Janataa24 NEWS DESK
Gubbi: ಮುಜರಾಯಿ ದೇವಸ್ಥಾನದ ಜಮೀನು ಉಳಿಸಿ: ಚೌಕೇನಹಳ್ಳಿ ಗ್ರಾಮಸ್ಥರ ಮನವಿ.

Gubbi: ಮುಜರಾಯಿ ದೇವಸ್ಥಾನದ ಜಮೀನು ಉಳಿಸಿ.
ಗುಬ್ಬಿ: ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೆ ಬಳಕೆಯಾಗುತ್ತಿದ್ದ ಕೊಡಗಿ ಜಮೀನು ಮತ್ತೊಬ್ಬರಿಗೆ ಮಾರಾಟವಾಗುತ್ತಿದೆ. ದೇವಸ್ಥಾನದ ಜಮೀನು ದೇವಾಲಯದ ಆಸ್ತಿಯಾಗಿಯೇ ಉಳಿಯಲಿ ಎಂದು ತಹಶೀಲ್ದಾರ್ ಬಿ.ಆರತಿ ಅವರಿಗೆ ಕಸಬಾ ಹೋಬಳಿ ಚೌಕೇನಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಚೌಕೇನಹಳ್ಳಿ ಗ್ರಾಮದ ಇತಿಹಾಸಯುಳ್ಳ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಂಬಂದಿಸಿದ ಸುಮಾರು ಐದು ಎಕರೆ ಜಮೀನು ಕೊಡಗಿಯಾಗಿ ಅರ್ಚಕರ ಕುಟುಂಬಕ್ಕೆ ಸೇರಿದೆ. ದೇವಾಲಯದ ಕೈಂಕರ್ಯ ಮಾಡಿಕೊಂಡು ನಿತ್ಯ ಪೂಜೆ, ಜಾತ್ರೆ ಇನ್ನಿತರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಸುವ ಕುಟುಂಬದ ಜೀವನಕ್ಕೆ ಆಧಾರವಾಗಿರುವ ಈ ಜಮೀನು ಪೈಕಿ ಒಂದು ಎಕರೆ ಮಾರಾಟವಾಗಿ ಕಾನೂನು ರೀತ್ಯಾ ದಾಖಲೆ ಸಿದ್ಧವಾಗುವ ವಿಚಾರ ತಿಳಿದ ಗ್ರಾಮಸ್ಥರು ದೇವಾಲಯದ ಅಭಿವೃದ್ಧಿಗೆ ಈ ಜಮೀನು ಬಳಕೆಯಾಗಬೇಕು ಅಥವಾ ಅಲ್ಲಿನ ಅರ್ಚಕರ ಜೀವನಕ್ಕೆ ಬಳಕೆಯಾಗಬೇಕು. ಆದರೆ ಮಾರುಕಟ್ಟೆ ಬೆಲೆಗೆ ಲಕ್ಷಾಂತರ ರೂಗಳಿಗೆ ಮಾರಾಟವಾಗುವುದು ಸರಿ ಎನಿಸಲಿಲ್ಲ. ದೇವಾಲಯಕ್ಕೆ ಕೊಡಗಿ ಜಮೀನು ಉಳಿಸಿ ಎಂದು ತಹಶೀಲ್ದಾರ್ ಬಳಿ ಚರ್ಚಿಸಿದರು.
ಕಾನೂನು ರೀತ್ಯಾ ಪರಭಾರೆ ಆಗಿದ್ದರೂ ದೇವಾಲಯದ ಅಭಿವೃದ್ಧಿಗೆ ಪೂರಕವಲ್ಲದ ಈ ಘಟನೆ ಇಡೀ ಗ್ರಾಮಕ್ಕೆ ಬೇಸರ ತಂದಿದೆ. ಅರ್ಚಕರ ಜೀವನಕ್ಕೆ ಕೊಡಗಿ ಜಮೀನು ಉಳಿಸಿಕೊಳ್ಳಬೇಕಿದೆ. ಆದರೆ ಮತ್ತೊಬ್ಬರಿಗೆ ಮಾರಾಟ ಮಾಡುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯ ದೇವಾಲಯ ಅಭಿವೃದ್ಧಿಗೆ ಇರುವ ಕೊಡಗಿ ಜಮೀನುಗಳನ್ನು ದೇವಾಲಯದ ಆಸ್ತಿ ಎಂದು ಘೋಷಣೆ ಮಾಡಿ ಜಮೀನು ಉಳಿಸಿ ಗ್ರಾಮಗಳ ಪುರಾತನ ದೇವಾಲಯ ಬೆಳಸಿ ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ ಗ್ರಾಮಸ್ಥರು ಜಿಲ್ಲಾಡಳಿತ ಸಹ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮೂಲಕ ಮುಜರಾಯಿ ದೇವಾಲಯದ ಕೊಡಗಿ ಜಮೀನು ದೇವಾಲಯಕ್ಕೆ ಉಳಿಸಿ ಎಂದು ಚೌಕೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.
ವರದಿ: ಶ್ರೀಕಾಂತ್ ಗುಬ್ಬಿ
https://www.janataa24.com/swami-japananda-swami-is-saving-life-by-giving-water-to-the-dumb-creatures/
https://youtube.com/@janataa24?si=XsFcych2GMH0O6Gv
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv