Janataa24 NEWS DESK
Ballari: ಚುನಾವಣೆಯಲ್ಲಿ ಎಲ್ಲರೂ ಹಣ ಕೊಡ್ತಾರೆ ವೋಟ್ ಮಾತ್ರ ನಮಗೆ ಹಾಕಿ- ಸಂತೋಷ್ ಲಾಡ್

ಬಳ್ಳಾರಿ: ದುಡ್ಡು ತರ್ತಾರೆ ಚುನಾವಣೆಗಳು ಬರುತ್ತವೆ, ಚುನಾವಣೆಯಲ್ಲಿ ಅವರು ಹಣ ಕೊಡುತ್ತಾರೆ, ನಾವು ಕೊಡುತ್ತೇವೆ. ಯಾರೇ ದುಡ್ಡು ಕೊಟ್ಟರೂ ನಿಮಗೆ ಕಾನೂನಿನ ಅರಿವು ಬೇಕು, ನೀವು ಮಾತ್ರ ಎಚ್ಚರಿಕೆಯಿಂದ ವೋಟ್ ಹಾಕಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್(Santhosh Lad) ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿಯ ಸಂಡೂರು(Sandur) ತಾಲೂಕಿನ ಕೃಷ್ಣನಗರ ಕ್ಯಾಂಪ್ ನಲ್ಲಿ ಬಹಿರಂಗ ಪ್ರಚಾರದಲ್ಲಿ ಸಚಿವ ಸಂತೋಷ ಲಾಡ್ ಮಾತನಾಡಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗದಿದ್ರೂ ಶಾಸಕ ತುಕಾರಾಂ ಪರ ಕ್ಯಾಂಪೇನ್ ಮಾಡಿದ ಅವರು, ಚುನಾವಣೆಯಲ್ಲಿ ಅವರು ಹಣ ಕೊಡುತ್ತಾರೆ, ನಾವು ಕೊಡುತ್ತೇವೆ. ಯಾರೇ ದುಡ್ಡು ಕೊಟ್ಟರೂ ಮತದಾರರು ಕಾನೂನಿನ ಅರಿವನ್ನು ಇಟ್ಟುಕ್ಕೊಂಡು ಮತ ಚಲಾಯಿಸಬೇಕು ಎಂದು ಹೇಳಿದರು.
ಈ ದೇಶದ ವ್ಯವಸ್ಥೆಯಲ್ಲಿ ಯಾರು ಜಾತಿ ಬಗ್ಗೆ ಮಾತನಾಡುತ್ತಾರೆ ಅವರಿಗಷ್ಟೇ ಲಾಭವಾಗಿದೆ ಅವರ ಜಾತಿಗಲ್ಲ ಮತ್ತು ಯಾವುದೇ ಜಾತಿಗಳು ಈವರೆಗೂ ಇಂತಹವರಿಂದ ಉದ್ದಾರ ಆಗಿಲ್ಲ.
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಲಾಡ್, ಬಿಜೆಪಿಯವರಿಗೆ ಚುನಾವಣೆ ಹೊತ್ತಲ್ಲಿ ಮಾತ್ರ ರಾಮ ನೆನಪಾಗುತ್ತಾನೆ. ಅವರು ರಾಮನ ಹೆಸರಲ್ಲಿ ಮತ ಕೇಳುತ್ತಾರೆ. ಅವರಿಗೆ ರಾಮ ಮಾತ್ರ ಯಾಕೆ, ಗಾಳೆಮ್ಮ ಮಾರೆಮ್ಮ, ಪಾಂಡುರಂಗ ಈ ದೇವರುಗಳು ಯಾಕೆ ಬೇಡ. ಹಿಂದೂಪರ ಎನ್ನುವ ಬಿಜೆಪಿಗರು ಯಾವ ಹಿಂದೂವಿಗೆ ವಿಶೇಷ ಯೋಜನೆ ಘೋಷಣೆ ಮಾಡಿದ್ದಾರೆ ಹೇಳಿ ಎಂದು ಪ್ರಶ್ನೆ ಮಾಡಿದರು.
ಈ ಬಾರಿಯ ಲೋಕಸಭಾ ಎಲೆಕ್ಷನ್ನಲ್ಲಿ ತುಕಾರಾಂ ಮಗಳು ಚೈತನ್ಯ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಕೆಲ ಸರ್ವೆಯಲ್ಲಿ ತುಕಾರಾಂ ಗೆಲ್ಲುವ ಸಾಧ್ಯತೆ ಇರುವ ರಿಸಲ್ಟ್ ಬಂದ ಹಿನ್ನಲೆ ಶಾಸಕರನ್ನೇ ಅಖಾಡಕ್ಕೆ ಇಳಿಸಲಾಗಿದೆ ಎಂದು ಕೃಷ್ಣನಗರ ಕ್ಯಾಂಪ್ನಲ್ಲಿ ಪ್ರಚಾರದ ವೇಳೆ ಸಂತೋಷ್ ಲಾಡ್ ಹೇಳಿದ್ದಾರೆ.
https://www.janataa24.com/lokayukta-lokayukta-attack-in-60-places-of-the-state/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en