Document

ಮಸಾಲ ಜೈರಾಮ್ ಅವರ ಜೆ ಎಸ್ ಫಾರಂ ಹೌಸ್ ನಲ್ಲಿ ಗ್ರಾಮ ಚಲೋ ಅಭಿಯಾನ.

Janataa24 NEWS DESK

IMG 20240209 WA0021



ತುರುವೇಕೆರೆ: ತಾಲೂಕಿನ ಮಾಜಿ ಶಾಸಕರಾದ ಮಸಾಲ ಜೈರಾಮ್ ಅವರ ತೋಟದ ಮನೆಯಾದ ಜೆ ಎಸ್ ಫಾರಂ ಹೌಸ್ ನಲ್ಲಿ ಭಾರತೀಯ ಜನತಾ ಪಾರ್ಟಿ ತುರುವೇಕೆರೆ ಮಂಡಲದ ವತಿಯಿಂದ,

ಗ್ರಾಮ ಚಲೋ ಅಭಿಯಾನ ಮತ್ತು ಬೂತ್ ಸಂಚಾಲಕರು ಹಾಗೂ ಪ್ರವಾಸಿ ಕಾರ್ಯಕರ್ತರ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು,

IMG 20240209 WA0022



ಈ ಕಾರ್ಯಗಾರವನ್ನು ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ರೀ ವಿನಯ್ ಬಿದರೆ, ಹಾಗೂ ನಿಕಟಪೂರ್ವ ಶಾಸಕರಾದ ಮಸಾಲ ಜೈರಾಮ್, ಮತ್ತು ಮಂಡಲ ಅಧ್ಯಕ್ಷರಾದ ಮೃತ್ಯುಂಜಯ ,ಹೆಬ್ಬಾಕ ರವಿಶಂಕರ್ ರವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು,

ಇದೆ ವೇಳೆ ನಿಕಟ ಪೂರ್ವ ಶಾಸಕರಾದ ಮಸಾಲ ಜೈರಾಮ್ ಮಾತನಾಡಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಬಳಿಕ ನಮ್ಮ ಜನತಾ ಪಾರ್ಟಿಯಲ್ಲಿ ಸುಮಾರು 35 ಪರ್ಸೆಂಟ್ ವೋಟರ್ಸ್ಗಳು ಹೆಚ್ಚಾಗಿದ್ದು ಚುನಾವಣೆಯ ಪ್ರಚಾರ ಈಗಾಗಲೇ 35 ರಷ್ಟು ಭಾಗ ಮುಗಿದಿದೆ.

IMG 20240209 WA0023



ಆದರೆ ನಾವುಗಳು ಶ್ರೀ ರಾಮನ ಹೆಸರು ಹೇಳಿ ಗೆಲ್ಲುತ್ತೇವೆ ಎನ್ನುವುದು ಸುಳ್ಳು ನಾವುಗಳು ಮತದಾರರ ಮನ ಪರಿವರ್ತನೆ ಮಾಡಿದರೆ ಮಾತ್ರ ನಮಗೆ ಮತ ನೀಡುವುದು, ಶ್ರೀ ರಾಮನ ಹೆಸರು ಹೇಳಿಕೊಂಡು ಗೆಲ್ಲುತ್ತೇವೆ ಎಂಬುದು ಸುಳ್ಳು ಎಂದರು.

IMG 20240209 WA0024



ಇದೇ ಸಂದರ್ಭದಲ್ಲಿ ಗ್ರಾಮ ಚಲೋ ಅಭಿಯಾನದ ಸಂಚಾಲಕರಾದ ರುದ್ರೇಶ್ ಇವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಗಾರದಲ್ಲಿ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಎಲ್ಲಾ ಮೋರ್ಚಾಗಳ ಅಧ್ಯಕ್ಷರುಗಳು ,ಹಿರಿಯ ಮುಖಂಡರು, ಭೂತ್ ಅಧ್ಯಕ್ಷರು, ಮತ್ತು ಅಭಿಯಾನದ ಸಂಚಾಲಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *