Document

Gubbi: ನೊಳಂಬ ಲಿಂಗಾಯಿತ ಸಂಘದ ಚುನಾವಣಾ ಪ್ರಚಾರಕ್ಕೆ ಸಾಗರನಹಳ್ಳಿ ನಟರಾಜ್ ತಂಡದಿಂದ ಚಾಲನೆ.

JANATAA24 NEWS DESK 

 

 

Gubbi: ನೊಳಂಬ ಲಿಂಗಾಯಿತ ಸಂಘದ ಚುನಾವಣಾ ಪ್ರಚಾರಕ್ಕೆ ಸಾಗರನಹಳ್ಳಿ ನಟರಾಜ್ ತಂಡದಿಂದ ಚಾಲನೆ.

Gubbi

ಗುಬ್ಬಿ: ನೊಳಂಬ ಲಿಂಗಾಯಿತ ಸಂಘಕ್ಕೆ 2026-2031 ರ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಆಯ್ಕೆಗೆ ಜಿಲ್ಲಾ ನಿರ್ದೇಶಕರ ಚುನಾವಣೆ ಇದೇ ತಿಂಗಳ 23 ರಂದು ನಡೆಯಲಿದೆ. ಈ ಹಿನ್ನಲೆ ಜಿಲ್ಲೆಯಿಂದ 8 ಮಂದಿ ನಿರ್ದೇಶಕರ ಆಯ್ಕೆಗೆ ಸಾಗರನಹಳ್ಳಿ ನಟರಾಜ್ ನೇತೃತ್ವದ ಸಿಂಡಿಕೇಟ್ ತಂಡ ಚುನಾವಣಾ ಪ್ರಚಾರ ಹಾಗೂ ಮತಯಾಚನೆಗೆ ಭಾನುವಾರ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಶುಭಾರಂಭ ಮಾಡಿದರು.

 

ನಿರ್ದೇಶಕ ಸ್ಥಾನದ ಸ್ಪರ್ಧಿ ಸಾಗರನಹಳ್ಳಿ ನಟರಾಜ್ ಅವರು ಮಾತನಾಡಿ ಜಿಲ್ಲೆಯಲ್ಲಿ 7240 ಮತಗಳು ನೊಳಂಬ ಲಿಂಗಾಯಿತ ಸಂಘದಲ್ಲಿದೆ. ಗುಬ್ಬಿ ತಾಲ್ಲೂಕಿನಲ್ಲಿ 1460 ಮತಗಳಿವೆ. ನೊಳಂಬ ಲಿಂಗಾಯಿತ ಸಮಾಜದ ಪ್ರಗತಿಗೆ ಎಲ್ಲಾ ಮತದಾರರು ಒಟ್ಟು 31 ಮಂದಿ ಸ್ಪರ್ಧಿಗಳ ಪೈಕಿ ನಮ್ಮ ಎಂಟು ಜನರ ತಂಡಕ್ಕೆ ನಿಮ್ಮ ಅಮೂಲ್ಯ ಮತ ನೀಡಿ ಗೆಲ್ಲಿಸಿ. ನಿಮ್ಮ ಅಭಿಲಾಷೆಗೆ ತಕ್ಕಂತೆ ಸಮಾಜದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ನಮ್ಮ ಸಿಂಡಿಕೇಟ್ ತಂಡ ದುಡಿಯಲಿದೆ ಎಂದು ಮತಯಾಚನೆ ಮಾಡಿದರು.

 

ಗುಬ್ಬಿ ತಾಲ್ಲೂಕಿನ ಪ್ರವಾಸಕ್ಕೆ ಗುಬ್ಬಿಯಪ್ಪನವರ ಆಶೀರ್ವಾದ ಪಡೆದು ಎರಡು ದಿನಗಳ ಪ್ರಚಾರ ಕಾರ್ಯ ಮಾಡಿ ಮತದಾರರನ್ನು ನೇರವಾಗಿ ಭೇಟಿ ಮಾಡಿ ನಮ್ಮ ತಂಡಕ್ಕೆ ಮತಯಾಚನೆ ಮಾಡುತ್ತೇವೆ. ನಮ್ಮ ತಂಡದಲ್ಲಿ ನಾನು ಸಾಗರನಹಳ್ಳಿ ನಟರಾಜ್ ಸೇರಿದಂತೆ ಎಸ್.ಗಂಗಾಧರಯ್ಯ(ಪಿಬಿಆರ್), ರಾಜಶೇಖರಯ್ಯ, ಚುಂಗನಹಳ್ಳಿ ಮೋಹನ್ ಕುಮಾರ್, ತುರುವೇಕೆರೆ ಕುಮಾರಸ್ವಾಮಿ, ಗೋಡೆಕೆರೆ ಮರಿಸ್ವಾಮಿ, ಎಂ.ಎಸ್.ಯೋಗೇಶ್, ಕೆ.ರಾಜಣ್ಣ ಸ್ಪರ್ಧೆಯಲ್ಲಿದ್ದಾರೆ. ನಿಮ್ಮ ಅಮೂಲ್ಯ ಮತ ನೀಡಿ ಸಮಾಜದ ಸೇವೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

 

ಈ ಸಂದರ್ಭದಲ್ಲಿ ಶಶಿಭೂಷಣ, ದಿವ್ಯಪ್ರಕಾಶ್, ಯತೀಶ್, ಬಸವಲಿಂಗಪ್ಪ, ಸಿದ್ಧಲಿಂಗಮೂರ್ತಿ, ವಿಶ್ವನಾಥ್, ಹೇರೂರು ರಮೇಶ್, ರುದ್ರಪ್ರಸಾದ್, ಮಂಜುನಾಥ್, ಪಿಬಿಆರ್ ಭರತ್, ಕೆ.ಎಂ.ರವೀಶ್, ಮರಿಸ್ವಾಮಿ, ವಿವೇಕ್, ಉಮೇಶ್ ಸೇರಿದಂತೆ ಸಮಾಜದ ಹಲವು ಮುಖಂಡರು ಹಾಜರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *