Document

ಗರ್ಭಗುಡಿ ಪ್ರವೇಶಿಸಿದ ಸೂರ್ಯನ ಕಿರಣಗಳು

Janataa24 NEWS DESK

img 20240221 wa001936937006832164701



ಪಾವಗಡ: ತಾಲೂಕಿನ ವೆಂಕಟಮ್ಮನಹಳ್ಳಿಯ ಗ್ರಾಮದ
ಗಡಿಪ್ರದೇಶದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಲಕ್ಷ್ಮಮ್ಮ ದೇವಿ ಹಾಗೂ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲದಲ್ಲಿ

img 20240221 wa00185080919604480684804

ಸೂರ್ಯನ ಕಿರಣಗಳು ಗರ್ಭಗುಡಿ ಪ್ರವೇಶಿಸಿ ದೇವರ ವಿಗ್ರಹ ಮೇಲೆ ಪ್ರಕಾಶಿಸಿವೆ. ಈ ವಿಸ್ಮಯ ಭಕ್ತರಲ್ಲಿ ಅಚ್ಚರಿ ಹಾಗೂ ಭಕ್ತಿಭಾವ ಹೆಚ್ಚಿಸಿದೆ.

img 20240221 wa00227388067019958858202

ವೆಂಕಟಮ್ಮನಹಳ್ಳಿ ಹೊರವಲಯದಲ್ಲಿ ದಾನಿಗಳ ಸಹಕಾರದ ಮೇರೆಗೆ ಇತ್ತೀಚೆಗೆ ಕೋಟ್ಯಂತರು ರು. ವೆಚ್ಚದ ನಿರ್ಮಿಸಿದ್ದು, ಮಂಗಳವಾರ ಬೆಳಿಗ್ಗೆ ಸೂರ್ಯನ ಕಿರಣಗಳು ವಿಗ್ರಹವನ್ನು ತಾಕಿವೆ.

img 20240221 wa00232281364639057426720

ನಿಮಿಷಕ್ಕೂ ಹೆಚ್ಚು ಕಾಲ ಸೂರ್ಯನ ಕಿರಣ ಪ್ರಕಾಶಿಸಿದೆ. ಮೊಬೈಲ್‌ನಲ್ಲಿ ಸೆರೆ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿತ್ತಿದ್ದಾರೆ ಎಂದು ದೇವಸ್ಥಾನ ಸಮಿತಿಯ ಮುಖಂಡ ಡಾ.ಜಿ. ವೆಂಕಟರಾಮಯ್ಯ ತಿಳಿಸಿದ್ದಾರೆ.

img 20240221 wa00202433713175509244860


ಅಂತರ ಮಾತನಾಡಿ ಒಂದು ದೇವಸ್ಥಾನ ನೂತನ ನಿರ್ಮಿಸುವಂತಹ ದೇವಸ್ಥಾನಕ್ಕೆ ಬಹಳಷ್ಟು ಹಿನ್ನೆಲೆ ಇದ್ದು ಈ ಒಂದು ದೇವಸ್ಥಾನದಲ್ಲಿ ಈ ಹಿಂದೆ ಬಹಳಷ್ಟು ಗ್ರಾಮಗಳಿಂದ ಬಂದು ಪೂಜೆ ಸಲ್ಲಿಸಿ ತಮ್ಮ ತಮ್ಮ ಹಾರೈಕೆ ಪೂರ್ಣಗೊಳಿಸುತ್ತಿದ್ದರು ಮದುವೆ ಆದಾಗ ಹೆಣ್ಣು ಮಕ್ಕಳಿಗೆ ಮದುವೆಗಳು ಆಗುವುದು.

img 20240221 wa00215798686697273382478

ಮಕ್ಕಳಾದಂತಹ ಹೆಣ್ಣು ಮಕ್ಕಳಿಗೆ ಮಕ್ಕಳು ಹಾಗೂ ಕೆಲಸ ಇಲ್ಲದಂತಹ ವಿದ್ಯಾವಂತ ಯುವಕ ಯುವತಿಯರಿಗೆ ಕೆಲಸದ ವಿಚಾರವಾಗಿ ಹಾಗೂ ಸಮಸ್ಯೆಗಳ ವಿಚಾರವಾಗಿ ಹರಕೆ ಹೊತ್ತಿದ್ದಂತವರಿಗೆ ಬಹಳಷ್ಟ ಅನುಕೂಲವಾಗಿವೆ ಎಂಬುದು ಈ ಭಾಗದ  ಭಕ್ತಾದಿಗಳ ಮಾತಾಗಿದೆ. ಈ ಒಂದು ದೇವಸ್ಥಾನ ವಿಶೇಷ ಎಂಬುದಾಗಿ ತಿಳಿಸಿದರು.



ವರದಿ: ಇಮ್ರಾನ್ ಉಲ್ಲಾ. ಪಾವಗಡ

Document

Leave a Reply

Your email address will not be published. Required fields are marked *