Document

SSLC Results: ತಿರುಮಲ ರಾಘವೇಂದ್ರ ಶಾಲೆಗೆ ಶೇ 70ರಷ್ಟು ಫಲಿತಾಂಶ.

SSLC Results: 70% result for Tirumala Raghavendra School Pavagada.

Pavagada 70 result for Tirumala Raghavendra School

ಪಾವಗಡ: ತಾಲೂಕಿನ ಕನ್ನಡ ಮಾದ್ಯಮ ಹಾಗೂ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳ ಪೈಕಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ(SSLC) ಪರೀಕ್ಷೆಯಲ್ಲಿ ತಾಲೂಕಿನ ಮಂಗಳವಾಡ ಗ್ರಾಮದ ತಿರುಮಲ ರಾಘವೇಂದ್ರ ಪ್ರೌಢಶಾಲೆಗೆ ಶೇ 70ರಷ್ಟು ಫಲಿತಾಂಶ ಹೊರಬರುವ ಮೂಲಕ ಮೇಲು ಗೈ ಸಾಧಿಸಿದೆ.ಶಾಲೆಗೆ ಕೆಟ್ಟ ಹೆಸರು ತರಲು ಕೆಲವರು ಇಲ್ಲ ಸಲ್ಲದ ಅಪಪ್ರಚಾರದಲ್ಲಿ ನಿರತರಾಗಿರುವುದು ಅತ್ಯಂತ ನೋವು ತಂದಿದೆ ಎಂದು ತಿರುಮಲ ರಾಘವೇಂದ್ರ ಪ್ರೌಢಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮೀನರಸಯ್ಯ ಆಸಮಾಧಾನ ವ್ಯಕ್ತಪಡಿಸಿದರು.

1968ರಿಂದ 2023ರವರೆವಿಗೂ ಶಾಲೆಗೆ ನಿರೀಕ್ಷೆಗೆ ಮೀರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಲಭ್ಯವಾಗಿದೆ.ಇಲ್ಲಿನ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸ್ವದೇಶ ಹಾಗೂ ವಿದೇಶಗಳಲ್ಲಿ ಅತ್ತುನ್ನತ ಕೆಲಸಕ್ಕೆ ಸೇರಿದ್ದಾರೆ.ಏರ್‌ಪೋರ್ಟ್‌ ಹಾಗೂ ಬ್ಯಾಂಕ್‌ ಮತ್ತು ಸಾಪ್ಟ್‌ವೇರ್‌ ಕಂಪನಿಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದು ಹೆಮ್ಮೆ ತರುತ್ತಿದೆ ಎಂದ ಅವರು ಕೆಲ ಸ್ಥಳೀಯರು ಶಾಲೆಗೆ ಕೆಟ್ಟ ಹೆಸರು ತರುವಲ್ಲಿ ನಿರತರಾಗಿದ್ದು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಕುರಿತು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.ಶಾಲೆಯ ಮುಖ್ಯೋಪಾಧ್ಯಾಯ ಆರ್‌.ರಮೇಶ್‌ ಮಾತನಾಡಿ ಗುಣಮಟ್ಟದ ಶಿಕ್ಷಣ ರೂಪಿಸುವ ಹಿನ್ನಲೆಯಲ್ಲಿ ಇಲ್ಲಿನ ತಿರುಮಲ ರಾಘವೇಂದ್ರ ಪ್ರೌಢಶಾಲೆಗೆ ಉತ್ತಮ ಹೆಸರಿದೆ.ಕಳೆದ ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಶೇ,100ರಷ್ಟು ಶಾಲೆಗೆ ಲಭ್ಯವಾದ ಬಗ್ಗೆ ದಾಖಲೆಗಳಿವೆ.ಪ್ರಸಕ್ತ ಸಾಲಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಲಕ್ಷ್ಮೀ,ದುರ್ಗಾ ಲಕ್ಷ್ಮೀ ಶಾಲೆಯ ಪ್ರಗತಿ ಬಗ್ಗೆ ಮಾತನಾಡಿದ್ದಾರೆ.ಇನ್ನೂ ಪ್ರೌಢಶಾಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ನಂಜುಂಡಯ್ಯಶೆಟ್ಟಿ,ಖಚಾಂಚಿ ಭೀಮಣ್ಣ,ನಿರ್ದೇಶಕರಾದ ಈರಕ್ಯಾತಪ್ಪ ಮೂಡ್ಲಗಿರಿಯಪ್ಪ,ಧನುಂಜಯ,ಲಕ್ಷ್ಮೀನರಸಿಂಹಯ್ಯ ಎಸ್‌.ಆರ್‌.ವೆಂಕಟರಾಮ್‌,ಲಕ್ಷ್ನೀಕಾಂತ್‌,ಕದುರಪ್ಪ ಮತ್ತಿತರರಿದ್ದರು.

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/turuvekere-mla-m-t-krishnappa-has-called-farmers/

Document

Leave a Reply

Your email address will not be published. Required fields are marked *