Janataa24 NEWS DESK
Lokasabha 2024: ದಾಖಲೆಯಿಲ್ಲದ 5 ಕೋಟಿ ನಗದು ಕೇಜಿಗಟ್ಟಲೆ ಚಿನ್ನ,ಬೆಳ್ಳಿ ಪೋಲಿಸರ ವಶಕ್ಕೆ

ಬಳ್ಳಾರಿ: ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಹಣ ಸೀರೆ ಬೆಳ್ಳಿ ಬಂಗಾರ ಸಾಗಿಸಲು ಯತ್ನಿಸುತ್ತಾರೆ.ಇಂತಹ ಆಕ್ರಮಗಳನ್ನು ತಡೆಯಲು ಆಯಾ ಜಿಲ್ಲಾಧಿಕಾರಿಗಳು ಜಿಲ್ಲಾ ಪೋಲಿಸ್ ಪರಿಷ್ಠಧಿಕಾರಿಗಳು ಹಲವಾರು ಕಡೆ ಚೆಕ್ ಪೋಸ್ಟ್ ತೆರೆದು ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಬಿಡಲಾಗುತ್ತದೆ.
ಯಾವುದೇ ದಾಖಲೆಯಿಲ್ಲದ ಅಧಿಕ ಮೊತ್ತದ ನಗದು ಹಾಗೂ ಇನ್ನಿತರೆ ವಸ್ತುಗಳನ್ನು ಸಾಗಿಸುತ್ತಿದ್ದರೆ ಪೋಲಿಸರು ಯಾವುದೇ ಮುಲಾಜಿಗೆ ಒಳಗಾಗದೇ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುತ್ತಾರೆ.
ಅದೇ ರೀತಿ ಬಳ್ಳಾರಿ ನಗರದ ಕಂಬಳಿ ಬಜಾರ್ ನಲ್ಲಿ ದಾಖಲೆ ರಹಿತ 5 ಕೋಟಿ 60 ಲಕ್ಷ ಹಣ ಕೇಜಿಗಟ್ಟಲೆ ಚಿನ್ನಾಭರಣ ಮೂಟೆಗಟ್ಟಲೇ ಬೆಳ್ಳಿಯನ್ನು ಚುನಾವಣಾ ಅಧಿಕಾರಿ ವಶಪಡಿಸಿಕೊಂಡಿದ್ದಾರೆ. ಆಕ್ರಮವಾಗಿ ಸಾಗಿಸುತ್ತಿದ್ದವರನ್ನು ಬ್ರೂಸ್ ಪೇಟೆ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಹೇಮಾ ಜ್ಯುವೆಲರ್ಸ್ ಮಾಲೀಕ ನರೇಶ್ ಸೋನಿಗೆ ಎನ್ನುವ ವ್ಯಕ್ತಿಗೆ ಸೇರಿದ ನಗದು ದಾಖಲೆ ರಹಿತ ಸಾಗಿಸುತ್ತಿದ್ದ 5 ಕೋಟಿ 60 ಲಕ್ಷ ನಗದನ್ನು ಚುನಾವಣಾ ಆಯೋಗ(Election Commission)ದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ
ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ವೇಳೆ ನಗದು ಮಾತ್ರವಲ್ಲದೆ 3 ಕೆ.ಜಿ ಚಿನ್ನ, 68 ಕೆ.ಜಿ ಬೆಳ್ಳಿ ಗಟ್ಟಿ, 103 ಕೆ.ಜಿ ಬೆಳ್ಳಿ ಆಭರಣಗಳನ್ನು ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Madhugiri: ಬಿಸಿಲ ತಾಪಕ್ಕೆ ರೋಸಿ ರಸ್ತೆ ಬದಿ ಅರವಟ್ಟಿಗೆ ಸ್ಥಾಪಿಸಿದ ಯುವಕರು