Janataa24 NEWS DESK

ಯಮಸ್ವರೂಪಿ ವೈದ್ಯನ ವಿರುದ್ಧ ಗುಡುಗಿದ ಕರುನಾಡ ವಿಜಯ ಸೇನೆ. ಮುಂದಾಗುವ ಅನಾಹುತಕ್ಕೆ ಬ್ರೇಕ್.
ವಾರಕ್ಕೆ ಎರಡು ದಿನ ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡುವೆ ಎಚ್ಚರಿಕೆ: ತಾಲೂಕು ದಂಡಾಧಿಕಾರಿ ವೈಎಂ ರೇಣು ಕುಮಾರ್.
ತುರುವೇಕೆರೆ: ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆ ವೈದ್ಯನ ಬಣ್ಣ ಬಯಲು ಮಾಡಿದ್ದ ಸುದ್ದಿ ಈ ಹಿಂದೆ ನಮ್ಮ ವಾಹಿನಿಯಲ್ಲಿ ಪ್ರಸಾರವಾಗಿತ್ತು.

ಇಂದು ಅದೇ ವೈದ್ಯ ದಂಪತಿಯ ನಿರ್ಲಕ್ಷದಿಂದ ಇಂದು ಹೆರಿಗೆಯು ಮುನ್ನವೇ ಮಗು ಸಾವನ್ನುಪ್ಪಿರುವ ಘಟನೆ ನಡೆದಿದೆ. ಎಂದು ಕುಟುಂಬಸ್ಥರು ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಮಗುವಿನ ಶವವನ್ನು ಇಟ್ಟು ಧರಣಿ ಪ್ರಾರಂಭಿಸಿದ್ದಾರೆ .

ಇವರಿಗೆ ಬೆಂಬಲವಾಗಿ ಧರಣಿಗೆ ನಿಂತ ತಾಲೂಕಿನ ಕರುನಾಡು ವಿಜಯ ಸೇನೆ ಅಧ್ಯಕ್ಷರಾದ ಸುರೇಶ್ ಇವರುಗಳ ನೇತೃತ್ವದಲ್ಲಿ ಕರುನಾಡು ವಿಜಯ ಸೇನೆ ತಂಡದೊಂದಿಗೆ ಪ್ರತಿಭಟನೆಗೆ ಕುಳಿತ ಕೆಲವೇ ಗಂಟೆಯಲ್ಲಿ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ವೈ ಎಮ್ ರೇಣು ಕುಮಾರ್ .ಜಿಲ್ಲಾ ನೋಡಲ್ ಅಧಿಕಾರಿ ಚಂದ್ರಶೇಖರ್, ಆಗಮಿಸಿ ಮಗುವಿನ ಸಾವಿಗೆ ಏನು ಕಾರಣವೆಂಬುದು ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ಆತನನ್ನು ವರ್ಗಾವಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೆ ಮಗುವನ್ನು ಕಳೆದುಕೊಂಡ ತಂದೆ ತಾಯಿಯ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ,ಆಗಿರುವ ಘಟನೆಯ ಬಗ್ಗೆ ಮಗುವಿನ ತಂದೆಯಾದ ಲಿಂಗರಾಜು ,ನಮ್ಮ ಸುದ್ದಿ ವಾಹಿಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದೇ ವೇಳೆ ತಾಲೂಕು ಕರುನಾಡು ವಿಜಯ ಸೇನೆಯ ಪದಾಧಿಕಾರಿಗಳಾದ ಮುನಿಯೂರು ಮಂಜು (ಕರುನಾಡು ವಿಜಯ ಸೇನೆ ಯುವ ಘಟಕದ ಅಧ್ಯಕ್ಷ ),ಮಾರಪ್ಪನಹಳ್ಳಿ ಲೋಕೇಶ್. ಕೃಷ್ಣಮೂರ್ತಿ, ವೆಂಕಟೇಶ್, ಮುನಿಯಪ್ಪ, ಚಾಲಕರ ಸಂಘದ ಅಧ್ಯಕ್ಷ ಗಂಗಣ್ಣ, ತಾಲೂಕು ಆರ್‌ಟಿಐ ಕಾರ್ಯಕರ್ತ ದೊರೆಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ, ಬಾಬು, ಇನ್ನು ಅನೇಕ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ
ತುರುವೇಕೆರೆ: ಮಂಜುನಾಥ್