Document

ವಕೀಲರ ಮೇಲೆ ದಬ್ಬಾಳಿಕೆ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು

Janataa24 NEWS DESK

ವಕೀಲರ ಮೇಲೆ ದಬ್ಬಾಳಿಕೆ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು: ಪಾವಗಡ ವಕೀಲರ ಸಂಘ ಆರೋಪ.

img 20240221 wa00163706504633000335748



ಪಾವಗಡ: ರಾಮನಗರದಲ್ಲಿ ನಡೆದ ವಕೀಲರ ಮೇಲೆ ಸುಳ್ಳು ಪ್ರಕರಣದ ಉದ್ದೇಶಿಸಿ ತಾಲೂಕು ಕಚೇರಿ ಮುಂದೆ ವಕೀಲ ಸಂಘದಿಂದ ಪ್ರತಿಭಟನೆ ಮಾಡಿ ಮನವಿಪತ್ರ ಗ್ರೇಟ್ 2 ತಹಸಿಲ್ದಾರ್ ಮೂರ್ತಿ ಅವರಿಗೆ ಸಲ್ಲಿಸಿದರು.

img 20240221 wa00137161715527016704626



ಕರ್ನಾಟಕ ರಾಜ್ಯದ ರಾಮನಗರ ಜಿಲ್ಲಾ ವಕೀಲರ ಸಂಘದ 40 ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟ‌ರ್ ಸೈಯದ್ ತನ್ವಿರ್ ಹುಸೇನ್ ರವರನ್ನು ಅಮಾನತ್ತು ಮಾಡಬೇಕೆಂದು ಪಾವಗಡ ವಕೀಲರು ಕಕ್ಷಿದಾರರ ಸಲಹೆ ಮೇರೆಗೆ ಇಂದು ದಿನಾಂಕ : 20.02.2024 ರಂದು ಪಾವಗಡ ನ್ಯಾಯಾಲಯಗಳ ಕೆಲಸಗಳಿಂದ ದೂರ ಉಳಿದು ಸದರಿ ಸಬ್‌ಇನ್ಸ್‌ಪೆಕ್ಟ‌ನ್ನು ಅಮಾನತ್ತು ಮಾಡಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲು ಪಾವಗಡ ವಕೀಲರ ಸಂಘ ಮನವಿ ಮಾಡುತ್ತಾರೆ.

img 20240221 wa00125401718718461153611



ಇದೆ ವೇಳೆ ಹಿರಿಯ ವಕೀಲರಾದ ಮುರಳಿಯವರು ಮಾತನಾಡಿ ಪದೇ ಪದೇ ವಕೀಲಮರೆ ದಬ್ಬಾಳಿಕೆ ತಡೆಯುವಂತಹ ಒಂದು ಕಾನೂನು ವ್ಯವಸ್ಥೆ ಮಾಡಬೇಕು.

img 20240221 wa00152874827357250776549



ರಾಮನಗರ ಲಾದಂತಹ ಘಟನೆಯಲ್ಲಿ ನಮ್ಮ ಸಹ ವಕೀಲರು 40 ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ತಾಲೂಕಿನ ವಕೀಲ ಸಂಘದಿಂದ ಆರೋಪಿಸುತ್ತಿದ್ದೇವೆ.

img 20240221 wa00177172377598530878394



ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್ ಶೇಷಾ ನಂದ ಉಪಾಧ್ಯಕ್ಷರಾದಂತ ಹನುಮಂತರಾಯಪ್ಪ ಕಾರ್ಯದರ್ಶಿಯಾದಂತಹ ಹೆಚ್ಚು ಪ್ರಭಾಕರ್ ರೆಡ್ಡಿ. ಖಜಾಂಚಿಯಾದ ಬಿಎಸ್ ಶಿವ ಕೇಶವ್ ರೆಡ್ಡಿ ಹಾಗೂ ತಿರುಮಲೇಶ್. ರವೀಂದ್ರ. ಅಂಬರೀಶ್ ಇತರೆ ವಕೀಲರ ಸಂಘದ ಸದಸ್ಯರು ಈ ಒಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

img 20240221 wa00142893530917119091790



ವರದಿ: ಇಮ್ರಾನ್ ಉಲ್ಲಾ ಪಾವಗಡ.

Document

Leave a Reply

Your email address will not be published. Required fields are marked *