿಗಿರಿ ಗ್ರಾಮ ಪಂಚಾಯಿತಿಗಳು ಗಣಿ ಬಾಧಿತ ಪ್ರದೇಶಗಳಲ್ಲಿ 0.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲು ಕೂಸಿನ ತರ ಬಡವಾಗಿದೆ.
ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ| ಶಾಲಿನಿ ರಜಿನೀಶ್ 2022-23 ರಲ್ಲಿ ಸರ್ಕಾರ ಆದೇಶದಂತೆ ಗ್ರಾಮಗಳ ಅಭಿವೃದ್ಧಿಯಾಗಲೆಂದು ಗಣಿ ಬಾಧಿತ ವಸತಿ ರಹಿತ ಮನೆಗಳ ನೀಡಲು ಪಟ್ಟಿ ಮಾಡಲೆಂದು ಸಂಬಂಧಪಟ್ಟ ತುಮಕೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಅಧಿಕೃತವಾಗಿ ಗಣಿಬಾಧಿತ ಪ್ರದೇಶದ ಬಡವರಿಗೆ ನಿವೇಶನ ಕೊಡಿ ಎಂದು ಮಿತಿಯಲ್ಲದೆ ಅಧಿಕೃತ ಆದೇಶ ಹೊರಡಿಸಿತ್ತಾರೆ. ಹಿಂಡಿಸ್ಕೆರೆ ಪಂಚಾಯಿತಿಗೆ ಅನ್ಯಾಯವಾಗಿದೆ ಜಿಲ್ಲಾಧಿಕಾರಿಗಳು ಮಿತಿ ಇಲ್ಲದೆ ಮನೆಗಳಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಆದರೆ ಸಿಇಓ ರವರು 2018ರಲ್ಲಿ ಇಸವಿಯ ಸರ್ವೆಯಲ್ಲಿ ಇರುವ ಪಟ್ಟಿಯಂತೆ ಫಲಾನುಭವಿಗಳಿಗೆ ಮಾತ್ರ ಆಯ್ಕೆ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಾದ ತಾಲೂಕ್ ಪಂಚಾಯಿತಿ ಇಓ ರವರಿಗೆ ನಿರ್ದೇಶನ ಕೊಟ್ಟಿರುತ್ತಾರೆ.
ಅದರಂತೆ ಸಂಬಂಧಪಟ್ಟಂತೆ ನಮ್ಮ ಪಂಚಾಯಿತಿ ಪಿಡಿಓ ಅವರು ಸಹ ಇಓ ಹೇಳಿದಂತೆ ಗಣಿ ಬಾಧಿತ ನಿವೇಶ ರಹಿತ 2018ರ ಪಟ್ಟಿಯಂತೆ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ. ಇದೇ ರೀತಿ 2018ರ ಪಟ್ಟಿಯಂತೆ ಗಣಿಭಾದಿತ ವಸತಿ ರಹಿತ ಮನೆಗಳನ್ನು ಕೊಡುವುದಕ್ಕೆ ಬರುವುದಿಲ್ಲ ಏಕೆಂದರೆ ಅಂದಿನ 2018ರ ಇಸವಿಯ ಫಲಾನುಭವಿಗಳು ವಿವಿಧ ಯೋಜನೆಗಳ ಮೂಲಕ ಸವಲತ್ತುಗಳನ್ನು ಪಡೆದಿರುತ್ತಾರೆ. ಹಾಗೂ ಈಗ 2025ನೇ ಇಸ್ವಿಯಲ್ಲಿ ಅವಿಭಕ್ತ ಕುಟುಂಬಗಳಾಗಿವೆ. ಹಾಗಾಗಿ ಅವರನ್ನು ಹೇಗೆ ಆಯ್ಕೆ ಮಾಡಲಾಗುವುದು. ನಿಮ್ಮಗಳ ಪಟ್ಟಿ ಅಂದರೆ 2018 ರ ಪಟ್ಟಿ ಹೇಗೆ ಕಾರ್ಯರೂಪಕ್ಕೆ ಬರುತ್ತವೆ ನೀವೇ ಹೇಳಿ.
