Document

Pavagada:  ಕ್ರೈಸ್ತ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರು ಕುರಿತ ಮನವಿ.

JANATAA24 NEWS DESK 

 

Pavagada:  ಕ್ರೈಸ್ತ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರು ಕುರಿತ ಮನವಿ –ಶಾಸಕರ ಸಕಾರಾತ್ಮಕ ಸ್ಪಂದನೆ
Pavagada: Petition for allotment of cemetery land to Christian community.

ಪಾವಗಡ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕ್ರೈಸ್ತರು ವಾಸಿಸುತ್ತಿದ್ದು, ಬಹುಕಾಲದ ಬೇಡಿಕೆಯಾದ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರು ಮಾತುಕತೆ ಈಗ ಗಂಭೀರವಾಗಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಪಾವಗಡ ಕ್ರೈಸ್ಥರ ಒಕ್ಕೂಟವು ಮಾನ್ಯ ಶಾಸಕರಾದ, ತುಮಕೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಹಾಗೂ ಡಿಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿರುವ ಶ್ರೀ ಹೆಚ್. ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿತು.

 

ಸಮುದಾಯದ ಬೇಡಿಕೆ

ಕ್ರೈಸ್ತ ಒಕ್ಕೂಟದ ಪದಾಧಿಕಾರಿಗಳು ಶಾಸಕರನ್ನು ಭೇಟಿ ಮಾಡಿ, ತಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಅನುಗುಣವಾಗಿ ಅಂತ್ಯ ಸಂಸ್ಕಾರ ನಡೆಸಲು ಸೂಕ್ತ ಮತ್ತು ಪ್ರತ್ಯೇಕ ಸ್ಮಶಾನ ಭೂಮಿ ಅತ್ಯಂತ ಅಗತ್ಯವಾಗಿದೆ ಎಂದು ಮನವಿ ಮಾಡಿದರು. ಪ್ರಸ್ತುತ ಅಂತ್ಯಕ್ರಿಯೆಗಳಿಗೆ ತಕ್ಕ ಜಾಗದ ಕೊರತೆಯಿಂದಾಗಿ ಸಮುದಾಯ ಎದುರಿಸುತ್ತಿರುವ ಅಸೌಕರ್ಯಗಳನ್ನು ವಿವರಿಸಿದರು.

 

ಶಾಸಕರ ಪ್ರತಿಕ್ರಿಯೆ

ಮನವಿಯನ್ನು ಆಲಿಸಿದ ಶಾಸಕರು, ಇದು ಕೇವಲ ಸಮುದಾಯ ಬೇಡಿಕೆಯಲ್ಲ, ಮಾನವೀಯ ನೆಲೆಯಲ್ಲಿ ಮೂಲಭೂತ ಅಗತ್ಯವಿರುವ ಸೌಕರ್ಯ ಎಂದು ಅಭಿಪ್ರಾಯಪಟ್ಟರು. ಅವರು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ, ಭೂಮಿ ಗುರುತಿಸುವ ಕೆಲಸ ಪ್ರಾರಂಭವಾಗಿರುವುದಾಗಿ ತಿಳಿಸಿದರು. ಪಾಸ್ಟಿಂನ್ ಮೈಕಲ್ ಮಾತನಾಡಿ ತಾಲೂಕಿನಲ್ಲಿ ಸುಮಾರು ನಾಲ್ಕು ಸಾವಿರ ವಿಶ್ವಾಸಿಗಳಿದ್ದು ಸಮುದಾಯದ ಧಾರ್ಮಿಕ ಅಗತ್ಯಕ್ಕೆ ಆದ್ಯತೆ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

 

ಕೃತಜ್ಞತೆ ವ್ಯಕ್ತಪಡಿಸಿದ ಸಮುದಾಯ

ಶಾಸಕರ ತ್ವರಿತ ಮತ್ತು ಸಕಾರಾತ್ಮಕ ಸ್ಪಂದನೆಗೆ ಪಾವಗಡ ಕ್ರೈಸ್ತರ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಧನ್ಯವಾದ ವ್ಯಕ್ತಪಡಿಸಿದರು. ಬೇಡಿಕೆ ಶೀಘ್ರದಲ್ಲೇ ಈಡೇರುವ ವಿಶ್ವಾಸವಿದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಹಿರಿಯ ಸೇವಕರಾದ ರಾಮಾಂಜಿನೇಯ, ಸಭಾಪಾಲಕರಾದ ಚಂದ್ರಪಾಲ್, ಪ್ರವೀಣ್, ಸಹೋದರರಾದ ಸಂದೇಶ, ಮೈಕಲ್, ನರೇಂದ್ರ, ರಾಜೇಶ್, ಸುಜಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ವರದಿ: ಇಮ್ರಾನ್ ಉಲ್ಲಾ. ಪಾವಗಡ.

 


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *