Document

Gubbi: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 6.5 ಲಕ್ಷ ರೂ ಪೀಕಿದವನೀಗ ಎಸ್ಕೇಪ್.

JANATAA24 NEWS DESK 

 

 

Gubbi: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 6.5 ಲಕ್ಷ ರೂ ಪೀಕಿದವನೀಗ ಎಸ್ಕೇಪ್.
Gubbi
ಗುಬ್ಬಿ: ತಾಲೂಕಿನ ಕಸಬಾ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಹರೀಶ್ ಎಂಬುವರ ಮಗನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸುಮಾರು 6.50 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಪ್ರಕರಣವು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 

ಈ ಘಟನೆ ಸಂಬಂಧ ಹರೀಶ್ ಎಂಬುವವರು ವಿಶೇಷ ಚೇತನರಾಗಿದ್ದು ತಮ್ಮ ಜೀವನಾಧಾರಕ್ಕೆ ನಿಟ್ಟೂರಿನಲ್ಲಿ ಹೋಟೆಲ್ ನಡೆಸುತ್ತಿದ್ದು , ನವೀನ್ ಎಂಬಾತ ತುರುವೇಕೆರೆ ತಾಲೂಕಿನ ಸೊಳೆಕೆರೆ ಗ್ರಾಮದವನಾಗಿದ್ದು ಆಗಾಗ ನಮ್ಮ ಹೋಟೆಲ್ ಗೆ ಊಟ ಮಾಡಲು ಬರುತ್ತಿದ್ದನು.

ಹೀಗೆ ಪರಿಚಯವಾಗಿ ನಾನು ಸರ್ಕಾರಿ ಉದ್ಯೋಗದಲ್ಲಿ ಇದ್ದೇನೆಂದು ನಂಬಿಸಿ ತನ್ನ ಮಗ ಶಶಾಂಕ್ ಗೆ ಸರ್ಕಾರಿ ಉದ್ಯೋಗವನ್ನು ಕೊಡಿಸುವುದಾಗಿ ಲಕ್ಷಾಂತರ ರೂ ಹಣ ಪಡೆದು ನಾಪತ್ತೆಯಾಗಿದ್ದ.ಆತನು ಬ್ಯಾಂಕ್ ಚೆಕ್ ನೀಡಿದ್ದು ಅದರ ಖಾತೆಯಲ್ಲಿ ಹಣವಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದರು ಆತನಿಗೆ ಫೋನ್ ಕರೆ ಮಾಡಿದರೆ ಬೆದರಿಕೆ ಹಾಕಿರುತ್ತಾನೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.

 

ಪೊಲೀಸರು ತಕ್ಷಣ ಆರೋಪಿಯನ್ನು ಬಂಧಿಸಿ ಹಣವನ್ನು ವಾಪಸ್ ಕೊಡಿಸಿ ನ್ಯಾಯ ಒದಗಿಸಬೇಕೆಂದು ದೂರುದಾರ ಹರೀಶ್ ತಮ್ಮ ದೊರಿನಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಇಂತಹನಯ ವಂಚಕರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

ವರದಿ :ಶ್ರೀಕಾಂತ್ ಗುಬ್ಬಿ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *