Document

Turuvekere: ದಾರಿ ಕಾಣದೆ ಕಂಗಾಲಾಗಿದ್ದ ಬಡ ಕುಟುಂಬಕ್ಕೆ ದಾರಿದೀಪವಾದ ವಕೀಲರಾದ ಹರಿರಾಮ್, ತಹಸಿಲ್ದಾರ್ ಅಹಮದ್. 

Janataa24 NEWS DESK 

 

Turuvekere: ದಾರಿ ಕಾಣದೆ ಕಂಗಾಲಾಗಿದ್ದ ಬಡ ಕುಟುಂಬಕ್ಕೆ ದಾರಿದೀಪವಾದ ವಕೀಲರಾದ ಹರಿರಾಮ್, ತಹಸಿಲ್ದಾರ್ ಅಹಮದ್.

 

Turuvekere: ದಾರಿ ಕಾಣದೆ ಕಂಗಾಲಾಗಿದ್ದ ಬಡ ಕುಟುಂಬಕ್ಕೆ ದಾರಿದೀಪವಾದ ವಕೀಲರಾದ ಹರಿರಾಮ್, ತಹಸಿಲ್ದಾರ್ ಅಹಮದ್. 

ತುರುವೇಕೆರೆ: ತಾಲೂಕಿನ ಟಿ ಹೊಸಹಳ್ಳಿ ಗ್ರಾಮದ ಮಂಗಳಮ್ಮ ಮಂಜುನಾಥ್ ಎಂಬ ಇವರಿಗೆ 12 ಕುಂಟೆ ಜಮೀನಿದ್ದು ಜಮೀನಿನಲ್ಲಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ, ಕಳೆದ ಮೂರು ವರ್ಷಗಳಿಂದಲೂ ಜಮೀನಿಗೆ ಮನೆಗೆ ಓಡಾಡಲು ಪಕ್ಕದ ಜಮೀನಿನ ದಾರಿಯನ್ನೆ ಅವಲಂಬಿಸಿದರು, ಇದ್ದಕ್ಕಿದ್ದ ಹಾಗೆ ಕಳೆದ ಒಂದು ವರ್ಷದಿಂದ ಪಕ್ಕದಲ್ಲಿದ್ದ ಜಮೀನಿನ ಮಾಲೀಕರು ಓಡಾಡುವ ರಸ್ತೆಯನ್ನೇ ಮುಚ್ಚಿ ಮಂಗಳಮ್ಮ ಮಂಜುನಾಥ್ ಕುಟುಂಬಕ್ಕೆ ದಾರಿ ಇಲ್ಲದೆ ಪರದಾಡುವಂತಹ ಸ್ಥಿತಿಯು ಸಹ ಬಂದೊದಗಿತ್ತು.

ಈ ಬಡ ಕುಟುಂಬದ ಸಮಸ್ಯೆಯ ವಿಡಿಯೋ ಒಂದು, ಹೇಗೋ ಹೈಕೋರ್ಟ್ ವಕೀಲರಾದ ಹರಿರಾಮ್ ರವರ ಕೈ ಸೇರಿದೆ, ಇದನ್ನು ಗಮನಿಸಿದ ವಕೀಲ್ ಸಾಬ್ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಈ ಕುಟುಂಬದ ಸಮಸ್ಯೆಯ ವಿಡಿಯೋ ಹರಿದಾಡುತ್ತಿತ್ತು.

ಇದಲ್ಲದೆ ವಕೀಲರಾದ ಹರಿರಾಮ್ ರವರು ಈ ಬಡ ಕುಟುಂಬದ ದಾರಿ ಸಮಸ್ಯೆ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ, ಬಳಿಕ ತುರುವೇಕೆರೆ ತಾಲೂಕು ದಂಡಾಧಿಕಾರಿ ಅಹಮದ್ ರವರು ಸಹ ತನ್ನ ವ್ಯಾಪ್ತಿಗೆ ಒಳಪಡುವ ನಿಟ್ಟಿನಲ್ಲಿ ಸಮಸ್ಯೆಯನ್ನ ತಿಳಿದು, ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಮಂಗಳಮ್ಮ ಮಂಜುನಾಥ್ ಎಂಬ ಕುಟುಂಬಕ್ಕೆ ಪಕ್ಕದ ಜಮೀನಿನ ಮಾಲೀಕ ಹಾಗೂ ಕೆಲ ವ್ಯಕ್ತಿಗಳು ದಾರಿ ಬಿಡದೆ ತೊಂದರೆ ಕೊಡುತ್ತಿರುವುದು ಬೆಳಕಿಗೆ ಬಂದಿದೆ ಈ ಕುಟುಂಬ ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಸಿದ್ದು ಅಧಿಕಾರಿಗಳು ತಹಶೀಲ್ದಾರ್ ಗಮನಕ್ಕೂ ತಂದಿದ್ದು, ಕೂಡಲೇ ಎಚ್ಚೆತ್ತ ತಹಸಿಲ್ದಾರ್ ಸ್ಥಳದಲ್ಲೇ ಮೊಕ್ಕಂ ಹೂಡಿ.

ದಾರಿ ಬಿಡದೆ ತೊಂದರೆ ಕೊಡುತ್ತಿದ್ದ ವ್ಯಕ್ತಿಗಳಿಗೆ ಕಾನೂನಿನ ಎಚ್ಚರಿಕೆ ಕೊಟ್ಟು ಕೊನೆಗೆ ತೋಟಕ್ಕೆ ಮತ್ತು ಮನೆಗೆ ಓಡಾಡಲು ಎಂಟು ಅಡಿ ಜಾಗವನ್ನು ತೆರೆವು ಮಾಡಿಸುವುದರ ಮೂಲಕ ಓಡಾಡಲು ದಾರಿ ಇಲ್ಲದೆ ಕಂಗಾಲಾಗಿದ್ದ ಮಂಗಳಮ್ಮ ಮಂಜುನಾಥ್ ಕುಟುಂಬಕ್ಕೆ ದಾರಿ ಬಿಡಿಸಿದ್ದಾರೆ, ಒಟ್ಟಾರೆ ವಕೀಲರಾದ ಹರಿರಾಮ್ ಮತ್ತು ತಹಶೀಲ್ದಾರ್ ಅಹಮದ್ ಹಾಗೂ ಪೊಲೀಸ್ ಇಲಾಖೆ ಕೂಡ ಮಂಗಳಮ್ಮ ಮಂಜುನಾಥ್ ಕುಟುಂಬಕ್ಕೆ ಪರಿಣಾಮಕಾರಿಯಾಗಿದ್ದ ದಾರಿ ಸಮಸ್ಯೆಯನ್ನು ಬಗೆಹರಿಸಿ ಈ ಬಡ ಕುಟುಂಬಕ್ಕೆ ದಾರಿದೀಪವಾಗಿ ವಿಜೃಂಭಿಸಿದ್ದಾರೆ ಎನ್ನಬಹುದು.

ಕೂಡಲೇ ಸ್ಪಂದಿಸಿ ಓಡಾಡಲು ದಾರಿ ಬಿಡಿಸಿದ ವಕೀಲರಾದ ಹರಿರಾಮ್, ತಹಶೀಲ್ದಾರ್ ಅಹಮದ್, ಹಾಗೂ ಪೊಲೀಸ್ ಇಲಾಖೆಗೆ ಮಂಗಳಮ್ಮ ಮಂಜುನಾಥ್ ದಂಪತಿಗಳು ಮಾಧ್ಯಮದ ಮುಖೇನ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *