Document

ಕವಿ ಕೆ. ಎಸ್. ನ. ಅವರಿಗೆ ದೊರೆತ ಗೌರವ : ದುರಸ್ಥಿ ಗೊಂಡ ಕಿಕ್ಕೇರಿ ನಾಮಫಲಕ, ಕವಿಗಳ ಮನೆಗೆ ಬೇಕಿದೆ ಪುನಶ್ಚೇತನ.

Janataa24 NEWS DESK

IMG 20230707 WA0003



ಪ್ರೇಮಕವಿ ಕೆ. ಎಸ್. ನ. ಅವರ ಜನ್ಮಸ್ಥಳ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕ್ಕಿನ ಕಿಕ್ಕೇರಿ ಗ್ರಾಮದ ಸ್ವಾಗತ ಪ ಲಕದಲ್ಲಿ ಕೆ. ಎಸ್. ನ. ಹುಟ್ಟೂ ರಿಗೆ ಸ್ವಾಗತ ಎಂಬ ಅಕ್ಷರಗಳನ್ನು ಅಳವಡಿಸಲಾಗಿತ್ತು. ಇತ್ತೀಚಿಗೆ ಈ ಸ್ವಾಗತ ಪಲಕವು ತನ್ನ
ಹೊಳಪು ಕಳೆದುಕೊಂಡು ವಿನಾಶದ ಅಂಚು ತಲುಪಿತ್ತು.

IMG 20230707 WA0002

ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಸರ್ಕಾರಕ್ಕೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗೆ ದೂರು ನೀಡಿದ್ದರು.



ಕಿಕ್ಕೇರಿ ಗ್ರಾಮದ ಸ್ವಾಗತ ಪಲಕ ಮುರಿದು ಬೀಳುವ ಹಂತ ತಲುಪಿದೆ. ಕೆ. ಎಸ್. ನ. ತವರಿಗೆ ಸ್ವಾಗತ ಎನ್ನುವ ಪದಗಳು ಕೂಡ ಅಳಿಸಿ ಹೋಗಿವೆ. ಇದು ಪ್ರೇಮ ಕವಿಗೆ ಮಾಡುತಿರುವ ಅವಮಾನ. ಇದನ್ನು ಕೂಡಲೇ ಸರಿ ಪಡಿಸಲು ಬೇಕೆಂದು ಒತ್ತಾಯ ಮಾಡಿದ್ದರು.



ಈ ದೂರಿನ ಪಲವಾಗಿ ಸದರಿ ನಾಮಫಲಕದ ದುರಸ್ಥಿ ಆಗಿದೆ. ಪ್ರೇಮ ಕವಿ ಕೆ. ಎಸ್. ನ. ಅವರಿಗೆ ಉಂಟಾಗಿದ್ದ ಅವಮಾನ ನಿವಾರಣೆ ಆಗಿದೆ ಎಂದು ಸಾಹಿತಿ ಭೇರ್ಯ ರಾಮ ಕುಮಾರ್ ಸಂತಸ ವ್ಯಕ್ತ ಪಡಿಸಿದ್ದಾರೆ.

ಕೆ. ಎಸ್. ನ. ಅವರು ಜನಿಸಿದ ಮನೆ ಇದೀಗ ವಿನಾಶದ ಅಂಚಿನಲ್ಲಿ ಇದೆ. ಅವರ ಪೂರ್ವಿಕರ ಮನೆಯ ಗೋಡೆಗಳು ಶಿಥಿ ಲಗೊಂಡಿವೆ. ಈ ಮನೆಯ ರಕ್ಷಣೆಗೆ ಕನ್ನಡ ಸಂಸ್ಕೃತಿ ಇಲಾಖೆ ಕೂಡಲೇ ಕ್ರಮ ಕ್ಯೆಗೊಳ್ಳಬೇಕು. ಸದರಿ ಮನೆ ಇದೀಗ ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಅದನ್ನು ಅವರಿಂದ ಖರೀದಿ ಮಾಡಿ ರಾಜ್ಯ ಸರ್ಕಾರವು ಅದ್ದನ್ನು ಕೆ. ಎಸ್. ನ. ನೆನಪಿನ ಸ್ಮಾರಕ ವಾಗಿ ಪರಿವರ್ತಸಬೇಕು ಎಂದು ಭೇರ್ಯ ರಾಮಕುಮಾರ್ ರಾಜ್ಯಸರ್ಕಾರ ವನ್ನು ಒತ್ತಾ ಯಿಸಿದ್ದಾರೆ.

IMG 20230707 WA0004



ಕೆ. ಎಸ್. ನ. ಅವರು ಜನಿಸಿದ ಮನೆಯ ರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಸೂಕ್ತ ಕ್ರಮ ಕ್ಯೆಗೊಳ್ಳಬೇಕು. ಈ ವರ್ಷ ಮಂಡ್ಯದಲ್ಲಿ ನಡೆಯುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕ್ಯೆಗೊಳ್ಳಬೇಕು ಎಂದು ಸಾಹಿತಿ ಭೇರ್ಯ ರಾಮಕುಮಾರ್ ಆಗ್ರಹ ಪಡಿಸಿದ್ದಾರೆ.

IMG 20230707 WA0005

Document

Leave a Reply

Your email address will not be published. Required fields are marked *