Document

Tiptur:  2025-26ನೇ ಸಾಲಿನ SSLC  ಫಲಿತಾಂಶ ಪ್ರಕಟ- ತಿಪಟೂರು ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.

JANATAA24 NEWS DESK 

 

 

Tiptur:  2025-26ನೇ ಸಾಲಿನ SSLC  ಫಲಿತಾಂಶ ಪ್ರಕಟ- ತಿಪಟೂರು ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.

Tiptur,

ತಿಪಟೂರು : ಜಿಲ್ಲೆಗೆ ಪ್ರಥಮ ಸ್ಥಾನ, ತಿಪಟೂರು ತಾಲೂಕಿಗೆ ಲಭಿಸಿದೆ. ಈ ವೇಳೆ ಮಾಧ್ಯಮದೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ 2025-26ನೇ ಸಾಲಿನಲ್ಲಿ ತಾಲ್ಲೂಕಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ತಾಲ್ಲೂಕಿನಲ್ಲಿ ಒಟ್ಟು 2251 ಮಕ್ಕಳು ಪರೀಕ್ಷೆಯನ್ನು ಬರೆದಿದ್ದು 2190 ವಿದ್ಯಾರ್ಥಿಗಳು ಉತ್ತಿರ್ಣರಾಗಿರುತ್ತಾರೆ. 61 ವಿದ್ಯಾರ್ಥಿಗಳು ಅನುತೀರ್ಣರಾಗಿರುತ್ತಾರೆ ತಾಲ್ಲೂಕಿನ ಒಟ್ಟು ಫಲಿತಾಂಶ 97.29% ಬಂದಿದ್ದು ಈ ಬಾರಿ ನಮ್ಮ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.

 

ಈ ಬಾರಿಯ ಫಲಿತಾಂಶದಲ್ಲಿ ನಮ್ಮ ತಾಲ್ಲೂಕಿನಲ್ಲಿ 1107 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದು 1083 ಬಾಲಕಿಯರು ಉತ್ತಿರ್ಣರಾಗಿರುತ್ತಾರೆ.. ಬಾಲಕಿಯರ ಫಲಿತಾಂಶ 97.83%, 1144 ಬಾಲಕರು ಪರೀಕ್ಷೆಯನ್ನು ಬರೆದಿದ್ದು 1107 ಬಾಲಕರು ಉತ್ತಿರ್ಣರಾಗಿರುತ್ತಾರೆ. ಬಾಲಕರ ಫಲಿತಾಂಶ 96.77%. ತಾಲ್ಲೂಕಿನ ಸರ್ಕಾರಿ ಶಾಲೆಗಳ ಫಲಿತಾಂಶ 96.56% ಅನುದಾನಿತ ಶಾಲೆಗಳ ಫಲಿತಾಂಶ 96.90% ಅನುದಾನರಹಿತ ಶಾಲೆಗಳ ಫಲಿತಾಂಶ 98.96% ಪಡೆದಿದೆ. ನಮ್ಮ ತಾಲ್ಲೂಕಿನಲ್ಲಿ 600ಕ್ಕಿಂತ ಹೆಚ್ಚು ಅಂಕಗಳನ್ನು 59 ವಿದ್ಯಾರ್ಥಿಗಳು ಪಡೆದಿದ್ದಾರೆ. ತಾಲ್ಲೂಕಿನ ನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಮಣಿಕಂಠ ಕೆ ನಳಂದ ಪ್ರೌಢಶಾಲೆ ವಿದ್ಯಾರ್ಥಿ 621 ಅಂಕಗಳನ್ನು ಪಡೆದಿರುತ್ತಾರೆ. ದ್ವಿತೀಯ ಸ್ಥಾನ ವಿಸ್ಮಯ ಜಿ ಆರ್ ಶ್ರೀಮದ್ ರಂಭಪುರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿ 620 ಅಂಕಗಳನ್ನು ಪಡೆದಿರುತ್ತಾರೆ. ತೃತೀಯ ಸ್ಥಾನ ಪ್ರಜ್ವಲ್ ಎಮ್ ಪಿ ಶ್ರೀಮದ್ ರಂಭಪುರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿ 619 ಅಂಕಗಳನ್ನು ಪಡೆದಿರುತ್ತಾರೆ.

 

ತಾಲೂಕಿಗೆ ಪ್ರಥಮ ಸ್ಥಾನ ಪಡೆದ ನಳಂದ ಶಾಲೆಯ ಆಡಳಿತ ಅಧಿಕಾರಿ ಶ್ರೀಮತಿ ರೇಖಾ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿ ಮಣಿಕಂಠ ಕೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು 625 ಅಂಕಗಳಿಗೆ 621 ಅಂಕಗಳನ್ನು ಪಡೆದಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದ್ದು ನಮ್ಮ ಶಾಲೆಯು ನೂರರಷ್ಟು ಫಲಿತಾಂಶ ಪಡೆದಿದೆ ಎಂದರು.

 

ವರದಿ :ಮಂಜುನಾಥ್ ಡಿ ತಿಪಟೂರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *