Janataa24 NEWS DESK
Revenue Inspector Narasimha Murthy Lokayukta trap While Accepting Bribe.

ಗುಬ್ಬಿ: ಸಿ ಎಸ್ ಪುರ ನಾಡಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಂದಾಯ ನಿರೀಕ್ಷಕ ಅಧಿಕಾರಿ ನರಸಿಂಹಮೂರ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆಯಿತು.
ತಾಲೂಕಿನ ಸಿ ಎಸ್ ಪುರ(CS Pura) ಹೋಬಳಿ ನಾಡಕಚೇರಿ(Nadakacheri)ಯಲ್ಲಿ ಕಂದಾಯ ನಿರೀಕ್ಷಕ ನರಸಿಂಹಮೂರ್ತಿಯು ಜಮೀನು ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಚದ ಬೇಡಿಕೆ ಇಟ್ಟಿದ್ದು ಲೋಕಾಯುಕ್ತರ ಬಲೆಗೆ ಸಿಲುಕಿದ್ದಾರೆ.
ಗದ್ದೇಹಳ್ಳಿ ನಾಗರಾಜು ಎಂಬ ರೈತರ ಜಮೀನು ಖಾತೆ ಮಾಡಿಕೊಡಲು 10 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಸಿ.ಎಸ್.ಪುರ ನಾಡ ಕಚೇರಿಯಲ್ಲಿ ನಡೆದ ಈ ದಾಳಿ ಲೋಕಾಯುಕ್ತ ಎಸ್ ಪಿ ವಾಲಿಂ ಪಾಷ ಡಿ ವೈ ಎಸ್ ಪಿ ಉಮಾಶಂಕರ್ ನೇತೃತ್ವದ ತಂಡ ಹತ್ತು ಸಾವಿರ ಲಂಚದ ಹಣ ಸ್ವೀಕರಿಸುವ ವೇಳೆ ಬಂಧಿಸಿದ್ದಾರೆ(Arrested). ಲೋಕಾಯುಕ್ತ ತಂಡ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಶ್ರೀಕಾಂತ್ ಗುಬ್ಬಿ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/tumkur-hunger-strike-for-abolition-of-
https://www.instagram.com/reel/C6a_Kw2vNsj/?igsh=a2VlNHY1emRiZHU5