ಹಾಗಾಗಿ ನೀವು ಅದನ್ನೇ ಮುಂದುವರಿಸುತ್ತಿದ್ದು ನಮಗೆ ಬೇಸರವಾಗಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ಹಕ್ಕುಚ್ಯುತ್ತಾಯ್ ಆಗುವುದಿಲ್ಲವಾ. ನಮಗೆ ಕಪ್ಪು ಚುಕ್ಕೆಯಂತೆ ಅನ್ಯಾಯ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಹಾಗಾಗಿ ನೀವುಗಳು ನೇರವಾಗಿ ಗಣಿ ಬಾದಿತ ವಸತಿ ರಹಿತ ಫಲಾನುಭವಿಗಳ ಪಟ್ಟಿ ಮಾಡಲು ಅವಕಾಶ ಕೊಡಿ ನಂತರ ಅರ್ಹ ಫಲಾನುಭವಿಯ ನಿವೇಶನಗಳ ನಾವುಗಳ ವಾಟ್ಸಾಪ್ ಮೂಲಕ ಗ್ರಾಮಸಭೆಯ ಮೂಲಕ ನಿಮ್ಮ ಕೆವೈಸಿ ಮಾರ್ಗದರ್ಶನ ಏನಿದೆ ಅದೇ ಆಧಾರದ ಮೇಲೆ ಆಯ್ಕೆ ಮಾಡಿ ಪಟ್ಟಿ ಮಾಡಿ ಕೊಡುತ್ತೇವೆ. ನಂತರ ಕಮಿಟಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸವಲತ್ತುಗಳನ್ನು ಬಡವರಿಗೆ ಒದಗಿಸಿ ಕೆಲಸ ಮಾಡಿಕೊಡಿ.
ಅದನ್ನು ಬಿಟ್ಟು ನೀವು ಮೌಖಿತವಾಗಿ ಬೆಳಗ್ಗೆ ಒಂದು ಆದೇಶ ಸಾಯಂಕಾಲ ಒಂದು ಆದೇಶ ವಿಸಿ ಮಾಡುತ್ತೀರಾ. ಹಾಗಾಗಿ ಇದು ಒಂದು ಸಂಪೂರ್ಣವಾಗಿ ಆವೈಜ್ಞಾನಿಕವಾಗಿರುತ್ತದೆ. ದಯಮಾಡಿ ಇದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತನ್ನಿ ಹಾಗೂ ನೀವು ಇದನ್ನು ಕಾರ್ಯರೂಪಕ್ಕೆ ತರದೆ ಹೋದರೆ ನೀವುಗಳು ನಮಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಹಕ್ಕುಚ್ಯುತ್ತಾಯ್ ಮಾಡಿದ್ದು ಆದರೆ ನಾವುಗಳು ಸಾಮೂಹಿಕ ರಾಜೀನಾಮೆ ಕೊಡುವ ಮೂಲಕ ಹೊರಟ ಮಾಡುತ್ತವೆ ಎಂದು ಪಂಚಾಯಿತಿಯ ಸದಸ್ಯರಾದ ರಾಘು ಯಗಚಿಗಟ್ಟೆ ಹಾಗೂ ವಿದ್ಯಾ ಮಲ್ಲೇಶ್ ಪಂಚಾಯತಿ ಅಧ್ಯಕ್ಷರು, ನರಸಿಂಹಮೂರ್ತಿ ಉಪಾಧ್ಯಕ್ಷರು, ತಿಮ್ಮರಾಯಪ್ಪ ಉಷಾ ಯೋಗಾನಂದ ಮಂಗಳ, ಉಗ್ರ ನರಸಿಂಹಯ್ಯ, ಶಿವಕುಮಾರ್ ಮತ್ತಿಘಟ್ಟ ASSk ಅಧ್ಯಕ್ಷರು ರಮೇಶ್ ಮಾರನಗೆರೆ ನಗರ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವರದಿ:ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.