Janataa24 NEWS DESK

ಗುಬ್ಬಿ: ಪಟ್ಟಣದ ಎಪಿಎಂಸಿ ಕಚೇರಿಯ ಮುಂಭಾಗದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ರೈತ ಎಂ ಡಿ ಸುರೇಶ್ ಮಾತನಾಡಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಕಷ್ಟ ಬಿದ್ದು ನೋಂದಣಿ ಮಾಡಿಸಿದಂತಹ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ,
ನಿಮ್ಮ ಅಧಿಕಾರಿಗಳು ಮಾಡಿರುವ ತಪ್ಪಿಗೆ ರೈತರು ಏನು ಮಾಡಿದ್ದಾರೆ, ನೊಂದಣಿ ಕಾರ್ಯದಲ್ಲಿ ಅಕ್ರಮವಾಗಿದೆ ಎಂದು ಹೇಳಿಕೆ ನೀಡಿರುವ ಸರಕಾರ ಮತ್ತೊಮ್ಮೆ ನೋಂದಣಿ ಮಾಡಿಸಬೇಕು ಎಂದು ಹೇಳಿಕೆ ನೀಡಿರುವುದು ಖಂಡನಾರ್ಹ ಕಷ್ಟ ಬಿದ್ದು ಸರದಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿದ್ದೇವೆ ಈಗ ಏಕಾಏಕಿ ಈ ರೀತಿ ಹೇಳಿದರೆ ಇದು ಯಾವ ನ್ಯಾಯ.

ಇನ್ನೂ 20 ಕ್ವಿಂಟಲ್ ತೆಗೆದುಕೊಳ್ಳುತ್ತೀವಿ ಎಂದು ಹೇಳಿದವರು ಈಗ 15 ಕ್ವಿಂಟಲ್ ಗೆ ಬಂದಿದ್ದೀರಾ,
ವಿಧಾನಪರಿಷತ್ ನಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಇಂದಿನಿಂದಲೇ ನೊಂದಣಿ ಹಾಗೂ ಕೊಬ್ಬರಿ ಖರೀದಿ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ
ಇಲ್ಲಿ ನೋಡಿದರೆ ಅಧಿಕಾರಿಗಳಿಗೆ ಯಾವುದೇ ಮಾಹಿತಿಯು ಇಲ್ಲ ನೊಂದಣಿಯು ಇಲ್ಲ ಖರೀದಿ ಕೇಂದ್ರವೂ ಇಲ್ಲ. ಎಂದು ಕಿಡಿ ಕಾರಿದರು.

ರೈತ ಮುಖಂಡ ಧರ್ಮೇಗೌಡ ಮಾತನಾಡಿ ಒಬ್ಬ ಸಚಿವರಾದವರು ಸದನದಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡಿದ್ದಾರೆ ಸ್ಥಳೀಯವಾಗಿ ಯಾವುದೇ ಮಾಹಿತಿಯನ್ನು ನೀಡದೆ ಸದನದಲ್ಲಿ ಉತ್ತರ ನೀಡುವುದು ಎಷ್ಟು ಸರಿ ರೈತರ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ. ಇದನ್ನು ಇಡೀ ರೈತರು ಖಂಡನೆ ಮಾಡುತ್ತೇವೆ ಎಂದ ಅವರು ಅಧಿಕಾರಿಗಳಿಗೆ ಮಾಹಿತಿ ನೀಡದೆ ಸರಿಯಾದ ಮಾಹಿತಿಯನ್ನು ಪಡೆಯದೆ ಇಂತಹ ಮಾತುಗಳನ್ನು ಆಡುವ ಮುಂಚೆ ಯೋಚಿಸಲಿ ಎಂದು ಸಚಿವರ ವಿರುದ್ಧ ಗುಡುಗಿದರು.

ನಂತರ ರೈತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ರೈತರಾದ ಜಯಣ್ಣ, ಸಿದ್ದಲಿಂಗಯ್ಯ, ಧರ್ಮೇಗೌಡ, ಶಿವರಾಮ್, ದಿವ್ಯ ಪ್ರಕಾಶ್, ಮಂಜುನಾಥ್, ವಿವೇಕ್ ಕುಮಾರ್ ಮಲ್ಲಿಕಾರ್ಜುನ,ನಂಜೇಗೌಡ, ಸೇರಿದಂತೆ ಇನ್ನಿತರರರು ಹಾಜರಿದ್ದರು.
ವರದಿ: ಶ್ರೀಕಾಂತ ಗುಬ್ಬಿ .