Document

Turuvekere: ಸರ್ಕಾರಿ ಶಾಲೆಯಲ್ಲಿ ಪರಿಸರ ದಿನವನ್ನು ಆಚರಿಸಿದ ಧರ್ಮಸ್ಥಳ ಟ್ರಸ್ಟ್.

Turuvekere,

 

ತುರುವೇಕೆರೆ: ತಾಲೂಕಿನಲ್ಲಿ ತಂಡಗ, ವಲಯ ಮತ್ತು ಕಸಬಾ, ಬಿ , ವಲಯಗಳು ಜೊತೆಗೂಡಿ, ಕಣತೂರು ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ ಪರಿಸರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಇದೆ ವೇಳೆ ಶಾಲಾ ಮಕ್ಕಳ ಕೈಯಲ್ಲಿ ಶಾಲಾ ಆವರಣದಲ್ಲೇ ಸುಮಾರು ನೂರಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಡಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

 

 

ಈ ಪರಿಸರ ಕಾರ್ಯಕ್ರಮವನ್ನು ಉದ್ದೇಶಿಸಿ ಊರಿನ ಗಣ್ಯ ಮುಖಂಡರಾದ ರಾಮಸ್ವಾಮಿ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತುಂಬಾ ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಮಾಡುತ್ತಿದೆ, ಹಾಗೂ ಪ್ರತಿಯೊಂದು ಕಾರ್ಯಕ್ರಮವು ಜನರಿಗೆ ಮನಮುಟ್ಟುವಂತಿದೆ ಜೊತೆಗೆ ಪರಿಸರವನ್ನು ಉಳಿಸುವ ಜವಾಬ್ದಾರಿಯನ್ನು ಇಂತಹ ಸಂಘ ಸಂಸ್ಥೆಗಳು ಮಾಡುತ್ತಿರುವಾಗ ನಾವೆಲ್ಲರೂ ಅವರೊಂದಿಗೆ ಕೈ ಜೋಡಿಸಿ ನಾವು ಸಹ ಪರಿಸರದ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಬೇಕು ಎಂದು ಸಲಹೆ ನೀಡಿದರು.

 

 

ಇದೆ ವೇಳೆ ಕಣತೂರು ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಯರಾದ ಸೋಮಶೇಖರ್ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ, ಪ್ರತಿಯೊಂದು ಕಾರ್ಯಕ್ರಮವು ಶ್ಲಾಘನೀಯವಾಗಿದೆ, ಹಾಗೂ ಪರಿಸರವನ್ನು ಉಳಿಸುವ ಜವಾಬ್ದಾರಿಯನ್ನು ಇಂತಹ ಸಂಸ್ಥೆಯೊಂದಿಗೆ ಸೇರಿಕೊಂಡು ನಾವು ಮಾಡಬೇಕಾಗಿದೆ” ಜೊತೆಗೆ ಸರ್ಕಾರದಿಂದ ಮಾಡುವಂತಹ ಅಭಿವೃದ್ಧಿ ಯೋಜನೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಡಲಾಗುತ್ತಿದ್ದು, ನಮ್ಮ ತಾಲೂಕಿನ ಪ್ರತಿಯೊಂದು ಗ್ರಾಮವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಯಾವುದೇ ಅಡಚಣೆ ಗಳಿಲ್ಲದೆ ನೆರವೇರಿಸುತ್ತಾ ಬಂದಿದೆ, ಇಂತಹ ಕಾರ್ಯಗಳು ಇಡೀ ಪ್ರಪಂಚದಲ್ಲೇ ಪಸರಿಸಲಿ ಎಂದು ಅವರ ಮಾತಿಗೆ ಅಂತ್ಯವಾಡಿದರು.

 

 

ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರು ,ಗುಡಿಗೌಡರು, ಪಂಚಾಯತಿ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು ,ಶಿಕ್ಷಕ ವೃಂದದವರು, ಶಾಲಾ ವಿದ್ಯಾರ್ಥಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ಚಂದ್ರಕಲಾ, ಕವಿತಾ, ಶಾಂತಮ್ಮರವರು ಹಾಗೂ ಪ್ರಗತಿ ಬಂದು ಸದಸ್ಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ತಾಲೂಕಿನ ಕೃಷಿ ಮೇಲ್ವಿಚಾರಕರಾದ ದಿನೇಶ್‍ರವರು ಕಾರ್ಯಕ್ರಮವನ್ನು ನಿರೂಪಿಸಿದರು. ವಲಯ ಮೇಲ್ವಿಚಾರಕರಾದ ಭಾಗ್ಯಲಕ್ಷ್ಮಿ ಅವರು ಸ್ವಾಗತಿಸಿ, ಮೇಲ್ವಿಚಾರಕರಾದ ಅರುಣ್ ರವರು ಧನ್ಯವಾದ ಹೇಳಿ ಇತಿಶ್ರೀ ಹಾಡಿದರು.

 

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

https://youtube.com/@janataa24?si=XsFcych2GMH0O6Gv

 

https://www.janataa24.com/turuvekere-departmental-officers-are-absent/

Document

Leave a Reply

Your email address will not be published. Required fields are marked *