JANATAA24 NEWS DESK
Pavagada: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 88.62 % ಸಾಧನೆ ಹೆಣ್ಣು ಮಕ್ಕಳೆ ಮೇಲುಗೈ.

ಪಾವಗಡ: ಗಡಿ ತಾಲ್ಲೂಕಿನಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ 88.62% ದಾಖಲೆ ಫಲಿತಾಂಶ ಬಂದಿದೆ ಎಂಬುದಾಗಿ ಕ್ಷೆತ್ರ ಶಿಕ್ಷಣಾಧಿಕಾರಿಗಳು ಶ್ರೀಮತಿ ರೇಣುಕಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಹೋದ ವರ್ಷ 55.01 ಶೇಕಡವಾರು ಫಲಿತಾಂಶ ಬಂದಿತ್ತು ಆದರೆ ಈ ಬಾರಿ ಅತಿ ಹೆಚ್ಚು 88.62 ಶೇಕಡವಾರು ದಾಖಲೆ ಫಲಿತಾಂಶ ಬಂದಿದೆ ಎಂದರು.
ಈ ಬಾರಿ ಒಟ್ಟು ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳು ಸಂಖ್ಯೆ 2577
ಗಂಡು ಮಕ್ಕಳು-1258
ಹೆಣ್ಣು ಮಕ್ಕಳು-1219.
ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಅನುದಾನ ರಹಿತ ಶಾಲೆ, ವಿದ್ಯಾರ್ಥಿ ಸಾಯಿ ವೆಂಕಟ್ 625ಕ್ಕೆ 621 ಅಂಕ ಪಡೆದು ತಾಲೂಕು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ. ವಿನಾಯಕ ಸರಸ್ವತಿ ಆಂಗ್ಲ ಶಾಲೆ ಪಾವಗಡ.
ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿನಿ ಹುಷಾಕಿರಣ್ 625ಕ್ಕೆ 616 ಅಂಕ ಪಡೆದು ತಾಲೂಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕುಮಾರಿ ರಿಷಿತ
625 /613 ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಸಹನಾ ಶಾಲೆ .
ಅನುದಾನಿತ ಶಾಲೆ, ಹೇಮಂತ್ ಕುಮಾರ್ 625ಕ್ಕೆ 611ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂಜಿಎಂ ಪ್ರೌಢಶಾಲೆ ಗುಂಡಾರಹಳ್ಳಿ ತಾಲೂಕು.
ಕುಮಾರಿ ಹರಿಕ ಮುರಾರ್ಜಿ ಶಾಲೆ ವೆಂಕಟಾಪುರ 625 ಕ್ಕೆ 524
ಉತ್ತೀರ್ಣತೆ ದಾಖಲಾಗಿದ್ದು, ಶಿಕ್ಷಣ ವಲಯದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ.
ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಕಳೆದ ವರ್ಷದಿಗಿಂತಲೂ ಉತ್ತಮ ಫಲಿತಾಂಶ ಕಂಡುಬಂದಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರ ಈ ಸಾಧನೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಕೆಲವು ಶಾಲೆಗಳು ಶೇ.100 ಫಲಿತಾಂಶ ದಾಖಲಿಸುವ ಮೂಲಕ ಗಮನ ಸೆಳೆದಿವೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಪ್ರಶಂಸನೀಯವಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ವ್ಯಕ್ತವಾಗುತ್ತಿದ್ದು, ಮುಂದಿನ ಹಂತದ ಶಿಕ್ಷಣದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶಿಕ್ಷಕರು ಪ್ರೇರಣೆ ನೀಡಿದ್ದಾರೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.