Janataa24 NEWS DESK

ಬೆಂಗಳೂರು: ಜೆಟ್ಲಾಗ್ ಪಬ್ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ್ಕಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಲು ನಟ ದರ್ಶನ್ ಸೇರಿ ಹಲವು ನಟರಿಗೆ ನೋಟಿಸ್ ಕಳುಹಿಸಲಾಗಿತ್ತು. ನಟ ಪೊಲೀಸ್ ಠಾಣೆಗೆ ಬಂದಿದ್ದು ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಕರಣದ ಬಗ್ಗೆ ದರ್ಶನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಸುಬ್ರಮಣ್ಯ ನಗರ ಇನ್ಸ್ಪೆಕ್ಟರ್ ಸುರೇಶ್ ಅವರಿಂದ ಖುದ್ದು ವಿಚಾರಣೆ ನಡೆಯಲಿದೆ.
ವಿಚಾರಣೆ ಸಲುವಾಗಿ ಪ್ರಶ್ನಾವಳಿಗಳನ್ನು ಪೊಲೀಸರು ಸಿದ್ಧಪಡಿಸಿಕೊಂಡಿದ್ದಾರೆ. ದರ್ಶನ್ ಸೇರಿ ಎಂಟು ಮಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಿದ್ದಾರೆ ಪೊಲೀಸರು.
ಜೆಟ್ಲಾಗ್ ಪಬ್ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ನಡೆದಿದ್ದು ತಡರಾತ್ರಿವರೆಗೂ ಸೆಲೆಬ್ರೇಷನ್ ಮಾಡಿದ್ದರು. ಎಂಟು ಸೆಲೆಬ್ರಿಟಿಗಳ ವಿಚಾರಣೆಗೆ ಹದಿನೈದು ಪ್ರಶ್ನೆಗಳನ್ನ ಸಿದ್ದಪಡಿಸಿದ್ದಾರೆ ಪೊಲೀದರು.

ಎಂಟು ಮಂದಿ ವಿಚಾರಣೆಗೆ ಮೂವರು ಇನ್ಸ್ಪೆಕ್ಟರ್ ಗಳ ಟೀಂ ರೆಡಿಯಾಗಿದೆ. ಸುಬ್ರಮಣ್ಯ ನಗರ ಠಾಣೆ ಇನ್ಸ್ಪೆಕ್ಟರ್ ಸುರೇಶ್, ಶ್ರೀರಾಮಪುರ ಇನ್ಸ್ಪೆಕ್ಟರ್ ಬಾಲಕೃಷ್ಣ, ಮಲ್ಲೇಶ್ವರಂ ಇನ್ಸ್ಪೆಕ್ಟರ್ ಜಗದೀಶ್ ಅವರಿಂದ ವಿಚಾರಣೆ ನಡೆಯಲಿದೆ.
ಪೊಲೀಸ್ ಠಾಣೆ ಮುಂಭಾಗ ಬಿಗಿ ಬಂದೋಬಸ್ತ್ ಮಾಡಲಾಗಿದ್ದರೂ ದರ್ಶನ್ ಅಭಿಮಾನಿಗಳು ಕಂಪೌಂಡ್ ಮೇಲೆ ಹತ್ತಿದ್ದಾರೆ. ಅಭಿಮಾನಿಗಳನ್ನ ಚದುರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ವಿಚಾರಣೆಗೆ ಹಾಜರಾಗಲು ದರ್ಶನ್ ಬರುತ್ತಿದ್ದಂತೆ ರಸ್ತೆಯಲ್ಲಿ ದರ್ಶನ್ ಅಭಿಮಾನಿಗಳು ಜಮಾಯಿಸಿದ್ದು, ರಾಜ್ ಕುಮಾರ್ ರಸ್ತೆಯಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.
ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮುತ್ತಿಗೆ ಇಟ್ಟಿದ್ದು, ಪೊಲೀಸ್ ಠಾಣೆ ಮುಂಭಾಗದಲ್ಲಿ ಗುಂಪುಗಟ್ಟಿದ್ದಾರೆ. ಅಭಿಮಾನಿಗಳತ್ತ ಕೈ ಬೀಸಿದ ನಟ ದರ್ಶನ್ ಒಳಗೆ ಹೋಗುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ.
ನಟ ದರ್ಶನ್ ಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಖಾಕಿ ಹರಸಾಹಸ ಮಾಡಿದೆ. ಡಾ. ರಾಜ್ ಕುಮಾರ್ ರಸ್ತೆ ಕಂಪ್ಲೀಟ್ ಬ್ಲಾಕ್ ಆಗಿದ್ದು, ಪೊಲೀಸ್ ಠಾಣೆಯ ಕಂಪೌಂಡ್ ವಾಲ್ ಮೇಲೆ ಅಭಿಮಾನಿಗಳು ಹತ್ತಿ ನಿಲ್ಲುತ್ತಿದ್ದಾರೆ.
ಪೊಲೀಸ್ ಠಾಣೆ ಒಳ ಹೋದ ದರ್ಶನ್, ಅಭಿಷೇಕ್ ಅಂಬರೀಶ್, ಡಾಲಿ ಧನಂಜಯ್, ಚಿಕ್ಕಣ್ಣ, ರಾಕ್ ಲೈನ್ ವೆಂಕಟೇಶ್ ಅವರನ್ನು ಒಂದು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.