Document

ಮುದಿಗೆರೆ ಗ್ರಾಮಕ್ಕೆ ರೈತ ಮೋರ್ಚಾ ರಾಜ್ಯಾಧ್ಯಕ್ಷ ಏ ಎಸ್ ನಡಹಳ್ಳಿ ಭೇಟಿ.

Janataa24 NEWS DESK

img 20240222 wa00022213538410125934489


ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬ್ಳಿಗೆ ಸೇರಿದ ಮುದಿಗೆರೆ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ರೈತ ಮೋರ್ಚ ರಾಜ್ಯಾಧ್ಯಕ್ಷ ಏ ಎಸ್ ನಡಹಳ್ಳಿ ಭೇಟಿ ಕೊಟ್ಟಿದ್ದಾರೆ.



ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿ ವೈ ವಿಜಯೇಂದ್ರ ಅವರು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಮೇಲೆ ಇಡೀ ರಾಜ್ಯದ್ಯಂತ ಒಂದು ಹೊಸ ಉರುಪ್ಪು ಪಕ್ಷದಲ್ಲಿ ಪ್ರಾರಂಭವಾಗಿದೆ.

img 20240222 wa0003817925003197108339



ಅದಕ್ಕೆ ಪೂರಕವಾಗಿ ರಾಜ್ಯದ ಮೋರ್ಚಾಗಳಿಗೆ ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಿ ಎಲ್ಲರಿಗೂ ಆದೇಶಿಸುವುದೇನೆಂದರೆ ಕೇವಲ ನಾವು ಸಭೆ ಸಮಾರಂಭಗಳಿಗೆ ಸೀಮಿತವಾಗಬಾರದು.



ಹೋರಾಟಕ್ಕಿಳಿದು  ಕೆಲಸ ಮಾಡಬೇಕು ಅದಕ್ಕೆ ಪೂರಕವಾಗಿ ನನ್ನನ್ನು ಅಧ್ಯಾಧ್ಯಕ್ಷನಾಗಿ ಮಾಡಿದ ಮೇಲೆ ,ಆಯಾ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಪರ್ಯಾಯ ಕಂಡು ಹಿಡಿಯುವಂತ ಕೆಲಸ ಮಾಡಬೇಕಿದೆ.



ನಮ್ಮ ರಾಷ್ಟ್ರೀಯ ಅಧ್ಯಕ್ಷರು ಇಡೀ ದೇಶಕ್ಕೆ ಒಂದು *ಗ್ರಾಮ ಪರಿಕ್ರಮ ಯಾತ್ರೆ* ಎಂಬ ಕಾರ್ಯಕ್ರಮವನ್ನು ಈಗಾಗಲೇ ಫೆಬ್ರವರಿ 12ನೇ ತಾರೀಕು ಚಿಕ್ಕಬಳ್ಳಾಪುರದ ದಿಬ್ಬೂರು ಗ್ರಾಮದಲ್ಲಿ ಬಿ ವೈ ವಿಜಯೇಂದ್ರ ಅವರು ಚಾಲನೆ ನೀಡಿದ್ದಾರೆ.

img 20240222 wa0004223943621469950924



ಇದರ ಸಲುವಾಗಿ ನಾವುಗಳು ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ, ಪ್ರತಿ ಗ್ರಾಮ ಗಳಲ್ಲೂ ರೈತರ ಮನೆ ಮನೆಗೆ ತೆರಳಿ ಚರ್ಚಿಸಿ, ರೈತರ ಜೊತೆ ಸಂವಾದವನ್ನು ಮಾಡಿ ಭವಿಷ್ಯದಲ್ಲಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.



ಹಾಗೂ ಈ ಹಿಂದೆ ಮುಖ್ಯಮಂತ್ರಿ ಆಗಿ ಇದ್ದಂತಹ ಬಿ ಎಸ್ ಯಡಿಯೂರಪ್ಪನವರು ರೈತರಿಗಾಗಿ ತಂದಿರುವ ಯೋಜನೆಯನ್ನು, ಈಗಿರುವ ಕಾಂಗ್ರೆಸ್ ಸರ್ಕಾರ ಕೆಲವನ್ನು ರದ್ದು ಮಾಡಿದೆ, ಅದರ ದುಷ್ಪರಿಣಾಮದಿಂದ ರೈತರು ಕಂಗಲಾಗಿದ್ದಾರೆ, ಅದಕ್ಕಾಗಿ ನಾವುಗಳು  ರೈತರ ಶಾಶ್ವತ ಪರಿಹಾರಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದರು.



ಇನ್ನು ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಡಿ ಲಕ್ಷ್ಮಿ ನಾರಾಯಣ್, ಭಾರತೀಯ ಜನತಾ ಪಕ್ಷದ ತುರುವೇಕೆರೆ ಮಂಡಲ ಅಧ್ಯಕ್ಷರಾದ, ಮೃತ್ಯುಂಜಯ, ಮುಖಂಡರು ಆದ, ಎಂ ಜಿ ಕೆಂಪೇಗೌಡ, ಜಗದೀಶ್ ಹೀಗೆ ಅನೇಕ ರೈತ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಈ ಪತ್ರಿಕಾ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

img 20240222 wa00022213538410125934489

ವರದಿ: ಮಂಜುನಾಥ್ ತುರುವೇಕೆರೆ.

Document

Leave a Reply

Your email address will not be published. Required fields are marked *