
ತುರುವೇಕೆರೆ: ಮಂಜುನಾಥ್

ಈ ಕಾರ್ಯಕ್ರಮಕ್ಕೆ ತಾಲೂಕಿನ ಶಾಸಕರು ಆಗಮಿಸುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ,ಮತ್ತು ಬಿಜೆಪಿ ಕಾರ್ಯಕರ್ತರುಗಳು, ಶೆಟ್ಟಿಗೊಂಡನಹಳ್ಳಿ ವೃತ್ತದಲ್ಲಿ ,ಬೃಹತ್ ಆಕಾರದ ಕೊಬ್ಬರಿ ಹಾರವನ್ನು ಹಾಕಿ, ಶಾಸಕರಿಗೆ ಹೂವಿನ ಮಳೆಗೈದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಸಾಲ ಜಯರಾಮ್ ಮಾತನಾಡಿ, ಈ ಹಿಂದೆ ಇದ್ದಂತ ಮಾಜಿ ಶಾಸಕರಿಗೆ

ಮಾಜಿ ಶಾಸಕರೇ ದಯಮಾಡಿ ಸುಳ್ಳು , ಹೇಳುವುದನ್ನು ನಿಲ್ಲಿಸಿ,
ನೀವು ಈ ಹಿಂದೆ 15 ವರ್ಷ ಶಾಸಕರಾಗಿದ್ದೀರಿ ಆಗ ಯಾಕೆ ಈ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ನೀವು ಯಾಕೆ ಮಾಡಲಿಲ್ಲ
ಅರ್ಧ ರಾತ್ರಿಯಲ್ಲಿ ಹೇಮಾವತಿ ನೀರಿಗಾಗಿ ನಮ್ಮ ತಾಲೂಕಿನ ಒಂದು ಹಳ್ಳಿಯಲ್ಲಿ ಗಲಾಟೆಯಾದಾಗ ಅರ್ಧ ರಾತ್ರಿ 2 ಗಂಟೆಯಾದರೂ ಕೂಡ ಆ ಸ್ಥಳಕ್ಕೆ ಹೋಗಿ, ಆ ಜಗಳವನ್ನು ಬಿಡಿಸಿ ಈ ತಾಲೂಕಿಗೆ ನೀರು ಹರಿಸಲು ಎಷ್ಟು ಹೋರಾಟ ಮಾಡಿದ್ದೇವೆ ಎಂಬುದು ನಮ್ಮ ಶ್ರಮ ನಿಮಗೆ ಗೊತ್ತಿಲ್ಲ ,
ನೀವು ನೋಡಿದರೆ ನಮ್ಮ ಅವಧಿಯಲ್ಲಿ ಕೆಲಸ ಆಗಿದೆ ಎಂದು ಹೇಳುತ್ತಿದ್ದೀರಾ, ನಮ್ಮ ತಾಲೂಕಿಗೆ ಹೇಮಾವತಿ ನೀರು ಹರಿಸಲು ಮುಖ್ಯ ಕಾರಣ ಯಾರೆಂಬುದು ನಿಮಗೆ ಗೊತ್ತಿದೆಯೇ ,ಸುಮ್ಮನೆ ನಾವು ಮಾಡಿದ್ದು ನಾವು ಮಾಡಿದ್ದು ಎಂದು ಹೇಳುತ್ತೀರಾ ,ಇದಕ್ಕೆ ಕಾರಣರಾದವರು ನಮ್ಮ ನಾಯಕರಾದ ಸದಾನಂದ ಗೌಡ ಎಂಬುದು ತಿಳಿದಿದೆಯೇ.

ನಿಮಗೆ ನಾಲಿಗೆಗೂ ಮೆದುಳಿಗೂ ಲಿಂಕ್ ತಪ್ಪಿ ಹೋಗಿದೆ ಎಂದು ಮಾಜಿ ಶಾಸಕರ ವಿರುದ್ಧ ಹರಿಹಾಯಿದರು,
ಈ ಹಿಂದೆ ಇದ್ದಂತಹ ನಿಮ್ಮ ಕಾರ್ಯಕರ್ತರಾಗಿ ದುಡಿದ 39 ಜನರ ಮೇಲೆ ರೌಡಿಶೀಟರ್ ಮಾಡಿಸಿದ್ದೀರಾ, ಇವೆಲ್ಲವೂ ನಿಮ್ಮ ಅಭಿವೃದ್ಧಿ ಕೆಲಸಗಳು ಎಂದು ಗುಡುಗಿದರು.

ಇನ್ನು ಕಾರ್ಯಕರ್ತರಿಗೆ ಚುನಾವಣಾ ಪ್ರಚಾರ ಎಂದು ತಿಳಿದುಕೊಂಡು ನೀವು ತಯಾರಾಗಿ, ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಐವತ್ತಕ್ಕೂ ಹೆಚ್ಚು ಮತಗಳು ಹೆಚ್ಚುವರಿಯನ್ನು ಕಾಯ್ದುಕೊಳ್ಳಿ, ಪ್ರಧಾನಿ ಮೋದಿ ಅವರ ಕೃಪೆಯಿಂದ ನಾವು ನೀವು ನೆಮ್ಮದಿ ಜೀವನ ನಡೆಸುತ್ತಿದ್ದೇವೆ, ಇದರಲ್ಲಿ ಮೋದಿ ಅವರ ಪಾತ್ರ ಬಹಳ ದೊಡ್ಡದು ಕಾರ್ಯಕರ್ತರು ರೆಡಿ ಇರಿ ಎಂದು ಶಾಸಕರು ಕಾರ್ಯಕರ್ತರಿಗೆ ಕರೆ ನೀಡಿದರು.

ಮುಂದುವರೆದು ಮಾತನಾಡಿ ತುರುವೇಕೆರೆ ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಹೋಗಿ ಒಮ್ಮೆ ನೋಡಿ, ಮಾಜಿ ಶಾಸಕರೇ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ತಕ್ಕ ಉತ್ತರ ನೀಡುತ್ತಿದ್ದು, ನಮ್ಮ ತಾಲೂಕಿಗಾಗಿ ಅತಿ ಹೆಚ್ಚು ಅನುದಾನವನ್ನು ಬಳಕೆ ಮಾಡಿರುತ್ತೇನೆ, ಇಡೀ ಕ್ಷೇತ್ರಕ್ಕೆ ಹಾಗೂ ತಾಲೂಕಿಗೆ 1600 ಕೋಟಿಗಳ ಅನುದಾನವನ್ನು ತಂದು ಬಳಕೆ ಮಾಡಿ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದ್ದೇನೆ,
ಇನ್ನು 100 ಕೋಟಿ ಅನುದಾನವನ್ನು ತಂದು ನಮ್ಮ ತಾಲೂಕಿನ ಅಭಿವೃದ್ಧಿಗಾಗಿ ಮೀಸಲಿಟ್ಟು ಕೆಲಸವನ್ನು ಕೂಡ ಆರಂಭ ಮಾಡುತ್ತೇನೆ ,ಜೊತೆಗೆ ನಿಮ್ಮ ಅವಧಿಯಲ್ಲಿ ಮಾಡಿರುವ ಗಲೀಜನ್ನು ತೊಳೆಯಲು ಬಂದಿದ್ದೇನೆ, ನಾನು ಇಲ್ಲಿಗೆ ರಾಜಕಾರಣಕ್ಕಾಗಿ ಬಂದವನಲ್ಲ ,ಹಾಗೂ ಹಣ ಮಾಡಲು ಬಂದವನಲ್ಲ, ಅದರ ಅವಶ್ಯಕತೆಯೂ ಇಲ್ಲ ,ತಾಲೂಕಿಗೆ 2800 ಟಿಸಿ ಸುಮಾರು 35 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರು ಮಾಡಿಸಿದ್ದೇನೆ,
ಇನ್ನೇನು ಕೆಲವೇ ದಿನದಲ್ಲಿ ಟಿಸಿಗಳನ್ನು ರೈತರಿಗೆ ತಲುಪಿಸಲಿದ್ದೇವೆ ,ಒಟ್ಟಾರೆ ನಮ್ಮ ತಾಲೂಕಿಗೆ ಅಭಿವೃದ್ಧಿ ಕೆಲಸ ಆಗಲು ನನ್ನ ಬೆನ್ನೆಲುಬಾಗಿ ನಿಂತ ಮಾಜಿ ಉಸ್ತುವಾರಿ ಸಚಿವರಾದ ಮಾಧುಸ್ವಾಮಿಯವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು,
ಜೊತೆಗೆ ಇದೇ ತಿಂಗಳು 21 ನೇ ತಾರೀಕು ಬೆಳಿಗ್ಗೆ 11 ಗಂಟೆಗೆ ತಾಲೂಕಿಗೆ ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದ್ದು ,ಈ ಯಾತ್ರೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಆಗಮಿಸುವರು, ಹಾಗಾಗಿ ದಯಮಾಡಿ ಎಲ್ಲಾ ಕಾರ್ಯಕರ್ತರು ಆಗಮಿಸಿ, ಮಾಜಿ ಮುಖ್ಯಮಂತ್ರಿಗಳನ್ನ ತಾಲೂಕಿಗೆ ಸ್ವಾಗತಿಸಿ ವಿಜಯ ಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು


ಈ ಸಂದರ್ಭದಲ್ಲಿ ಹಾಲಿ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ,ಲಕ್ಷ್ಮಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಣ್ಣ, ಕಡೆಹಳ್ಳಿ ಸಿದ್ದೇಗೌಡ, ಕೊಂಡಜ್ಜಿ ವಿಶ್ವನಾಥ್, ವಕೀಲ ಮುದ್ದೇಗೌಡ, ಗಿರೀಶ್ ,ಬ್ಯಾಟರಂಗೆ ಗೌಡ, ಗಂಗಾಧರ್, ರಮೇಶ್, ಚಿಕ್ಕಯ್ಯ ,ಗುತ್ತಿಗೆದಾರರಾದ ಗಂಗಾಧರ್ ,ತಿಮ್ಮರಾಜು, ಎಪಿಎಂಸಿ ಕಾಂತರಾಜು, ಯಶೋಧರ್ ,ರಹಮತ್ತು, ಪ್ರಕಾಶ್ ,ಮತ್ತಿತರರು ಹಾಜರಿದ್ದರು.
