Document

ಶ್ರೀ ವೆಂಕಟೇಶ್ವರ ಎಜುಕೇಶನ್ ಟ್ರಸ್ಟ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

Janataa24 NEWS DESK

IMG 20230815 WA0092

ಪಾವಗಡ: ಶ್ರೀ ವೆಂಕಟೇಶ್ವರ ಎಜುಕೇಷನಲ್ ಟ್ರಸ್ಟ್ (ರಿ) ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕಾರ್ಯದರ್ಶಿ ಹೆಚ್.ವಿ.ಕುಮಾರಸ್ವಾಮಿ 50 ನೇ ಹುಟ್ಟು ಹಬ್ಬವನ್ನು ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢ ಶಾಲೆ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯದರ್ಶಿಗಳಾದ ಚಿತ್ರದುರ್ಗ ಲೋಕಸಭೆಯ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಹೆಚ್.ವಿ.ಕುಮಾರಸ್ವಾಮಿ ಮಾತನಾಡುತ್ತಾ ಇಂದು ನಮ್ಮ ದೇಶ ಸಂತೋಷ ಸಡಗರದಿಂದ ರಾಷ್ಟೀಯ ಹಬ್ಬವನ್ನು ಆಚರಿಸುತ್ತಿದ್ದೆವೆ.

IMG 20230815 WA0093

ಇಂತಹ ಮಹತ್ವದ ದಿನ ನಾನು ಹುಟ್ಟಿರುವುದು ನನಗೆ ತುಂಬಾ ಸಂತೋಷ ತಂದಿರುತ್ತದೆ. ಈ ಬಾರಿ ನಮ್ಮ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಅಪಾರ ಬೆಂಬಲಿಗರ ಬಳಗ ಒತ್ತಾಯದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ದೇಶ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದಿದೆ 1947 ರಲ್ಲಿ ಅನೇಕ ಹಿರಿಯರು ಹೋರಾಟದ ಫಲ ನಮಗೆ ಸ್ವಾತಂತ್ರ್ಯ ಲಭಿಸಿದೆ. 3 ಶತಮಾನಗಳ ಕಾಲ ಬ್ರಿಟಿಷರು ನಮ್ಮನ್ನು ಆಳಿದರು. ಆಗಸ್ಟ್ 15 ರಂದು 1947 ರಂದು ನಮಗೆ ಸ್ವಾತಂತ್ರ್ಯ ಬಂದಿರುತ್ತದೆ. ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಏನು ಇರಲಿಲ್ಲ. ಹಲವು ಕಡೆ ಇನ್ನು ರಾಜರ ಆಳ್ವಿಕೆ ಇತ್ತು. ಅಂದು ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್ ಪಕ್ಷ ಎಲ್ಲಾ ರಾಜರನ್ನು ಒಗ್ಗೂಡಿಸಿ ಭಾರತಾಂಬೆಯ ಮಡಿಲಲ್ಲಿ ಸೇರಿಸಿ ಭಾರತ ಎಂಬುವ ಭವ್ಯ ರಾಷ್ಟವನ್ನು ಕಟ್ಟಿದರು. 193 ದೇಶಗಳ ಪೈಕಿ ನಮ್ಮ ದೇಶ ಒಂದು 5ನೇ ಸ್ಥಾನದಲ್ಲಿದೆ. ಈ ಮಟ್ಟಕ್ಕೆ ನಮ್ಮ ದೇಶ ಮುಂದುವರೆಯಲು ಜವಹಾರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಇನ್ನಿತರೆ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ನಾಯಕರು ನಮ್ಮ ದೇಶವನ್ನು ಬಲಿಷ್ಠ ದೇಶವನ್ನಾಗಿ ಮುನ್ನಡೆಸುತ್ತಿದ್ದಾರೆ. ನನ್ನ ಜನ್ಮದಿನದ ಪ್ರಯುಕ್ತ ಹಲವು ಯುವಕರು ರಕ್ತದಾನ ಮಾಡಿದ ಎಲ್ಲಾ ಅಭಿಮಾನಿಗಳಿಗೂ ಹಾಗೂ ಸ್ನೇಹಿತರಿಗೆ ಧನ್ಯವಾದಗಳು ಎಂದು ತಿಳಿಸಿದರು.

IMG 20230815 WA0091



ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಈ ಭಾಗದ ಜನರ ಆಶೀರ್ವಾದದಿಂದ 2 ಬಾರಿ ಸಚಿವನಾಗಿ 5 ಬಾರಿ ಶಾಸಕರಾಗಿ ಮಾಡಿದ ಋಣವನ್ನು ತೀರಿಸುತ್ತಾ ನನ್ನ ಕಿರಿಯ ಮಗ ಹೆಚ್.ವಿ.ವೆಂಕಟೇಶ್ ಅವರನ್ನು ನನ್ನ ರೀತಿಯಲ್ಲಿಯೇ ಆಶೀರ್ವಾದ ಮಾಡಿ ಗೆಲ್ಲಿಸಿದಂತಹ ನಿಮಗೆ ಚಿರಋಣಿಯಾಗಿರುತ್ತೇನೆ. ನಾನು ರಾಜಕೀಯದಿಂದ ಮಾತ್ರ ನಿವೃತ್ತ ಹೊಂದಿದ್ದೆನೆ ಹೊರತು ಜನಸೇವೆಯಲ್ಲಿ ನಿವೃತ್ತಿ ಹೊಂದಿಲ್ಲ. ಸದಾ ತಾಲ್ಲೂಕಿನ ಅಭಿವೃದ್ಧಿಗೆ ಮುಂಚೂಣಿಯಲ್ಲಿರುತ್ತೇನೆ ಎಂದರು.
ಜನಸೇವೆಯೇ ಜನಾರ್ಧನ ಸೇವೆ 2008 ರಲ್ಲಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೂ ತಾಲ್ಲೂಕಿನ ಜನತೆ 15 ಸಾವಿರ ಮತಗಳ ಅಂತರದಿAದ ಗೆಲ್ಲಿಸಿ ಕಳುಹಿಸಿದರು ಆದುದರಿಂದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

IMG 20230815 WA0094



ಈ ಸಂದರ್ಭದಲ್ಲಿ ಶಾಸಕ ಹೆಚ್.ವಿ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಪುರಸಭೆ ಸದಸ್ಯರಾದ ಪಿ.ಹೆಚ್.ರಾಜೇಶ್, ತೆಂಗಿನಕಾಯಿ ರವಿ, ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶೇಷಗಿರಿ, ಕಾಂಗ್ರೆಸ್ ಮುಖಂಡ ನಾನಿ, ಕೋಟೆ ಪ್ರಭಾಕರ್, ಸುಜೀತ್, ಮತ್ತು ಹಲವು ಮುಖಂಡರುಗಳು ಭಾಗವಹಿಸಿದ್ದರು.

IMG 20230815 WA0096

ವರದಿ

ಪಾವಗಡ: ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *