Janataa24 NEWS DESK

ಪಾವಗಡ: ಕಷ್ಟವಾಗಲಿದೆಸಿಜರಿನ್ ಮಾಡಬೇಕು ತುಮಕೂರಿಗೆ ಹೋಗಿ ಎಂದು ತಿಳಿಸಿ ವೈದ್ಯರು ಕೈ ಚೆಲ್ಲಿದರೂ ಪರಿಣಾಮ ಹಣ ನೀಡಿ ಸಿಜರಿಯನ್ ಹೆರಿಗೆ ಮಾಡಿಸಲಾಯಿತು.ಇಂತಹ ಘಟನೆಗಳು ಸಾಕಾಷ್ಟು ಆಸ್ಪತ್ರೆಯಲ್ಲಿ ನಡೆಯುತ್ತಿವೆ.ಇಲ್ಲಿನ ವೈದ್ಯರು ಹಣಕ್ಕೆ ಪ್ರಮುಖ್ಯತೆ ಕೊಡುತ್ತಾರೆ.ಹಣ ಕೊಡದಿದ್ದರೆ ರೋಗಿಯನ್ನು ನಾಯಿಗಿಂತ ಕಡೆಯಾಗಿ ಕಾಣುತ್ತಾರೆ.ಇದರ ವಿರುದ್ದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಕರ್ನಾಟಕ ದಲಿತ ಮಾನವ ಹಕ್ಕುಗಳ ವೇದಿಕೆ ತಾ,ಕಾರ್ಯಕರ್ತೆ ಲತಾ ಮಾತನಾಡಿ ವಿವಿಧ ಕಾಯಿಲೆಗಳಿಂದ ಆಸ್ಪತ್ರೆಗೆ ಬಂದ ಬಡ ರೋಗಿಗಳಿಗೆ ಭಯ ಹುಟ್ಟಿಸಿ ಹಣ ಕೀಳುವ ಪ್ರವೃತ್ತಿ ಸರ್ಕಾರಿ ಆಸ,ತ್ರೆಯ ವೈದ್ಯರು ರೂಡಿಸಿಕೊಂಡಿದ್ದು,ಸರ್ಕಾರಿ ಆಸ್ಪತ್ರೆ ಎಂದರೇ ಭಯದ ವಾತಾವರಣ ಸೃಷ್ಟಿಯಾಗಿದೆ.ವೈದ್ಯರೆಂದರೆ ರೋಗಿ ಸಂಬಂಧಿಸಿದ ಎಲ್ಲಾ ರೀತಿಯ ತರಬೇತಿ ಪಡೆದಿರುತ್ತಾರೆ.
ಗರ್ಭಕೋಶ ಹಾಗೂ ಸಂತಾನಹರಣದ ವೇಳೆ ಸರಿಯಾದ ಚಿಕಿತ್ಸೆ ನೀಡದೇ ಮೂರು ಮಂದಿ ಬಡ ಮಹಿಳೆಯರ ಸಾವಿಗೆ ಕಾರಣರಾದ ಈ ವೈದ್ಯರಾದ ಡಾ.ಪೂಜಾ ಹಾಗೂ ಸಿಬ್ಬಂದಿಗೆ ತಕ್ಕ ಶಿಕ್ಷೆಯಾಗಬೇಕು.ಸಾವಿನ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ ಕೊಲೆ ಪ್ರಕರಣದ ಅಡಿಯಲ್ಲಿ ಇವರನ್ನು ಜೈಲಿಗೆ ಕಳುಹಿಸಬೇಕು.ಆಸ್ಪತ್ರೆಯ ನಿರ್ವಹಣೆ ಹೊತ್ತ ವೈದ್ಯ ಡಾ.ಕಿರಣ್ನನ್ನು ಜಿಲ್ಲೆಯಿಂದ ಬೇರೆಡೆ ವರ್ಗಾಯಿಸುವಂತೆ ಅವರು ಒತ್ತಾಯಿಸಿದರು.
ಇದೇ ವೇಳೆ ದಲಿತ ಮಾನವ ಹಕ್ಕುಗಳ ವೇದಿಕೆಯ ತಾಲೂಕು ಉಸ್ತುವಾರಿಯಾದ ರಾಮಕೃಷ್ಣ ಮತ್ತಿತರರಿದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ
https://www.janataa24.com/landgrabbing-raj
https://youtube.com/@janataa24?si=XsFcych2GMH0O6Gv