JANATAA24 NEWS DESK
Gubbi: ಶೀಘ್ರವಾಗಿ ನೂತನ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು–ಎಸ್ ಆರ್ ಶ್ರೀನಿವಾಸ್.

ಗುಬ್ಬಿ : ತಾಲೂಕಿನಲ್ಲಿ ಶೀಘ್ರವಾಗಿ 94ಸುಸಜ್ಜಿತ ನೂತನ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿ ಬಾಲ ವಿದ್ಯಾರ್ಥಿಗಳಿಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಪ್ರಭುವನಹಳ್ಳಿ ತ್ಯಾಗಟೂರು ಅದಲಗೆರೆ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದವರು ತಾಲೂಕಿನ ಆರು ಗ್ರಾಮಗಳಲ್ಲಿ ಅಂಗನವಾಡಿ ಸ್ವಂತ ಕಟ್ಟಡ ಇಲ್ಲದೆ ಮಕ್ಕಳಿಗೆ ಮೂಲಭೂತ ಸೌಕರ್ಯದ ಕೊರತೆ ಕಡಿಮೆಯಾಗಿದ್ದು ಶೀಘ್ರವಾಗಿ ತಾಲೂಕಿನಲ್ಲಿ 94 ಅಂಗನವಾಡಿ ಕಟ್ಟಡಗಳನ್ನು ಮತ್ತು 35 ಶಾಲಾ ಕಟ್ಟಡಗಳನ್ನು ಪ್ರಾರಂಭಿಸಲಾಗುವುದು ಇನ್ನು ತಾಲೂಕಿನಲ್ಲಿ ಕಳ್ಳತನಗಳನ್ನು ತಡೆಗಟ್ಟಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದ್ದು ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಪಾಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತ್ಯಾಗಟೋರು ಗ್ರಾ,ಪಂ,ಅಧ್ಯಕ್ಷ ಓಂಕಾರ್ ಪ್ರಸಾದ್ ಗ್ರಾ,ಪಂ ಸದಸ್ಯರಾದ ಬೈರಮ್ಮ ಈಶ್ವರಯ್ಯ ವಿದ್ಯಾಧರ, ನಾಗೇಂದ್ರ ಕುಮಾರ್, ಪಿಡಿಒ ರವಿ ಮುಖಂಡರಾದ ಗುತ್ತಿಗೆದಾರ ಮಹದೇವಯ್ಯ ಶಶಿಧರ್, ಎಂ ಆರ್ ಶಂಕರ್, ಸೇರಿದಂತೆ ಇತರರು ಹಾಜರಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.