janataa24 NEWS DESK
Gubbi : ಒಂದು ಮತಗಳ ಅಂತರದಿಂದ ಯೋಗಿಶ್ ಭರ್ಜರಿ ಗೆಲುವು.

ಗುಬ್ಬಿ : ತಾಲೂಕಿನ ಹಾಗಲವಾಡಿ ಹೋಬಳಿಯ ಅಳಿಲುಘಟ್ಟ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷ (President) ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬೆಟ್ಟದಹಳ್ಳಿ ಯೋಗಿಶ್ ಅವರು ಒಂದು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಳಿಲುಘಟ್ಟ ಗ್ರಾಮ ಪಂಚಾಯತಿಯಲ್ಲಿ ಒಟ್ಟು 20 ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಟ್ಟದಲ್ಲಿ ಯೋಗಿಶ್ ರವರಿಗೆ 10 ಮತಗಳು ದೊರೆತಿದ್ದು ಭರ್ಜರಿ ಗೆಲುವು ಸಾಧಿಸಿದ್ದಾರೆ. ದೊಡ್ಡ ಕೆಂಪಯ್ಯನವರು 9 ಮತಗಳನ್ನು ಪಡೆದು ಪರ ಜಯಗೊಂಡಿದ್ದಾರೆ. ಒಂದು ಮತವು ಅನರ್ಹವಾಗಿದೆ.
ನೂತನ ಅಧ್ಯಕ್ಷ ಬೆಟ್ಟದಳ್ಳಿ ಯೋಗಿಶ್ (Bettadahalli Yogesh)ಮಾತನಾಡಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಸರ್ವ ಸದಸ್ಯರಿಗೆ ಗುರು ಹಿರಿಯರಿಗೆ ಹಾಗೂ ಹಿತೈಷಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿ. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಭೇದ ಭಾವವಿಲ್ಲದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತೇನೆ. ಬಿರು ಬೇಸಿಗೆಯಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡುತ್ತೇನೆ.
ಸ್ಥಳೀಯ ಶಾಸಕರ ಸಹಕಾರದಿಂದ ಹೆಚ್ಚಿನ ಅನುದಾನ ತಂದು ರಸ್ತೆ ಒಳಚರಂಡಿ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತೇನೆ ಅಳಿಲುಘಟ್ಟ ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಗ್ರಾ ಪಂ ಸದಸ್ಯರಾದ ಯಮುನಾ, ಸರ್ವಮಂಗಳ, ಲಕ್ಷ್ಮೀದೇವಿ, ದಿವ್ಯ ಜ್ಯೋತಿ, ಯೋಗೀಶ್ ಬಿ ಎನ್, ಶಿವಕುಮಾರ ಸ್ವಾಮಿ, ವೇಣುಗೋಪಾಲ್, ಶಿವರಾಜು, ಶಿವಣ್ಣ,ಮುಖಂಡರಾದ ಶಶಿಧರ್, ಕರಿಯಣ್ಣ ಕೆ, ಲೋಕೇಶ್, ಪಾಲನೆತ್ರಯ್ಯ, ಕೃಷ್ಣಪ್ಪ ಇತರರು ಹಾಜರಿದ್ದರು.
ವರದಿ : ಶ್ರೀಕಾಂತ ಗುಬ್ಬಿ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube