Document

ಕಟ್ಟಕಡೆಯ ದಟ್ಟ ದರಿದ್ರ ಸರ್ಕಾರ ಕಾಂಗ್ರೆಸ್ ಸರ್ಕಾರ: ಶಾಸಕ ಎಂ ಟಿ ಕೃಷ್ಣಪ್ಪ ವಾಗ್ದಾಳಿ.

Janataa24 NEWS DESK

ಕಟ್ಟಕಡೆ ದಟ್ಟ ದರಿದ್ರ ಸರ್ಕಾರ ಕಾಂಗ್ರೆಸ್ ಸರ್ಕಾರ: ಶಾಸಕ ಎಂ ಟಿ ಕೃಷ್ಣಪ್ಪ ವಾಗ್ದಾಳಿ.



ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಂ ಟಿ ಕೃಷ್ಣಪ್ಪ ಅವರಿಂದ ಪತ್ರಿಕಾ ಮಾಧ್ಯಮ ಘೋಷ್ಠಿ.

IMG 20240209 WA0013



ಇದೆ ವೇಳೆ ಮಾತನಾಡಿದ ಶಾಸಕ ಎಂ ಟಿ ಕೃಷ್ಣಪ್ಪ ಅವರು ಈಗಾಗಲೇ ಪಟ್ಟಣದ ಎ ಪಿ ಎಂ ಸಿ ಮತ್ತು ತಾಲೂಕಿನ ಸುತ್ತಮುತ್ತ ಹೋಬಳಿವಾರು ಸುಮಾರು 16 ಕೊಬ್ಬರಿ ಕೇಂದ್ರಗಳನ್ನು ಇದೇ ಬುಧವಾರದಿಂದ ತೆರೆಯಲಾಗಿದ್ದು,

ಎಲ್ಲಾ ಕೇಂದ್ರಗಳಲ್ಲಿ ನೂಕು ನುಗ್ಗಲುಗಳಿಂದ ಕೂಡಿದ್ದು ರೈತರು ಪರದಾಡುವಂಥ ಸ್ಥಿತಿ ಬಂದಿದೆ, ಹಾಗಾಗಿ ನಮ್ಮ ತಾಲೂಕಿನ ರೈತರಿಗೆ ಹೇಳುವುದೇನೆಂದರೆ ಯಾವುದೇ ಕಾರಣಕ್ಕೂ ಇಲ್ಲ ಸಲ್ಲದ ಗೊಂದಲಕ್ಕೆ ಧೃತಿಗೆಡಬೇಡಿ ,ಎಲ್ಲಾ ಕೇಂದ್ರಗಳಲ್ಲೂ ನಮ್ಮ ರೈತರು ರಾತ್ರಿ ಇಡಿ ಕಾಯ್ದು ಕುಳಿತು ನೆಪೆಡ್ ಕೇಂದ್ರಗಳಲ್ಲಿ ಪರದಾಡುವ ಸ್ಥಿತಿ ಬಂದಿರುವುದು ನಾನು ಕೂಡ ಕಣ್ಣಾರೆ ಕಂಡಿದ್ದೇನೆ.



ಈ ಕೂಡಲೇ ನಾನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಮತ್ತು ಎಂ ಡಿ ಅವರ ಗಮನಕ್ಕೂ ತಂದು ಇನ್ನೂ ಹೆಚ್ಚಿನ ಸಮಯವಕಾಶವನ್ನು ಕೇಳಿ ನಮ್ಮ ತಾಲೂಕಿನ ರೈತರಿಗೆ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ರೈತರಿಂದ ಕೊಬ್ಬರಿ ಖರೀದಿ ಮಾಡಿಸುತ್ತೇನೆ ಎಂದರು.

IMG 20240209 WA0014



ಮುಂದುವರೆದು ಮಾತನಾಡಿದವರು ನನ್ನ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡದೇ ದ್ರೋಹ ಮಾಡಿದೆ , ಜೊತೆಗೆ ಈ ಕಾಂಗ್ರೆಸ್ ಸರ್ಕಾರ ಕೇವಲ ವೋಟ್ ಪಡೆಯುವುದಕಷ್ಟೇ ಗಿಮಿಕ್ ಮಾಡಿ ನಮ್ಮ ಸರ್ಕಾರ ಹಿಂದುಳಿದವರ ಪರ ಸರ್ಕಾರ ಎಂದು ಹೇಳಿರುವ ಮುಖ್ಯಮಂತ್ರಿ ಅವರ ಮಾತು ಬರೀ ಸುಳ್ಳು ,ಈ ಸರ್ಕಾರ ಕಟ್ಟ ಕಡೆ ದಟ್ಟ ದರಿದ್ರ ಸರ್ಕಾರ ಎಂದು ನೇರ ಆರೋಪ ಮಾಡಿದರು.



ಇದೆ ವೇಳೆ ಜೆಡಿಎಸ್ ಮುಖಂಡರಾದ ವೆಂಕಟಪುರ ಯೋಗೀಶ್, ದಲಿತ ಮುಖಂಡರುಗಳಾದ ಬಿಗಿನೆನಹಳ್ಳಿ ಪುಟ್ಟರಾಜು, ತೋವಿನಕೆರೆ ರಂಗಸ್ವಾಮಿ, ಬೀಚನಹಳ್ಳಿ ರಾಮಣ್ಣ ಮುನಿಯೂರು ರಂಗಸ್ವಾಮಿ, ಇನ್ನು ಅನೇಕ ಜೆ ಡಿ ಎಸ್ ಮುಖಂಡರುಗಳು ಹಾಗೂಭಾಗಿಯಾಗಿದ್ದರು.



ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

Document

Leave a Reply

Your email address will not be published. Required fields are marked *