Document

Turuvekere: ತುರುವೇಕೆರೆ ಲಯನ್ಸ್ ಕ್ಲಬ್ ಉತ್ತಮ ಸೇವೆ ಸಲ್ಲಿಸುತ್ತಿದೆ– ಸುಧಾಕರ್.

JANATAA24 NEWS DESK 

 

 

 

Turuvekere: ತುರುವೇಕೆರೆ ಲಯನ್ಸ್ ಕ್ಲಬ್ ಉತ್ತಮ ಸೇವೆ ಸಲ್ಲಿಸುತ್ತಿದೆ– ಸುಧಾಕರ್.

 Turuvekere– Lions Club is doing a great job– Sudhakar.

ತುರುವೇಕೆರೆ: ತಾಲೂಕಿನ ಲಯನ್ಸ್ ಕ್ಲಬ್ ಮತ್ತು ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಬಸವನಗುಡಿ ಲಯನ್ಸ್ ಕ್ಲಬ್ ನಿರ್ದೇಶಕರಾದ ಲ.ಪಿ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

 

ಗುರುವಾರ ತಾಲೂಕಿನ ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಬಸವನಗುಡಿ. ಮತ್ತು ಜಿಲ್ಲಾ ಅಂಧತ್ವ ನಿವಾರಣ ಕೇಂದ್ರ ತುಮಕೂರು ಮತ್ತು ಶ್ರದ್ದ ಐ ಕೇರ್ ಹಾಸ್ಪಿಟಲ್ ಬೆಂಗಳೂರು. ವತಿಯಿಂದ ಸುಧಾಕರ್ ಎಂ ಜೆ ಎಫ್ ಬಸವನಗುಡಿ ‌ಪ್ರಾಯೋಜಕತ್ವದಲ್ಲಿ 2026-27 ನೇ ಸಾಲಿನ 3ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ತುರುವೇಕೆರೆ ಲಯನ್ಸ್ ಕ್ಲಬ್ ಮತ್ತು ಟ್ರಸ್ಟ್ ಸಂಸ್ಥೆಯು ಉತ್ತಮವಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ, ಸಾವಿರಾರು ಮಂದಿ ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಿದ್ದಾರೆ. ಸಂಸ್ಥೆಯ ಸೇವೆ ಕಂಡು ಇನ್ನು ಹೆಚ್ಚಿನ ಸೇವೆ ಮಾಡಲು ನಮಗೂ ಸಹ ಉತ್ಸಾಹ ಕೂಡಲಿದೆ ಎಂದ ಅವರು,

ಮನುಷ್ಯನಿಗೆ ಕಣ್ಣು ಅತಿ ಮುಖ್ಯವಾಗಿದೆ, ಕಣ್ಣಿನ ಆರೋಗ್ಯಕ್ಕಾಗಿ ಉತ್ತಮ ಆಹಾರಗಳನ್ನು ಸೇವಿಸಿ, ದೈನಂದಿನ ವ್ಯಾಯಾಮ, ಉತ್ತಮ ಸಂಗೀತ,ಹಾಗಾಗೇ ಕಣ್ಣು ಮತ್ತು ದೇಹದ ಆರೋಗ್ಯವನ್ನು ಪರೀಕ್ಷಿಸಿಕೊಂಡು ಉತ್ತಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.

 

ಬಸವಗುಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಕೇಶವಲು ಮಾತನಾಡಿ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಉತ್ತಮವಾದ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ತುರುವೇಕೆರೆ ಲಯನ್ಸ್ ಕ್ಲಬ್ ಸಂಸ್ಥೆಯು ಸುಧೀರ್ಘ ವರ್ಷಗಳಿಂದ ಉತ್ತಮವಾದ ಸೇವೆ ನೀಡುತ್ತಿರುವುದಾಗಿ ಅಭಿನಂದ ತಿಳಿಸಿದರು.

 

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ|| ಸುನಿಲ್ ಬಾಬು ಟಿ.ಸಿ ಮಾತನಾಡಿ ಲಯನ್ಸ್ ಕ್ಲಬ್ ಸಂಸ್ಥೆಯು ಹತ್ತಾರು ವರ್ಷಗಳಿಂದ ಸಾಮಾಜಿಕವಾಗಿ ಹಲವಾರು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ನಿರಂತರವಾಗಿ ಸಕ್ರಿಯಗೊಂಡಿದ್ದು, ಲಯನ್ಸ್ ಕ್ಲಬ್ ನ ಸರ್ವ ಸದಸ್ಯರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೇವಾ ಕಾರ್ಯ ಮಾಡುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.

 

ಶಿಬಿರದ ಕಾರ್ಯಕ್ರಮದಲ್ಲಿ ಲ.ಪಿಲಿಪ್ ರಾಜ್ ಡಿ.ಸಿ‌ ಪಿ.ಎಂ.ಜೆ.ಎಫ್.

ಲ.ಕಳಿಂಗ ಕೃಷ್ಣ ಕಾರ್ಯದರ್ಶಿ ಕ್ಲಬ್ ಬಸವನಗುಡಿ ಹಾಗೂ ಮುಂತಾದ ಸದಸ್ಯರುಗಳು.

ಲ.ಧನಫಾಲ್. ಲಯನ್ಸ್ ಲೋಕೇಶ್ .ಲ|| ಮಲ್ಲಿಕಾರ್ಜುನ ದುಂಡ ಡಿ. ಸಿ. ರೂರಲ್ ಐ ಸ್ಕ್ರೀನಿಂಗ್. ಲಯನ್ಸ್ ಕ್ಲಬ್ ಕಾರ್ಯದರ್ಶಿ ರವಿ. ಖಜಾಂಚಿ ಲಯನ್ಸ್ ಆನಂದ್.ಲಯನ್ಸ್ ಕ್ಲಬ್ ನ ಲ|| ರಾಜಣ್ಣ. ಲ|| ರಾಮಕೃಷ್ಣ. ಲ|| ನಾಗರಾಜು ಲ|| ಸಚಿನ್ ಮಾಯಸಂದ್ರ ಅಧ್ಯಕ್ಷರು ದೃಷ್ಟಿ ಸಂರಕ್ಷಣಾ ಸಮಿತಿ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *