Janataa24 NEWS DESK
Sathish Jarakiholi : ಸುಳ್ಳು ಹೇಳುವ ಬಿಜೆಪಿ ನಂಬಿ ಮೋಸ ಹೋಗಬೇಡಿ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ತಮ್ಮಗಳಾದ ಪ್ರಿಯಾಂಕಾ(Priyanka) ಜಾರಕಿಹೊಳಿ ಪ್ರಚಾರ ನಡೆಸಿದರು. ಚಿಕ್ಕೋಡಿಯ ಹೃದಯಭಾಗದಲ್ಲಿ ಅತಿಹೆಚ್ಚು ಜನರು ಭಾಗವಹಿಸುವ ರೋಡ್ ಶೋಗೆ ಜಾರಕಿಹೊಳಿ ಅವರು ಸಾಥ್ ನೀಡಿದರು ಅಲ್ಲಿಂದ ಜನಸ್ಥೋಮ ನೋಡಿ ಬೆರಗಾದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಅಂಬೇಡ್ಕರ್ ಸರ್ಕಲ್ ನಿಂದ ಪ್ರಾರಂಭಗೊಂಡು ನಗರದ ಎಲ್ಲೆಡೆ ಬಿರುಸಿನ ಪ್ರಚಾರ ನಡೆಸಿದರು.ಈ ಮತ ಪ್ರಚಾರದಲ್ಲಿ ಅನೇಕ ಅಭಿಮಾನಿಗಳು ಕಾರ್ಯಕರ್ತರು ಪಕ್ಷದ ಮುಂಖಡರು ಭಾಗವಹಿಸಿ ರೋಡ್ ಶೋ(Road Show) ಕಳೆಗಟ್ಟಿಸಿ ಯಶಸ್ವಿಗೊಳಿಸಿದರು
ಪ್ರಚಾರಕ್ಕೆ ಆಗಮನಿಸಿದ್ದ ಮತದಾರರನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮ ಅಧಾರದ ಮೇಲೆ ಚುನಾವಣೆ ಅವಲಂಬಿಸಿರುವುದಿಲ್ಲ ಅಭಿವೃದ್ದಿ ದೃಷ್ಠಿಯಿಂದ ಆಡಳಿತ ಗದ್ದುಗೆ ಏರುತ್ತಿದೆ ಜನರ ಬಳಿ ಓಟು ಕೇಳುತ್ತಿದೆ.ಆದರೇ ಬಿಜೆಪಿಯಂತೆ ಧರ್ಮ ಹಿಂದುತ್ವ ಸುಳ್ಳಿನ ಮೂಲಕ ಮತ ಕೇಳುತ್ತಿಲ್ಲ ಎಂದರು
ಬಿಜೆಪಿಯವರು ಹೇಳುವ ಸುಳ್ಳು ನಂಬಿ ಮೋಸ ಹೋಗಬೇಡಿ. ಚಿಂತಿಸಿ ನಿರ್ಧಾರಿಸಿ ಓಟು ಮಾಡಿ ಎಂದೂ ಮತರಾರರಿಗೆ ಲೋಪಯೋಗಿ ಇಲಾಖೆ ಸಚಿವ ಸತೀಶ್ ಚಾರಕಿಹೊಳಿ ಮತದಾರಿಗೆ ಹೇಳಿದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube