Janataa24 NEWS DESK
ED ವಶದಲ್ಲಿರುವ ದೆಹಲಿ ಮುಖ್ಯಮಂತ್ರಿಯನ್ನು ಕೆಳಗಿಳಿಸುವಂತೆ ಸಲ್ಲಿಸಿದ್ದ PIL ವಜಾ

ನವದೆಹಲಿ: ಸದ್ಯ ಜಾರಿ ನಿರ್ದೇಶನದ ವಶದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ರವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಬೇಕೆಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ದೆಹಲಿ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರು ಈ ತೀರ್ಪು ನೀಡಿರುತ್ತಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ದೂರುದಾರ ಸೂರಜ್ ಸಿಂಗ್ ಯಾದವ್ ರವರನ್ನು ಇದೇ ವಿಚಾರವಾಗಿ ಪ್ರಶ್ನೆ ಮಾಡಿದ ದೆಹಲ್ಲಿ ಹೈಕೋರ್ಟ್ ನ್ಯಾಯ ಪೀಠ, ಕೇಜ್ರಿವಾಲ್ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸದೇ ಇರುವುದಕ್ಕೆ ಕಾನೂನಾತ್ಮಕ ತೊಡಕುಗಳೇನಾದರೂ ಇದ್ದರೆ ಹೇಳಿ ಎಂದು ಕೇಳಿತು.
ಜೈಲಿನಲ್ಲಿರುವ ಮುಖ್ಯಮಂತ್ರಿಯಿಂದ ಸುಗಮ ಆಡಳಿತ ನಡೆಸದೆ ಇರಲು ಸಾಧ್ಯವಾಗದಿರಬಹುದು. ಆದರೆ ಕಾನೂನಾತ್ಮಕವಾಗಿ ಯಾವ ತೊಡಕು ಇದೆ ಎಂದು ವಿವರಿಸುವಂತೆ ದೆಹಲಿ ಹೈಕೋರ್ಟ್ ನ್ಯಾಯಪೀಠ ಅರ್ಜಿದಾರನನ್ನು ಪ್ರಶ್ನಿಸಿತು.
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv