Janataa24 NEWS DESK
Turuvekere: MLA MT Krishnappa has called the farmers to protest.

ತುರುವೇಕೆರೆ: ತಾಲೂಕಿನ ಪಟ್ಟಣದಲ್ಲಿರುವ ಶಾಸಕ ಎಂ ಟಿ ಕೃಷ್ಣಪ್ಪ ಅವರ ಗೃಹದಲ್ಲಿ ಇಂದು, ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯಿಂದ ಗುರುವಾರದಂದು ಡಿ, ರಾಂಪುರದಲ್ಲಿ ನಡೆಯುವ ಹೋರಾಟಕ್ಕೆ ರೈತ ಬಾಂಧವರಿಗೆ ಕರೆ ನೀಡಲು ಶಾಸಕ ಎಂ ಟಿ ಕೃಷ್ಣಪ್ಪ ಪತ್ರಿಕಾ ಮಾಧ್ಯಮಗೋಷ್ಠಿ ನಡೆಸಿದರು.
ಏನಿದು ಹೋರಾಟ ಎಂಬ ಪ್ರಶ್ನೆಗೆ ಉತ್ತರ ನೀಡಿದ, ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ, ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ 24.5 TMC ನೀರನ್ನು ಹಂಚಿಕೆ ಮಾಡಿರುವುದು ಸರಿ ಅಷ್ಟೇ, ಆದರೆ ಪ್ರತಿ ವರ್ಷವೂ ಹಂಚಿಕೆ ಮಾಡಿರುವ ಪೂರ್ಣ ಪ್ರಮಾಣದ ನೀರನ್ನು ಹರಿಬಿಡದೆ, ಜಿಲ್ಲೆಯ ರೈತರು, ಜನ ಜಾನುವಾರುಗಳು, ಪ್ರಾಣಿ ಪಕ್ಷಿಗಳು, ಕುಡಿಯುವ ನೀರಿಗಾಗಿ ಹಾಹಾಕಾರ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ,ಆದರೂ ರಾಮನಗರ ಜಿಲ್ಲೆಗೆ ನೀರನ್ನು ಕೊಂಡೊಯ್ಯಲು ಗುಬ್ಬಿ ತಾಲೂಕಿನ ಡಿ ರಾಂಪುರ ಗ್ರಾಮದ ಹತ್ತಿರ ಸುಮಾರು 7 ಅಡಿ ಹಾಳಕ್ಕೆ ಪೈಪ್ ಲೈನ್ ಅನ್ನು ಅಳವಡಿಸಿ ಸುಮಾರು 35.4 ಕಿಲೋಮೀಟರ್ ದೂರಕ್ಕೆ ತುಮಕೂರು ಜಿಲ್ಲೆಗೆ ಹಂಚಿಕೆಯಾದ ನೀರನ್ನು ರಾಮನಗರ ಜಿಲ್ಲೆಗೆ ಹರಿಸಲು ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಸುತ್ತಿದೆ, ಇದರಿಂದ ತುಮಕೂರು ಜಿಲ್ಲೆಯ ರೈತಾಪಿ ವರ್ಗಕ್ಕೆ ಅನ್ಯಾಯವಾಗುತ್ತಿದೆ, ಈಗಾಗಲೇ ಇದರ ವಿರುದ್ಧ ರೈತರು,ವಿವಿಧ ಸಂಘಟನೆಗಳು, ಮಠಾಧೀಶರುಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ವಿರೋಧ ವ್ಯಕ್ತಪಡಿಸಿದ್ದಾವೆ.
ಹಾಗಾಗಿ ಇದೆ ಗುರುವಾರ, 16-5-2024 ರಂದು ಗುಬ್ಬಿ ತಾಲೂಕಿನ ಡಿ ರಾಂಪುರ ಗ್ರಾಮದಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ನಡೆಸುತ್ತಿರುವ ಕಾಮಗಾರಿಯ ಸ್ಥಳದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ, ರೈತರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ವಿವಿಧ ಪರ ಸಂಘಟನೆಗಳು, ಮಹಿಳಾ ಸ್ವಸಹಾಯ ಸಂಘಗಳು, ಮಠಾಧೀಶರು, ಸಾವಿರಾರು ಸಂಖ್ಯೆಯಲ್ಲಿ ಪಕ್ಷಾತೀತವಾಗಿ ನಮ್ಮ ನೀರು – ನಮ್ಮ ಹಕ್ಕು ಎಂಬ ಈ ಬೃಹತ್ ಹೋರಾಟಕ್ಕೆ ಆಗಮಿಸುವಂತೆ ಸಮಸ್ತ ನಾಗರಿಕರಲ್ಲಿ ಮನವಿ ಮಾಡಿ ಹೋರಾಟಕ್ಕೆ ತುರುವೇಕೆರೆ ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ ನಮ್ಮ ಮಾಧ್ಯಮದ ಮುಖಾಂತರ ಕರೆ ನೀಡಿದ್ದಾರೆ,ಇದೇ ಸಂದರ್ಭದಲ್ಲಿ, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇ ಗೌಡ, ವೆಂಕಟಪುರ ಯೋಗೀಶ್, ಭುವನಹಳ್ಳಿ ದೇವರಾಜ್, ಹೊನ್ನೇನಳ್ಳಿ ಕೃಷ್ಣಮೂರ್ತಿ, ಹರಿಕಾರನಹಳ್ಳಿ ಮಂಜುನಾಥ್, ಸೊಪ್ಪನಹಳ್ಳಿ ರಂಗನಾಥ್, ಮಂಗಿಕುಪ್ಪೆ ಬಸವರಾಜ್, ಇನ್ನು ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸಿತರಿದ್ದರು.
ವರದಿ: ಮಂಜುನಾಥ್–ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/accident-car-accident-kills-two-teachers-serious/