Janataa24 NEWS DESK

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ, ಆನಡಗು ಗ್ರಾಮದಲ್ಲಿ ಕೆಂಪಮ್ಮ ದೇವಿ ದೇವಾಲಯದ ಲೋಕಾರ್ಪಣೆಯನ್ನು ನಟ ಜಗ್ಗೇಶ್ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ತನ್ನದೇ ಹುಟ್ಟೂರು ಆದ ಆನಡಗೂ ಗ್ರಾಮದಲ್ಲಿರುವ ಕೆಂಪಮ್ಮ ದೇವಿ ನಟ ಜಗ್ಗೇಶ್ (Actor Jaggesh)ಅವರ ಮನೆದೇವರು ಕೂಡ ಆಗಿದ್ದು, ಈ ಲೋಕಾರ್ಪಣೆ ಕಾರ್ಯಕ್ಕೆ ಅವರ ತಮ್ಮನಾದ ಕೋಮಲ್ ಕೂಡ ಆಗಮಿಸಿ, ಅವರ ಕುಟುಂಬದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

ಇನ್ನೂ ವೇದಿಕೆ ಕಾರ್ಯಕ್ರಮದಲ್ಲಿ ತುರುವೇಕೆರೆ ತಾಲೂಕಿನ ಮಾನ್ಯ ದಂಡಾಧಿಕಾರಿಯಾದ ವೈ ಎಂ ರೇಣು ಕುಮಾರ್, ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆಂಪೇಗೌಡರು, ದಾನಿಗಳಾದ ಎರನಾಲು ಗ್ರಾಮದ ಕೆಂಪನಂಜೇಗೌಡರು, ನಂಜುಂಡೇಗೌಡ, ಜವರಪ್ಪ, ಇನ್ನು ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,

ನಡೆದ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು, ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಇನ್ನು ಅನೇಕ ಊರಿನ ಸುತ್ತಮುತ್ತ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
https://youtube.com/@janataa24?si=XsFcych2GMH0O6Gv