Janataa24 NEWS DESK
Kolar: ಚೆಕ್ ಪೋಸ್ಟ್ ತಪಾಸಣೆ ವೇಳೆ ಜಿಲೆಟಿನ್ ಕಡ್ಡಿ ಸೇರಿದಂತೆ ಬಾರಿ ಸ್ಫೋಟಕ ವಸ್ತುಗಳು ಪತ್ತೆ…!

ಕೋಲಾರ: ಕರ್ನಾಟಕದ ಗಡಿ ಜಿಲ್ಲೆ ಕನ್ನಡ ತೆಲುಗು ಎರಡು ಭಾಷೆಗಳು ಸುಲಲಿತವಾಗಿ ಮಾತನಾಡುವ ಜನತೆ ಇರುವ ಕೋಲಾರ. ಅಂಧ್ರ ಕರ್ನಾಟಕ ಗಡಿಯೊಂದಿಗೆ ಕೋಲಾರ ಹೊಂದಿಕೊಂಡಿದೆ.
ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ನಂಗಲಿ ಚೆಕ್ ಪೋಸ್ಟ್(Nangali Check Post) ಬಳಿ ತಪಾಸಣೆ ವೇಳೆ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳು ಪತ್ತೆಯಾಗಿದೆ.ಚೆಕ್ ಪೋಸ್ಟ್ ಬಳಿಗೆ ಬಂದ ಕಾರನ್ನು ಅನುಮಾನಸ್ಪದವಾಗಿ ಕಂಡುಬಂದ ಬೆನ್ನಲ್ಲೇ ಪೋಲೀಸರು ತಪಾಸಣೆಗೆ ಮುಂದಾಗಿದ್ದಾರೆ. ತಪಾಸಣೆ ವೇಳೆ ಪತ್ತೆಯಾದ ಸ್ಪೋಟಕಗಳನ್ನು ನೋಡಿ ಪೋಲಿಸರೇ ಶಾಕ್ ಆಗಿದ್ದಾರೆ.
ತಪಾಸಣೆ ವೇಳೆ 1200 ಜಿಲೆಟಿನ್ ಕಡ್ಡಿ(Gelatin Sticks) ,7 ಬಾಕ್ಸ್ ವೈಯರ್ , 6 ಡಿಟೋನೇಟರ್(Detonator) ಪತ್ತೆಯಾಗಿವೆ. ಇವುಗಳನ್ನು ನಂಗಲಿ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ಇದ್ದ ಜಾಕೀರ್ ಹುಸೇನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇವರ ಜೊತೆಯಲ್ಲಿ ಕಾರಿನಲ್ಲಿ ಇದ್ದ ಇನ್ನೊಬ್ಬ ಪರಾರಿಯಾಗಿದ್ದು ನಂಗಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ಕ್ರಮ ಕೈಗೊಳ್ಳುತ್ತಾರೆ.
ತನಿಖೆಯ ನಂತರ ಎಲ್ಲಿಂದ ಎಲ್ಲಿಗೆ ಈ ಸ್ಪೋಟಕಗಳನ್ನು ಸಾಗಿಸಲಾಗುತ್ತಿತ್ತು. ಸ್ಪೋಟಕದ ಹಿಂದಿನ ಕೈವಾಡ ಯಾರದು ಎಂದು ಬಯಲಾಗಬೇಕಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Ballari: ದಾಖಲೆಯಿಲ್ಲದ 5 ಕೋಟಿ ನಗದು ಕೆಜಿಗಟ್ಟಲೆ ಬಂಗಾರ ಮೂಟೆಗಟ್ಟಲೇ ಬೆಳ್ಳಿ ಸೀಜ್.